ಕೇವಲ ಬುಧ್ಧಿವಂತರು ಮಾತ್ರ ಸಂಗೀತ ಮತ್ತು ಕಲೆಗಳಲ್ಲಿ ಆಸಕ್ತಿ ವಹಿಸುತ್ತಾರೋ ಅಥವಾ ಕಲೆಗಳಲ್ಲಿ ಆಸಕ್ತಿಯಿರುವವರು ಬುದ್ಧ್ಧಿವಂತರಾಗುತ್ತರೋ? ಈ ಪ್ರಶ್ನೆಗೆ ಉತ್ತರ ಹುಡುಕಲೆತ್ನಿಸಿ ಅಮೇರಿಕದ ಡ್ಯಾನಾ ಫೌಂಡೇಷನ್ ವತಿಯಿಂದ ಏಳು ವಿಶ್ವವಿದ್ಯಾನಿಲಯಗಳ ಮೆದುಳು ತಜ್ನರು 2004ನೇ ಇಸವಿಯಲ್ಲಿ ಪ್ರಾರಂಭಿಸಿ ಒಂದು ಮೂರು ವರ್ಷಗಳ ಕಾಲ ನಡೆಸಿದ ಸಂಶೋಧನಾತ್ಮಕ ಅಧ್ಯಯನದಲ್ಲಿ ಕಂಡು ಬಂದ ಹೊಸ ಮಾಹಿತಿ ಹೀಗಿದೆ. ಚಿಕ್ಕಂದಿನಲ್ಲೇ ಸಂಗೀತ, ನೃತ್ಯ, ಮತ್ತು ಚಿತ್ರಕಲೆ ಕಲಿಸಲು ಪ್ರಾರಂಭಿಸುವುದರಿಂದ ಮಕ್ಕಳ ಮೆದುಳಿನ ಬಲಭಾಗ (ಮೇಧಾವಿತನಕ್ಕೆ ಕಾರಣವಾದ ಭಾಗ) ಬಹಳ ಉತ್ತಮವಾಗಿ ಬೆಳವಣಿಗೆಯಾಗಿ ಅವರು ಬಹಳ ಚತುರರೂ ಹಾಗೂ ಬುಧ್ಧಿವಂತರೂ ಆಗುವ ಸಂಭಾವನೆ ಬಹಳ ಹೆಚ್ಚು. ಹೆಚ್ಚಿನ ಮಾಹಿತಿಗಾಗಿ ಕೆಳಗೆ ಚಿಟುಕಿಸಿ ಪಾಡಕಾಸ್ಟ್ ಕೇಳಬಹುದು. http://www.sciam.com/podcast/episode.cfm?id=7F935FF0-F32D-934E-3839395703713706&sc=rss ವಿದ್ಯಾಭ್ಯಾಸ ತಜ್ನರು ಮತ್ತಿತರ ಆಸಕ್ತರು ಪೂರ್ಣವಾದ ರಿಪೋರ್ಟ್ ಓದಲೆಣಿಸಿದರೆ ಕೆಳಗಿನ ಡ್ಯಾನಾ ಫೌಂಡೇಷನ್ ವೆಬ್ಸೈಟ್ನಿಂದ ಪಿಡಿಎಫ್ ಕಡತವನ್ನು( 146ಪುಟಗಳು) ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ಓದಬಹುದು. http://www.dana.org/news/publications/publication.aspx?id=10760 - ನವರತ್ನ ಸುಧೀರ್
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಬಿಲ್ ಗೇಟ್ಸ್ ಮತ್ತು ಅನಾಫಿಲಿಸ್ ಸೊಳ್ಳೆ!
ಯಾರಿಗೂ ಅರ್ಥವಾಗದ ಬಾಪೂ….? ನಿಜವಾದ ಕಥೆ ಏನು?
ಅಪರಾಧಿ ಶ್ವಾನಪಾಲಕರ ಪತ್ತೆಗೆ DNA ತಂತ್ರಜ್ನಾನ !
ಶ್ರೀ ಯಲ್ಲಪ್ಪ ರೆಡ್ಡಿಯವರ ಆತ್ಮಕಥೆ 'ಹಸಿರುಹಾದಿ'
ಚಿಕ್ಕಮಗಳೂರಿನ ಅನುವನಹಳ್ಳಿಯಲ್ಲಿರುವ ಶಾಸನ ಮತ್ತು ಅದರಲ್ಲಿರುವ ಮಾಹಿತಿ
ಗಣಿತ ಅಧ್ಯಾಪನ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!