ಅದೊಂದು ಅಭೂತ ಪೂರ್ವ ದಿನ. ಮಾರ್ಚ್ ೧೯೮೯ ರ ಮಾರ್ಚ್ ೧೩ ರಂದು ___LINK_OPEN_href="http://en.wikipedia.org/wiki/Tim_Berners-Lee" target="_blank"___ಟಿಮ್ ಬರ್ನರ್ಸ್-ಲೀ ಪ್ರತಿಪಾದಿಸಿದ ಹೊಸದೊಂದು ತಂತ್ರಜ್ಞಾನದ ಆವಿಷ್ಕಾರ ಇಡೀ ಜಗತ್ತಿನ ದಿಕ್ಕನ್ನೇ ಬದಲಿಸಿತು. ಮಾಹಿತಿಯನ್ನು ಇತರರೊಡನೆ ವಿದ್ಯುನ್ಮಾನ ವಿಧಾನದಲ್ಲಿ ಹಂಚಿಕೊಳ್ಳಲ್ಲಿಕ್ಕೆ ಮುನ್ನುಡಿ ಬರೆದ ಈ ಆವಿಷ್ಕಾರ ಮಾಹಿತಿ ತಂತ್ರಜ್ಞಾನ ಯುಗದ ಪ್ರಾರಂಭಕ್ಕೂ ನಾಂದಿ ಹಾಡಿತು. ಇದೇ ಇಂದು ನಿಮ್ಮನ್ನು ನನ್ನನ್ನೂ ಸಂಪದದೊಂದಿಗೆ ಕಟ್ಟಿ ಹಾಕಿರುವ ಕೊಂಡಿ.


ಯುರೋಪಿಯನ್ ಆರ್ಗನೈಸೇಷನ್ ಫಾರ್ ನ್ಯೂಕ್ಲಿಯರ್ ರಿಸರ್ಚ್ (CERN) ತಂತ್ರಜ್ಞಾನ ಕ್ರಾಂತಿಯನ್ನು ಚಿಗುರಿಸಿದ  ವರ್ಡ್ ವೈಡ್ ವೆಬ್ ನ ಹುಟ್ಟುಹಬ್ಬವನ್ನು ಮಾರ್ಚ್ ೧೩ ರಂದು ಆಚರಿಸಿತು. ಇಂಟರ್ನೆಟ್ ಇಲ್ಲದಿದ್ದರೆ ಇಂದೂ ಕೂಡ ನಾವು ಪರಲೊಕದಲ್ಲಿ ಪರದೇಶಿಯಾಗೇ ಇರಬೇಕಾಗ್ತಿತ್ತೋ ಏನೋ. ಇವತ್ತು ಕನ್ನಡಿಗ ಕುಂವೆಪುರವರ ವಿಶ್ವಮಾನವ ಸಂದೇಶ ಓದಿಕೊಂಡು ಕುಂತಲ್ಲೇ ಕನ್ನಡದ ಬೆಳವಣಿಗೆಗೆ, ಮನುಜಮತದ ಒಳಿತಿಗೆ ಕೆಲಸ ಮಾಡ್ಲಿಕ್ಕಾಗ್ತಿರಲಿಲ್ಲ. ಇಷ್ಟೆಲ್ಲಾ ಸಾಧ್ಯವಾಗಿಸಿದ ಇಂಟರ್ನೆಟ್ ನ ಬಗ್ಗೆ ತಿಳಿಸಿಕೊಡಲು ಈ ಲೇಖನ.


ಇಂಟರ್ನೆಟ್ ಮತ್ತೆ ವರ್ಡ್ ವೈಡ್ ವೆಬ್ ಈ ಎರಡು ಪದಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೊಣ. ಇಂಟರ್ನೆಟ್ ಬಳಕೆ ಶುರುವಾಗಿದ್ದು ೧೯೫೦ ರಲ್ಲಿ. ಇದು ಒಂದೊಕ್ಕೊಂದು ಬೆಸೆದುಕೊಂಡಿರುವ ನೆಟ್ವರ್ಕ್ ಗಳ ಒಂದು ಜಾಲ ಅಂತ ಹೇಳಬಹುದು. ಈ ಒಂದು ಜಾಲದಲ್ಲಿ ಡಾಟ (Data) ಪ್ಯಾಕೆಟ್ ಗಳು ಸಂಚರಿಸ್ತವೆ. ಈ ನೆಟ್ವರ್ಕ್ ಸಂವಾದಕ್ಕೆ ಸಿಸ್ಟಂಗಳಲ್ಲಿ  ಇಂದು ನಾವು TCP/IP Protocol (ನೀತಿ ನಿಯಮ) ಗಳನ್ನು ಬಳಸುತ್ತೇವೆ.


