ಕಚಗುಳಿಗೆಗೆ ಕೆಲವು ಪುರುಷ ಛೇಡನೆಯ ಚುಟುಕಗಳನ್ನು ಸೇರಿಸಲೆಂದು ಯತ್ನಿಸಿದಾಗ ಹೊರಬಿದ್ದ ಪುಟಾಣಿಗಳಿವು. ಯಥಾ ರೀತಿ ದೃಷ್ಟಿಬೊಟ್ಟಿಗೆಂದು ಕೊನೆಯಲ್ಲಿ ಬೇರೆಯ ಚುಟುಕ ಸೇರಿದೆ. ಮೆಲುವಾಗಿ ಕಚಗುಳಿ ಇಡಬಹುದೆಂಬ ಆಶಯದಲ್ಲಿ ತಮ್ಮ ಮುಂದೆ ಮತ್ತೊಂದು ಪುಟ್ಟ 'ಟೈಮ್ಪಾಸ್' :-)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
೦೧. ಶರಣಾಗತಿ !
____________
ಹೆಂಡತಿ
ಮಾಡಿಡುತ್ತಿದ್ದರೆ
ರುಚಿಕಟ್ಟಾದ
ಅಡಿಗೆ,
ದುಸರಾ
ಮಾತಿಲ್ಲದೆ
ಪತಿರಾಯ
ಪಾದ'ದಡಿಗೆ' !
೦೨. ಗಂಡೋದರ
__________
ನೋಡಿದರೆ
ಸಾಕು
ಗಂಡಸರ ಹೊಟ್ಟೆ,
ನೆನಪಾಗುವುದು
ಪರಲೋಕದ
ಹಾರುವ
ತಟ್ಟೆ !
೦೩. ಗಂಡು 'ಭೂಗೋಳ'
_______________
ಗರ್ಭಿಣಿಯರ ಹೊಟ್ಟೆ -
ಪ್ರಸವ ನಂತರ
ಸಮತಟ್ಟ ;
ಗಂಡಸರ ಹೊಟ್ಟೆ
ಗರ್ಭ ಧರಿಸದೆಯೂ
ಕಿರು ಬೆಟ್ಟ ||
೦೪. ನೆನಪಿನ ಶಕ್ತಿ !
____________
ಕೇಳಿದ್ದು
ತಂದುಕೊಡುವ
ಗಂಡಸರಲ್ಲಿ
ಬಲು ಕಮ್ಮಿ;
ಬೇಕೆಂದು
ಲಿಸ್ಟು ಕೊಡುವ
ಹೆಂಗಸರಲಿ
ಜಾಸ್ತಿ ||
೦೫. ಕುತ್ತಿಗೆ 'ಮಾಯ'
______________
ಬಿಡು ಪ್ರಿಯೆ
ನಿನಗೇಕೆ
ಕುತ್ತಿಗೆಗೆ ಸರ
ಈಗಲ್ಲುಳಿದಿರುವುದು
ಬರೀ
ಕತ್ತಿಲ್ಲದ ಶಿರ !
ಪ್ರತಿಕ್ರಿಯೆ (1)
ಕಚಗುಳಿಗೆಗಳ ಸರಣಿ ಸುಂದರವಾಗಿ ಚಿಚ್ಚಿಕೊಳ್ಳುತ್ತ ಸಾಗಿದೆ, ಓದುಗರಿಗಂತೂ ಭರ್ಪೂರ ಮನರಂಜನೆ, ಆದರೆ ಯಾಕೆ ಸ್ವಾಮಿ ನಿಮಗೆ ಈ ಪುರುಷ ದ್ವೇಷ? ಬರ ಬರುತ್ತ ಸ್ತ್ರೀವಾದಿಗಳಾಗುತ್ತಿದ್ದೀರಿ ಎನ್ನುವ ಸಂಶಯ ನಮ್ಮನ್ನು ಕಾಡುತ್ತಿದೆ, ಪರಕಾಯ ಪ್ರವೇಶಕ್ಕೆ ಮತ್ತು ಅಭಿವ್ಯಕ್ತಿ ಕ್ರಮಕ್ಕೆ ಧನ್ಯವಾದಗಳು.
ಈಚೆಗೆ ಸಂಪದದಲ್ಲಿ ಮಹಿಳಾ ಸಂಪದಿಗರ ಬರಹಗಳು ಹೆಚ್ಚೆಚು ಕಾಣಿಸುತ್ತಿಲ್ಲ. ಹೀಗೆ ಬರೆದರಾದರೂ ಪ್ರೇರಿತರಾಗಿ ಬರಹದ ರೂಪದಲ್ಲೊ, ಪ್ರತಿಕ್ರಿಯೆಯ ರೂಪದಲ್ಲೊ ಹೆಚ್ಚು ಸಕ್ರೀಯರಾಗಲಿ ಅನ್ನುವ ದೂರದಾಸೆ ಎನ್ನನಹುದೆ ? :-)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು