ಒಬ್ಬ ರೈತ ತನ್ನ ಹೊಲದಲ್ಲಿ ಹೊಸದಾಗಿ ದ್ರಾಕ್ಷಿ ಹಣ್ಣನ್ನು ಬೆಳಿಸಿದ್ದ. ತನ್ನ ಜಮೀನಿನಲ್ಲಿ ಬಿಟ್ಟ ಮೊದಲ ಫಲವನ್ನು ತಮ್ಮನ್ನಾಳುವ ಅರಸನಿಗೆ ಕೊಡಬೇಕೆಂಬುದು ಆ ದೇಶದ ಸಂಪ್ರದಾಯ. ಅದರಂತೆ, ಆ ರೈತ ಒಂದಷ್ಟು ಹಣ್ಣುಗಳನ್ನು ತೆಗೆದುಕೊಂಡು ಹೋಗಿ ರಾಜನಿಗೆ ಸಮರ್ಪಿಸಿದ. ಹಣ್ಣನ್ನು ತಿಂದ ರಾಜ ಕೆಂಡಾಮಂಡಲವಾದ; ಏಕೆಂದರೆ ಆ ಹಣ್ಣು ಬಹಳ ಹುಳಿಯಾಗಿತ್ತು.  ಇದಕ್ಕೆ ಕಾರಣ ಆ ರೈತನ ಹೊಲದ ಮಣ್ಣಿನಲ್ಲಿ ಸವಳು ಅಂದರೆ ಉಪ್ಪಿನ ಅಂಶ ಹೆಚ್ಚಾಗಿತ್ತು. ಕುಪಿತಗೊಂಡ ರಾಜ ತಕ್ಷಣವೇ, ತನ್ನ ಸೇವಕರಿಗೆ  ಆಜ್ಞಾಪಿಸಿದ, "ಇಂಥ ಹಣ್ಣನ್ನು ತಂದು ಕೊಟ್ಟ ಆ ರೈತನ ಗುದದ್ವಾರದಲ್ಲಿ ಆ ಹಣ್ಣುಗಳನ್ನು ತುರುಕಿ". ಇನ್ನೇನು ಆ ಶಿಕ್ಷೆಯನ್ನು ಅಮಲು ಮಾಡಬೇಕು, ಅಷ್ಟರಲ್ಲಿ ಆ ರೈತ ಪೆಕ-ಪೆಕನೆ ಬಿದ್ದು ಬಿದ್ದು ನಗಲಾರಂಭಿಸಿದ. ಇದರಿಂದ, ಆಶ್ಚರ್ಯಚಕಿತನಾದ ರಾಜನು, ಅವನ ನಗುವಿಗೆ ಕಾರಣವೇನೆಂದು ಕೇಳಿದ. ಆಗ ಆ ರೈತ ಹೇಳಿದ, "ಮಹಾಸ್ವಾಮಿ, ಅಲ್ಲಿ ಅನಾನಸ್ ಹಣ್ಣು ಹಿಡಿದುಕೊಂಡು ನಿಂತಿದ್ದಾನಲ್ಲ ಅವನು ಕೂಡ ಆ ಹಣ್ಣನ್ನು ನನ್ನ ಸವಳು ಹೊಲದ ಪಕ್ಕದ ಹೊಲದಲ್ಲೇ ಬೆಳೆದದ್ದು, ಅದಕ್ಕೇ ಅವನ ಪರಿಸ್ಥಿತಿಯನ್ನು ನೆನೆಸಿಕೊಂಡು ನಗು ಬಂತು!"  

(ಬಹುಶಃ ಇದನ್ನು ಪ. ರಾಮಕೃಷ್ಣ ಶಾಸ್ತ್ರಿಯವರು ೭೦ ದಶಕದಲ್ಲಿ ಕರ್ಮವೀರದಲ್ಲಿ ಪ್ರಕಟಿಸಿದ್ದಂತೆ ನೆನಪು)