ವರ್ಡ್ ವೈಡ್ ವೆಬ್ ಅನ್ನೋದು ಇದಕ್ಕಿಂತ ಸ್ವಲ್ಪ ಭಿನ್ನ.  ಮಾಹಿತಿಗಳನ್ನು ಒಳಗೊಂಡ ಅಸಂಖ್ಯಾಂತ ಸರ್ವರ್ ಗಳ ನೆಟ್ವರ್ಕ್ ಆದ ವೆಬ್, ತನ್ನಲ್ಲಿರುವ ಮಾಹಿತಿಯನ್ನ ಇಂಟರ್ನೆಟ್ ನ ಮೂಲಕ ಇತರೆ ತಂತ್ರಾಂಶಗಳು ಅಂದರೆ, ಬ್ರೌಸರ್ ಇತ್ಯಾದಿ ಓದಲಿಕ್ಕಾಗುವಂತಹ ಒಂದು ವಿಶೇಷ ವಿನ್ಯಾಸ್ಸದ ಕಡತವಾಗಿ (File) ಎಲ್ಲರೊಂದಿಗೆ ಹಂಚಿಕೊಳ್ಳಲಿಕ್ಕೆ ಅನುವು ಮಾಡಿಕೊಡುತ್ತದೆ.


CERN ನಲ್ಲಿ ಕೆಲಸ ಮಾಡ್ತಿದ್ದ ಜನರ ಮಾಹಿತಿಯನ್ನ ಅಲ್ಲಿನ ಎಲ್ಲರಿಗೂ ದೊರೆಯುವಂತೆ ಮಾಡಲು ಸಿದ್ದ ಪಡಿಸಿದ ವೆಬ್, ಎಲ್ಲರ ಲೆಕ್ಕಾಚಾರಗಳನ್ನು ಮೀರಿ ಜಗತ್ತಿನ ಕಾಲ್ಬಾಗ ಜನರಿಗೆ ಅವರ ಬುದ್ದಿಮತ್ತೆಗೆ ನಿಲುಕುವಂತಹ ಎಲ್ಲ ಕೆಲಸಗಳನ್ನ ತನ್ಮೂಲಕ ಮಾಡಬಹುದು ಅನ್ನೋದನ್ನ ತೋರಿಸ್ತಲೇ ಬಂದಿದೆ. ಈ-ಮೈಲ್ ಕಳಿಸೋದಿರಬಹುದು, ಚಾಟ್ ಮಾಡೋದಿರಬಹುದು, ತಮ್ಮಲ್ಲಿರುವ ಮಾಹಿತಿಯನ್ನ ಇತರರೊಂದಿಗೆ ಅವರದೇ ಭಾಷೆಯಲ್ಲಿ ತಿಳಿಸೋದಿರಬಹುದು, ಕಲಿಕೆ, ಮನೋರಂಜನೆ, ಫೈಲುಗಳನ್ನ ಹಂಚಿಕೊಳ್ಳೋದು, ತಂತ್ರಾಂಶಗಳ ಹಂಚಿಕೆ ಇತ್ಯಾದಿಗಳ ಜೊತೆ ನಲ್ಲ ನಲ್ಲೆಯರ ಡೇಟಿಂಗ್ ಇದಕ್ಕೆ ನೀವು ನಿಮ್ಮದೇ ಆದ ಅಂಶಗಳನ್ನೂ ಸೇರಿಸಿಕೊಳ್ಳ ಬಹುದು.  ಇಷ್ಟೇ ಅಲ್ಲ ಅದಿನ್ನೂ ಬೆಳೀತಾನೇ ಇದೆ.


