ಮನದ ಕೊಳದಲ್ಲಿ,ತಿಳಿನೀರ ಶಾಂತತೆಯಿಂದ
ನೆನಪಿನ ತಾವರೆಯೊಂದರಳಿ ಪದ್ಯವಾಯಿತಂದು
ಚೆಲ್ಲಿತು ಆನಂದದ ಕಂಪನ್ನು ಕೊಳದಲ್ಲೆಲ್ಲಾ
ತೂರಿಹರಿಂದು, ಚಿಂತೆಯ ಕಲ್ಲನ್ನು,
ತಲ್ಲಣದ ಅಲೆಗಳಲಿ, ನಡುಗುತಿದೆ ಕೊಳವು
ಮುದುಡಿದೆ ತಾವರೆಯು, ನಿಂತಿದೇ ಕಂಪು
ಅಂದಿನಾ ಪದ್ಯವ ಕಂಡೊಡನೆ,
ನೆನಪಿನ ತಾವರೆ ಮತ್ತೆ ಅರಳಿ,
ಬೀರುತಿದೆ ಕಂಪನ್ನು ಮತ್ತೆ ಕೊಳದಲ್ಲಿ
ಮರಳಿದೆ ತಿಳಿನೀರ ಶಾಂತಿಯು ಮತ್ತೆ ಕೊಳಕ್ಕೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!