ಮುಗುದೆ ನಿನ್ನ ಮನದ ದುಗುಡ
ಮುಗುದೆ ಮುಡಿದ ಮಲ್ಲೆ ಮೊಗ್ಗು ಅರಳದಿವೆ ಮನಸ ಮುನಿದು ಗಲ್ಲೆನ್ನುವ ಕೈಯ ಬಳೆಗಳ ಕೊರಳಬಿಗಿದಿವೆ ಕೋಪ ತಳೆದು ಮುಗುದೆ ನಿನ್ನ ಮೊಗದ ಗೆರೆಯ ಹಿಂದೆ ದುಗುಡವೆನೋ ಅಡಗಿದೆ ತುಟಿಯ ಮೇಲೆ ಅರಳದಲೆ ಕಿರುನಗೆ ಮೊಗದ ಕಳೆಯು ಕಳೆದಿದೆ ಹಳೆಯ ದಿನದ ಕಳೆದ ಕತೆಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
jp.nevara
ಮುಗುದೆ ಮುಡಿದ ಮಲ್ಲೆ ಮೊಗ್ಗು ಅರಳದಿವೆ ಮನಸ ಮುನಿದು ಗಲ್ಲೆನ್ನುವ ಕೈಯ ಬಳೆಗಳ ಕೊರಳಬಿಗಿದಿವೆ ಕೋಪ ತಳೆದು ಮುಗುದೆ ನಿನ್ನ ಮೊಗದ ಗೆರೆಯ ಹಿಂದೆ ದುಗುಡವೆನೋ ಅಡಗಿದೆ ತುಟಿಯ ಮೇಲೆ ಅರಳದಲೆ ಕಿರುನಗೆ ಮೊಗದ ಕಳೆಯು ಕಳೆದಿದೆ ಹಳೆಯ ದಿನದ ಕಳೆದ ಕತೆಯ...
ಹೊಸದೊಂದು ಪರಿಚಯಕೆ ಹಸನಾದ ಮನದಿಂದ ಸ್ವಾಗತವ ಕೋರುವೆ ಎದೆಯಾಳದೊಲವಿಂದ ಎದೆಯ ಬನದ ಕೇದಗೆಯ ಕಾದಿರಿಸಿ ಕಾಯುವೆ ನೀ ಬರುವ ಘಳಿಗೆಗಾಗಿ ಬಿರಿದ ಮಲ್ಲಿಗೆ ಮೊಗ್ಗ ದಾರಿಯಲಿ ಹರಡಿಸಿ ಕಾಯುವೆ ನೀ ಬರುವ ಘಳಿಗೆಗಾಗಿ ಗಂಧ ಸೂಸುವ ಚಂದನದ ಮರಗಳನು ಇಕ್ಕೆಲದಿ...
ನಾಳೆ ಕತ್ತಲು, ಕಾಣೆ ಏನು ಅಲ್ಲಿದೆ ಎಂದು ನಿನ್ನೆಯದು ಬೆತ್ತಲೆಯು ಉಳಿದಿಲ್ಲ ಒಂದು ಮಾಡಲೇತಕೆ ನೀನು ಅದರ ಚಿಂತೆಯನು ಅಂದಿನ ಕೆಲಸವನು ಮಾಡಲು ಆಂದಂದು ಕೀಲು ಕೊಟ್ಟರೆ ಕುಣಿವ ಗೊಂಬಿಗಳು ನಾವಲ್ಲ ನಮ್ಮೊಳಗೂ ತುಂಬಿಹವು ನೂವುಗಳು, ನಲಿವುಗಳು - 1- ಯ...
ಹಗಲು ಇರುಳು ಅತಂತ್ರನಾಗಿ ವಾರವೆಲ್ಲ ಯಂತ್ರವಾಗಿ ವಾರದಕೊನೆ ಮನುಜನಾಗಿ, ಬದುಕಿರುವೆ ನಾ ಬೆಂಗಳೂರ ಬೀದಿಗಳಲ್ಲಿ। ನಗುವ ಮುಸುಡುಗಳ ನಗುವಿಲ್ಲಿ ನಂಬುವ ಹಾಗೆ ಇರುವುದಿಲ್ಲ ನಡೆವುದೆಲ್ಲ ಇಲ್ಲಿ ನಿಜವು ಎಂದು ತೋರುವ ಹಾಗೆ ಕಾಣುವುದಿಲ್ಲ ಯಾವ ವಾರ, ಯ...
ಕವಿತಳಿಲ್ಲದೆ, ಕವಿತೆ ಮನಕೆ ಒಗ್ಗಿತು ಹೇಗೆ? ಗಾಳಿಯಿಲ್ಲದೆ, ಗಂಧ ಜಗಕೆ ಹಬ್ಬಿತು ಹೇಗೆ? ಕವಿತಳನು, ಕವಿತೆಯನು ಎದೆಯಲದುಮಿಕೊಂಡು ಹೊಳೆಯ ದಾಟಿ, ಕಡಲನಾರಿ ಪರನಾಡಲಿಳಿದುಕೊಂಡೆ। ಅವಕಾಶವೊ, ಅನಿವಾರ್ಯವೊ? ಬಾಳ್ವೆಯ ಸುದಿನವೊ, ದುರ್ದಿನವೊ ಆರನರಿಯೆ...