ಇಷ್ಟೆಲ್ಲಾ ಮಾಡಿರೋ ವೆಬ್ ತನ್ನ ೨೦ ವರ್ಷಗಳ ಕಾಲ ಜಗತ್ತಿನ ಜ್ಞಾನ ಬಂಡಾರವನ್ನೇ ತನ್ನಲ್ಲಿ ಅಡಗಿಸಿಕೊಂಡಿದೆ. ಜಗತ್ತಿನ ಅನೇಕರ ದೈನಂದಿಕ ಕಾರ್ಯಚಟುವಟಿಕೆಗಳ ಕಚೇರಿ ಕೂಡ ಇದಾಗಿದೆ. ಇದು ಒಂದಿನಿತು ಮುನಿಸಿಕೊಂಡರೆ ಇಂದಿನ ಮಾನವ ಜನಾಂಗಕ್ಕೆ ಆಗಬಹುದಾದ ನಷ್ಟ ಮಿಲಿಯಾಂತರ ಡಾಲರ್ ಗಳಷ್ಟು.


Tim Berners LeeCERN ಶುಕ್ರವಾರ ಹದಿಮೂರರಂದು, ತನ್ನ ಕೆಲಸಗಾರನಾದ ಬ್ರಿಟನ್ ನ ಟಿಂ ಬರ್ನಸ್ ಲೀ (Tim Berners-Lee) ೧೯೮೩ ರ ಇದೇ ದಿನ ಮಂಡಿಸಿದ್ದ "universal linked information system" ಮುಂದೆ, ೨೦ ವರ್ಷಗಳ ಸುದೀರ್ಘ ಅವದಿಯಲ್ಲಿ ವರ್ಡ್ ವೈಡ್ ವೆಬ್ ದೈತ್ಯವಾಗಿ ನಮ್ಮ ಮುಂದಿರುವುದನ್ನ ನೆನಪಿಸಿಕೊಂಡಿತು. ತನ್ನಲ್ಲಿನ ಮಾಹಿತಿಯ ನಿರ್ವಹಣೆಯನ್ನು ಉತ್ತಮ ಪಡಿಸಲಿಕ್ಕೆ CERN   ಸಿದ್ದ ಪಡಿಸಿಕೊಂಡ ವೆಬ್ ಅನ್ನೋ ಸಿಸ್ಟಂ ಮತ್ತು ತಂತ್ರಾಂಶ, ಅಲ್ಲಿ ಇಂದಿಗೂ ಕೆಲಸಗಿಟ್ಟಿಸಿಕೊಳ್ತಿರೋ ಸಾವಿರಾರು ಜನರ ಸಂಪರ್ಕಕ್ಕೆ, ಮಾಹಿತಿ ತಂತ್ರಜ್ಞಾನದ ಪರಸ್ವರ ಹಂಚಿಕೆ ಇತ್ಯಾದಿಗಳಿಗೆ ಬೆನ್ನ್ನೆಲುಬು.  


ಬರ್ನಸ್ ಲೀ ಪ್ರತಿಪಾದಿಸಿದ ಅನೇಕ ವಿಷಯಗಳಲ್ಲಿ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಂ ಇತರೆ ಆಪರೇಟಿಂಗ್ ಸಿಸ್ಟಂಗಳೊಡನೆ ದೂರದ (ರಿಮೋಟ್) ಪ್ರದೇಶದಿಂದಲೇ ಸಂದೇಶ ವಿನಿಮಯ ಮಾಡಿಕೊಳ್ಳುವಂತಾಗ ಬೇಕು ಅನ್ನೊ ಅಂಶವು ಸೇರಿತ್ತು.


ಆಗಿನ ಕಾಲದಲ್ಲಿ VM/CMS, Macintosh, VAX/VMS ಮತ್ತು Unix  ಇವೇ ಮೊದಲಾದ ಆಪರೇಟಿಂಗ್ ಸಿಸ್ಟಂಗಳಿದ್ದು ಮೈಕ್ರೋಸಾಫ್ಟ್ ನ ವಿಂಡೋಸ್, ಡಾಸ್ ಇತ್ಯಾದಿಗಳ ಸುಳಿವೇ ಇರಲಿಲ್ಲ. ಯಾಕಂದ್ರೆ ಅವುಗಳ ಆವಿಷ್ಕಾರ ಇನ್ನೂ ಆಗೇ ಇರಲಿಲ್ಲ. ಆದ್ರೆ ಅವು ಬರುವಿಕೆ ವೆಬ್ ನ ಬಳಕೆದಾರರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾದದ್ದಂತೂ ಸತ್ಯ.


