ಕೊಡಗಲಿ ಮೊಳಗಿದ ಕನ್ನಡ ದುಂದುಭಿ
ಕಡುಗಲಿ ಕೊಡವರ ಕನ್ನಡ ಕಲರವ
ಕೋವಿಯ ಗುಡುಗಿಸಿ ವೈರಿಯ ನಡುಗಿಸಿ
ಕದನದಿ ದಣಿಯದ ಕಡುಗಲಿ ಕೊಡವರ
ಸಿಂಹದ ನಾದದ ವಿಜಯದ ಘೋಷದಿ
ಕನ್ನಡ ಕಾವ್ಯದ ಕಹಳೆಯ ಮೊರೆತ
ಕಾವೇರಿ ಕಣಿವೆಯ ಪುಣ್ಯದ ಮಕ್ಕಳು
ಭಾರತ ಮಾತೆಯ ಹೆಮ್ಮೆಯ ಕಲಿಗಳು
ಕನ್ನಡ ನಾಡಿನ ಹಮ್ಮೀರ ಪುತ್ರರು
ನಮ್ಮಯ ಕೊಡಗಿನ ಕನ್ನಡ ವೀರರು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!