ನಿಲ್ಲು ಮನವೆ, ಅಲ್ಲಿ ಇಲ್ಲಿ ಏಕೆ ಅಲೆಯುವೆ ಏನ ನೆನೆದು, ಏನ ಕರೆದು ನೀನು ಕೊರಗುವೆ ಹಿರಿದು ಕಿರಿದು ಎಲ್ಲ ಸುಳ್ಳು ಮೇಲು ಕೀಳು ಬರಿ ಜೊಳ್ಳು ನಂಬದಿರು, ನೆಚ್ಚದಿರು ಮಾಯೆಯ ಮಾಯೆಯಲಿ ನೀನು ಸಿಲುಕದಿರು। ಆರಿಗಿಲ್ಲ ಆರು ಸಾಟಿ ಆರಮೇಲೋ ಆರ ಪೈಪೋಟಿ...
ಎಲೆ ಮರಗಳೇ ಕೇಳಿ ಎಲೆ ಗಿಡಗಳೇ ಕೇಳಿ ಕೊಲೆಗಡುಕ ಮಾನವರು ಕರುಣೆ ಇಲ್ಲದ ಕಾಡು ಕಲ್ಲೆದೆಯ ಜನರು ಕಡಿಯುತಿಹರಲ್ಲಿ ನಿಮ್ಮದೇ ಬಂಧುಗಳು ಎಷ್ಟು ದಿನ ಈ ಮೌನ ಎಷ್ಟ ದಿನ ಈ ಧ್ಯಾನ ಬಾಯಿ ಇಲ್ಲದ ಜೀವ ಬದುಕುವುದು ಬಲು ದುರಳ ಬಾಯಿತೆರೆಯಿರಿ ನೀವು ಬೆದರಿಕೆ...
ಏಕಿಷ್ಟು ಅವಸರವೋ ಎಲ್ಲಿಗೋಡುವರಿವರು ನಾಳೆ ಮಾಡುವರು ಏನು ನಾನು ಕಾಣೆ ಅಷ್ಟು ಅವಸರವದೇಕೋ ನಾನು ಕಾಣೆ. ದೂರದಲಿ ಇದ್ದ ಜನರೆಲ್ಲರೂ ಹತ್ತಿರವೇ ಆಗುವರು ಇನ್ನಷ್ಟೂ ಇಲ್ಲೆ-ಇಲ್ಲೆ ಇದ್ದ ಜನರೆಲ್ಲರೂ ಗಾವುದ ಗಾವುದ ಸರಿಯುವರು ಮತ್ತಷ್ಟೂ. ವೈದ್ಯರಾದರು...
----1--------- ಇರುವುದಿದೊಂದೇ ಹೂ ಬಾಡದಂತಿರಲಿ. ಕುಲಕ್ಕೊಬ್ಬಳೇ ಮಗಳವಳು ಎಂದೂ ನಗುತಿರಲಿ ಕಿರಿಯವಳು ನಿಮಗೆ ಅರಿಯದಾ ಹುಡುಗಿ. ತಪ್ಪ ಮಾಡಿದರೆ ಮರೆತು ಬಿಡಿ ಅಳಿಯರೇ... ------2------ ಅರಮನೆಯು ನನಗಿಲ್ಲ ಿರುವ ಗುಡಿಸಲಿಗೆ ಇವಳೆ ರಾಣಿ. ಹೂ...
ನಡೆ ಸರಳ ನುಡಿ ಸರಳ ಸುಕುಮಾರಿ ಅಚ್ಛ ಸುಂದರಿ ಮುಡಿಯಲ್ಲಿ ಮುಡಿದಿಹಳು ದುಂಡು ಮಲ್ಲೆಯ ಮೊಗ್ಗು ಬೀಸುವ ಸುಳಿಗಾಳಿಗೆ ಹರಿದಾಡಿಹವು ಮುಂಗುರುಳು ಕಂಗಳವು ಹೊಳೆದಿಹವು ಮುಂಗಾರಿನ ಕೋಲ್ಮಿಂಚಿನಂತೆ ಬಳುಕು ಬಳ್ಳಿಯ ಹಾಗೆ ನಿಲುವು ಮೊಗವದೋ ಅರಳಿದ ಕೆಂದಾವ...
ಒಲವಿನ ಹೊಳೆ ಹುಟ್ಟಿ ನನ್ನೆದೆಯ ಒಳಗೆ ಹರಿದು ಬರೊವರೆಗೂ ನಿನ್ನೆದೆಯ ಕಡೆಗೆ ನನ್ನೊಡಲ ಕಡಲಾಗಿ ನಾ ಮಾಡಿಕೊಂಡು ಕಾಯುವೆನಬ್ಬರಿಸದೆ ಶಾಂತಿಯಿಂದಿದ್ದುಕೊಂಡು ಮೊದಲ ಮಳೆ ಬರುವುದನು ನೆಲವು ಕಾದಂತೆ ಅರಳುವಾ ಹೂಗಳಿಗೆ ತುಂಬಿಗಳು ಕಾದಂತೆ ತಿಂಗಳೊಡಮೂಡು...
ಅವಳೇ ಇಲ್ಲದಾ ಇರುಳಿನಲ್ಲಿ ಸೊಗಸು ಏಕೋ ಕಾಣದು ಅವಳ ಕಾಣದ ಕಣ್ಣುಗಳಿಗೆ ನಿದಿರೆ ಏಕೋ ಬಾರದು ಆವ ಹಾಡೂ ಇಂಪು ತರದು ಅವಳು ಬಳಿಯೆ ಸುಳಿಯದಿರಲು ಆವ ನುಡಿಯು ಮನವ ಗೆಲದು ಅವಳ ನುಡಿಯ ಕೇಳದಿರಲು ಆವ ಗುರಿಯು ಗರಿಯೆನಿಸದು ಅವಳು ಜೊತೆಗೆ ನಡೆಯದಿರಲು ಆವ...