ತನ್ನಲ್ಲಿರುವ ಮಾಹಿತಿಗಳ ಸಂಗ್ರಹವನ್ನ ಹುಡುಕಲಿಕ್ಕೆ ಬೇಕಿರುವ ಸಲಕರಣೆಗಳನ್ನ ಕೊಡುವುದರ ಜೊತೆಗೆ, ಬರ್ನರ್ಸ್ ಲೀ ಇಂತಹ ದೊಂದು ನೆಟ್ವರ್ಕ್ ಗೆ ಸೇರುವ ಸಿಸ್ಟಂಗಳು ಯಾವುದೇ ಮಧ್ಯಂತರ ನಿಯಂತ್ರಣ ಅಥವಾ ನಿರ್ವಹಣ ವ್ಯವಸ್ಥೆಯಿಂದ ದೂರವಾಗಿರಬೇಕು ಎಂದ. ಅದರ ಜೊತೆಗೆ, ವ್ಯಕ್ತಿಗಳು ಸಿಸ್ಟಂಗಳನ್ನು ನೆಟ್ವರ್ಕೆಗೆ ಸೇರಿಸಲು ತಮ್ಮದೇ ಖಾಸಗಿ ಕೊಂಡಿಗಳನ್ನ ಬಳಸುವಂತಾಗ ಬೇಕು, ಈಗಾಗಲೇ ಇರುವ ಮಾಹಿತಿಯನ್ನ ಅದರ ಲೇಖಕ, ಮಾಹಿತಿ ಸಂಗ್ರಾಹಕ, ಮೂಲ ಇತ್ಯಾದಿಗಳನ್ನ ಟಿಪ್ಪಣಿ ಮಾಡುವುದರ ಮೂಲಕ ಮಾಹಿರಿಯ ದ್ವಿಪ್ರತಿಗಳು ನೆಟ್ವರ್ಕ್ ನಲ್ಲಿ ಉಳಿದುಹೋಗುವುದನ್ನೂ ತಪ್ಪಿಸಿದ.  


ಇದೆಲ್ಲಾ ಕ್ಲಿಷ್ಟ ಮಾಹಿತಿಗಳನ್ನ ಮನುಷ್ಯನ ಮುಂದಿಡುವಾಗ ಅವು ಸಾಮಾನ್ಯನು ಅರ್ಥಮಾಡಿಕೊಳ್ಳುವ ರೀತಿ ಇದ್ದರೆ ಮಾತ್ರ ತನ್ನ ಆವಿಷ್ಕಾರ ಸಾರ್ಥಕವಾಗುವುದೆಂದು ಆಗಲೇ ಮನಗಂಡಿದ್ದ ಬರ್ನಸ್ ಲೀ, ಅಂತದ್ದೊಂದು ಸಿಸ್ಟಂ hypertext ಆಗಿ ಆಗಲೇ ಗರ್ಭದರಿಸಿದೆಯೆಂದು ಕೂಡ ಗುರಿತಿಸಿದ್ದ. Ted Nelson


Hypertext ಅನ್ನು ___LINK_OPEN_href="http://en.wikipedia.org/wiki/Ted_Nelson" target="_blank"___ಟೆಡ್ ನೆಲ್ಸನ್ (Ted Nelson) ಅನ್ನೋ ಕಂಪ್ಯೂಟರ್ ಪ್ರೋಗ್ರಾಮರ್ ೧೯೬೩ ರಲ್ಲಿ, ಡಾಕ್ಯುಮೆಂಟ್ ಮ್ಯಾನೇಜ್ಮೆಂಟ್ ಸಿಸ್ಟಂ ನಲ್ಲಿ ತನ್ನ ಟಿಪ್ಪಣಿಗಳ ಪರಿವಿಡಿ ತಯಾರಿಸುವ ವಿಷಯದ ಮೇಲೆ ಅಧ್ಯಯನ ನೆಡೆಸುತ್ತಿದ್ದ ಸಮಯದಲ್ಲಿ ಎಲ್ಲರ ಮುಂದಿಟ್ಟ ಒಂದು ಯೋಚನೆ. ಇದನ್ನ ಉಪಯೋಗಿಸಿಕೊಂಡು ಅದಾಗಲೇ ಅನೇಕ ತಂತ್ರಾಂಶಗಳು ಕೂಡ ಅಭಿವೃದ್ದಿಗೊಂಡಿದ್ದವು, ಮತ್ತು ಟಿಮ್ ಬರ್ನಸ್-ಲೀ ಕೂಡ ಇದನ್ನ ೧೯೮೦ರಷ್ಟರಲ್ಲೇ ಉಪಯೋಗಿಸಲಿಕ್ಕೆ ಪ್ರಯತ್ನಿಸಿದ್ದ ಕೂಡ.

Robert Cailliau೧೯೮೯ರಲ್ಲಿ ತಾನು ಮಂಡಿಸಿದ್ದ ಯೋಜನೆಯನ್ನ ಮತ್ತೆ ಪರಾಮರ್ಷಿಸಿದ ಟಿಮ್ ಬರ್ನಸ್-ಲೀ ೧೯೯೦ರಲ್ಲಿ hypertext ಮೇಲೆ ತಯಾರಿಸಿದ ಇನ್ಪಾರ್ಮೇಶನ್ ಮ್ಯಾನೇಜ್ಮೆಂಟ್ ಸಿಸ್ಟಂ ಅನ್ನು CERN ನ ಮತ್ತೊಬ್ಬ ಕೆಲಸಗಾರ ___LINK_OPEN_href="http://en.wikipedia.org/wiki/Robert_Cailliau" target="_blank"___ರಾಬರ್ಟ್ ಕೈಲಿಆವು (Robert Cailliau) ಜೊತೆಗೂಡಿ ಅಭಿವೃದ್ದಿ ಪಡಿಸಿ ಅದನ್ನ ವರ್ಡ್ ವೈಡ್ ವೆಬ್ ಎಂದು ಮೊದಲ ಬಾರಿಗೆ ಕರೆದ.


ಈ ಸಿಸ್ಟಂ ೧೯೮೬ರಲ್ಲಿ  ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ಗಳನ್ನುಬರೀಲಿಕ್ಕೆ ಬಳಸ್ತಿದ್ದ ಟ್ಯಾಗಿಂಗ್ ಎಲಿಮೆಂಟುಗಳಿಂದ  Standard Generalised Markup Language (SGML) ಅನ್ನೋ ತಂತ್ರಾಂಶದ ಮೇಲಿ ಆಧಾರಿತವಾದ  Hypertext Markup Language (HTML) ಅಂದ್ರೆ  HTML Tags ಅನ್ನೊದರ ಮೇಲೆ ಕೆಲಸ ಮಾಡ್ತಿತ್ತು. ೧೯೯೩ರವರೆಗೆ  ಇದನ್ನ ಒಂದು Standard ಅಂತ ಮಾನ್ಯ ಮಾಡಿರಲೇ ಇಲ್ಲ. International Engineering Tas k Force (IETF) ೧೯೯೩ರಲ್ಲಿ ಮೊದಲ ಬಾರಿಗೆ  HTML ಅನ್ನು ಮಾನ್ಯಮಾಡಿತಾದರೂ ಇದುವರೆಗೂ ಬರ್ನಸ್-ಲೀ ಮತ್ತು ಕೈಲಿಅವು ಬರೆದ ಮೂಲ ಟ್ಯಾಗ್ ಗಳು ಇಂದಿಗೂ HTML ಭಾಷೆಯಲ್ಲಿ ಉಳಿದುಕೊಂಡಿವೆ.


೧೯೯೧ ರಲ್ಲಿ, WWW ಸಿಸ್ಟಂ ಅನ್ನು ಪ್ರಾಯೋಗಿಕವಾಗಿ ಡೆವಲಪರ್ಗಳಿಗೆ ಪ್ರಯೊಗಾಲಗಳು ಮತ್ತು ಶೈಕ್ಷಣಿಕ ವಿಧ್ಯಾಲಯಗಳ ಮೂಲಕ CERN ಪ್ರೋಗ್ರಾಮ್ ಲೈಬ್ರರಿಯಾಗಿ ನೀಡಲಾಯಿತು. ಈ ಲೈಬ್ರರಿಯಲ್ಲಿ ಸಾಮಾನ್ಯ HTML ವೆಬ್ ಬ್ರೌಸರ್, ವೆಬ್ ಸರ್ವರ್ ತಂತಾಂಶ, ಮತ್ತು ಡೆವೆಲಪ್ಮೆಂಟ್ ಲೈಬ್ರರಿಯನ್ನು ಪ್ರೋಗ್ರಾಮರುಗಳ ಸಹಾಯಕ್ಕೆ ಕೊಟ್ಟು, ಅವರದೇ ಹೊಸ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವಂತೆ ಹುರಿದುಂಭಿಸಲಾಯಿತು. CERN ನ ಪ್ರಕಾರ, ಡಿಸೆಂಬರ್ ೧೯೯೧ರಲ್ಲಿ ಅಮೇರಿಕಾದಲ್ಲಿ ಮೊದಲ ವೆಬ್ ಸರ್ವರ್  ಕ್ಯಾಲಿಫೋರ್ನಿಯಾದ Stanford Linear Accelerator Center (SLAC) ನಲ್ಲಿ ಆನ್ಲೈನ್ ಬಂತು.


೧೯೯೩ ರಲ್ಲಿ, ಸಾರ್ವಜನಿಕ ವ್ಯಾಪ್ತಿಯಲ್ಲಿ ಡೆವಲೆಪ್ಮೆಂಟ್ ಕಿಟ್ ಅನ್ನು ಬಿಡುಗಡೆ ಮಾಡಲಾಯಿತು, ಇದೇ ಸಮಯದಲ್ಲಿ ವೆಬ್ ನ ಕೀರ್ತಿ ಮುಗಿಲು ಮುಟ್ಟಲಿಕ್ಕೆ ಶುರುಮಾಡಿತ್ತು. ಇದೇ ವರ್ಷ, University of Illinois ನ National Center for Supercomputing Applications ಆಧುನಿಕ ಜಗತ್ತಿನ ವೆಬ್ ಬ್ರೌಸರ್ನ ಪೂರ್ವಗಾಮಿ ಅನ್ನೋ ತಂತ್ರಾಂಶವನ್ನ ಬಿಡುಗಡೆ ಮಾಡಿತು. Mosaic ನ ಮೊದಲ ಆವೃತ್ತಿ (ನಂತರ ಅದನ್ನು Netscape Navigator ಅಂತ ಕರೆಯಲಾಯಿತು)  X Window System ಮೇಲೆ ಆಧಾರಿತವಾಗಿದ್ದು, ಮೊದಲ ಬಾರಿಗೆ ಕಂಪ್ಯೂಟರಿನಲ್ಲಿ ಪರದೆಯ ಮೂಲಕ ಬ್ರೌಸರ್ ಬಳಕೆಗೆ ಅನುವು ಮಾಡಿಕೊಟ್ಟಿತು, ಇದನ್ನ PC ಮತ್ತು Mac ಆವೃತ್ತಿಗಳು ಸ್ವಲ್ಪದರಲ್ಲೇ ಹಿಂಬಾಲಿಸಿದವು.   


ಇದೆಲ್ಲವನ್ನ ಹಿಂಬಾಲಿಸಿದ್ದು, ಅತಿ ಶೀಘ್ರವಾಗಿ ಆನ್ಲೈನ್ ಬರಲಿಕ್ಕೆ ಶುರುವಾದ ವೆಬ್ ಸರ್ವರ್ಗಳು ಮತ್ತು ಅವುಗಳಲ್ಲಿ ಲಭ್ಯವಿರುವ ಮಾಹಿತಿಯನ್ನ ತಮ್ಮ ವೆಬ್ ಬ್ರಸರ್ ಗಳ ಮೂಲಕ ಬಳಸಿಕೊಳ್ಳಲಿಕ್ಕೆ ಶುರುಮಾಡಿದ ಜನರ ಸಂಖ್ಯೆ.  ಲೆಕ್ಕಾಚಾರದ ಪ್ರಕಾರ ೧೯೯೩ ರಲ್ಲಿ ೨೫೦ರಷ್ಟಿದ್ದ ವೆಬ್ ಸರ್ವರ್ಗಳ ಸಂಖ್ಯೆ, ೧೯೯೪ ಕೊನೆಯ ಒಳಗೆ ೨೫೦೦ ಆಗಿತ್ತು.


೧೯೯೫ರ ಒಳಗೆ ೭೦೦ ಹೊಸ ವೆಬ್ ಸರ್ವರ್ಗಳು ಪ್ರತಿದಿನ ಆನ್ಲೈನ್ ಬರುತ್ತವೆ ಮತ್ತು ವರ್ಷ ಕಳೆಯುವುದರ ಒಳಗೆ ೭೩,೫೦೦ ಸರ್ವರ್ಗಳು ವೆಬ್ ನ ಜೊತೆಗುಡುತ್ತವೆ ಎಂದು ಲೆಕ್ಕ ಹಾಕಲಾಯಿತು. ಮತ್ತು ಈ ಎಲ್ಲ ಬೆಳವಣಿಗೆಗೆ ಕಾರಣವಾಗಿದ ಮುಖ್ಯ ಅಂಶ ಅಂದ್ರೆ, ಆ ದಿನಗಳಲ್ಲಾದರೂ, ವೆಬ್ ಸರ್ವರ್ ಡೆವೆಲಪ್ಮೆಂಟ್ ತಂತ್ರಂಶ ಮತ್ತು ವೆಬ್ ಬ್ರೌಸರ್ ಗಳು ಸ್ವತಂತ್ರವಾಗಿ ದೊರಕಿದ್ದು (___LINK_OPEN_href="http://www.gnu.org/home.kn.html" target="_blank"___Free as in FREEDOM).


ಇತ್ತೀಚೆಗೆ ಯುನೈಟೆಡ್ ನೇಷನ್ಸ್ ನ ಏಜನ್ಸಿ International Telecommunication Union ಬಿಡುಗಡೆ ಮಾಡಿದ ಅಧ್ಯಯನದ ಪಲಿತಾಂಶದ ಪ್ರಕಾರ, ಜಗತ್ತಿನ ೬.೭ ಬಿಲಿಯನ್ ಜನಸಂಖ್ಯೆಯ ಕಾಲುಭಾಗ ಜನ ಇಂಟರ್ನೆಟ್ ಬಳಸ್ತಿದಾರೆ ಮತ್ತು ಈ ಸಂಖ್ಯೆ ಪ್ರತಿವರ್ಷ ೨೦೦೨ಕ್ಕೆ ಹೋಲಿಸಿದಂತೆ ಶೇಕಡ ೧೧ ಪ್ರತಿಶತ ಹೆಚ್ಚುತ್ತಲೇ ಇದೆ.


ತಮ್ಮ ಆವಿಷ್ಕಾರವೊಂದು ಹುಟ್ಟಿನ ೨೦ ವರ್ಷಗಳಲ್ಲೇ, ತಮ್ಮ ಜೀವಿತದ ಅತ್ಯೋನ್ನುತ ತಂತ್ರಜ್ಞಾನ ಕ್ರಾಂತಿಯಾಗಿ ಹೊರಹೊಮ್ಮುತ್ತದೆ ಅಂತ ಬರ್ನರ್ಸ್-ಲೀ ಅಥವಾ ಕೈಲಿಅವು ಕೂಡ ನೆನಸಿದ್ದಿರಬಹುದು ಅಂತ ಅಂದುಕೊಳ್ಳೊದು ನಿಜಕ್ಕೂ ಕಷ್ಟವಾಗೇ ಉಳಿಯತ್ತಲ್ವೇ?

ಇಂಟರ್ನೆಟ್ ಮತ್ತು ವೆಬ್ ನ ಇಂದು ಮತ್ತು ಹಿಂದಿನ ಇತಿಹಾಸವನ್ನತಿಳಿದುಕೊಂಡ ನೀವೆಲ್ಲ ಅದರ ಭವಷ್ಯದ ಬಗ್ಗೆಯೂ ಯೋಚನೆ ಮಾಡ್ತಿರಬೇಕಲ್ವೇ?

ಇಂಟರ್ನೆಟ್ ನ ಭವಿಷ್ಯವೇನು ಅನ್ನೋದನ್ನ ವೆಬ್ ನ ಪಿತಾಮಹ ಟಿಮ್ ಬರ್ನಸ್-ಲೀ ಅವರಿಂದಲೇ ತಿಳಿಯೋಣವೆ?

ಭಾಗ - ೧:

ಭಾಗ - ೨:

ನಿಮ್ಮೆಲ್ಲರ ಮುಂದೆ ಈ ವಿಷಯವನ್ನ ಇಡಲಿಕ್ಕೆ ಪ್ರೇರೇಪಿಸಿದ ಲೇಖನದ ಮೂಲ ಪ್ರತಿ ಬರೆದದ್ದು Martin Courtney. ಅವರನ್ನೊಮ್ಮೆ ನೆನೆಯುತ್ತಾ.

ಚಿತ್ರಗಳು: ವಿಕಿಪೀಡಿಯಾ

ನಿಮ್ಮ,
ಶಿವು