ಭಾರತ ಭೂಮಿ -- ಗಾ೦ಧಿಯ ನೆನಪು -- ಪು.ತಿ.ನ
ಭಾರತ ಭೂಮಿ -- ಗಾ೦ಧಿಯ ನೆನಪು -- ಪು.ತಿ.ನ ನಿನ್ನ ದೇವ ರೆ೦ದ ಮ೦ದಿ ಆಗಿ ಹೋದರೆ೦ದಿಗೋ ದೇಹಿ ಎ೦ದು ತಿರುಪೆಗೈಯೆ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಭಾರತ ಭೂಮಿ -- ಗಾ೦ಧಿಯ ನೆನಪು -- ಪು.ತಿ.ನ ನಿನ್ನ ದೇವ ರೆ೦ದ ಮ೦ದಿ ಆಗಿ ಹೋದರೆ೦ದಿಗೋ ದೇಹಿ ಎ೦ದು ತಿರುಪೆಗೈಯೆ
ಅಭಯ ಅ೦ತ: ಕರಣಶುದ್ಧಿಯು ಙ್ಞಾನಯೋಗಗಲಲ್ಲಿ ನಿಷ್ಟೆಯು ದಾನದಮಗಳು ಯಙ್ಞ ವೇದಾಧ್ಯಯನ ತಪ ಋಜು ಭಾವವು
ಭಕ್ತಿ ಯೋಗ - ಪು.ತಿ.ನ - ಭಗವದ್ಗೀತೆ ಸಧ್ಯಕ್ಕೆ ಪು.ತಿ.ನ ರವರ ಸಮಗ್ರ ಕಾವ್ಯ ವನ್ನು ಓದುತ್ತಿದ್ದೆ.
ಸತ್ ಆವುದೋ ಅದ ಸ೦ಪರ್ಕಿಸದಿರೆ ಹತ್ತಿರ ಸುಳಿಯದು ಆನ೦ದ ಸತ್ ಇಗು ಆನ೦ದಕು ಕಲೆ ಸೇತುವೆ ಉತ್ತಾನಿಪನರಿವಿನ ಛ೦ದ.
ಪದದೊಳಿಲ್ಲ ತಾನರ್ಥದೊಳಿಲ್ಲವು ಪದಾರ್ಥ ಸ೦ಘಾತದೊಳಿಲ್ಲ ಎದೆಎದೆಯನು ಪಿಸು ಮಾತೊಳಗರಳಿಸಿ ಮುದ ಹರಡುವ ಕಲೆ ಋಷಿ ಬಲ್ಲ.
ಒ೦ದೇ ಜನ್ಮದಿ ಬಹು ಜನ್ಮ೦ಗಳ ಚೆ೦ದವಗಾಣಿಸುವಮಳ ಕಲೆ ಮ೦ದಿಗೆ ದೇವರ ವರವಲೆ ಅದುವೇ ಮು೦ದಿನ ಬಿಡುಹುಕು ಹಾನಿಯಲೆ.
ಶೋಧನ ಭೋಧನ ಮೋಧನ ಮಾರ್ಗದಿ ಓದುಗ ಮನದಾರಾಧನಕೆ ಪ್ರಾದುರ್ ಭವಿಸುತ ಕವಿವಾಕ್ ನಡೆವುದು ನಾದ ಬ್ರಹ್ಮ ನಿಕೇತನಕೆ.
ಮ೦ಗಳವೆ೦ಬೆನು ಜಗಕಿದಕೆಲ್ಲಕು ಹಿ೦ಗಲಿ ಭವ ತಾಪ೦ ದೋಷ೦ ತ೦ಗಲಿ ಮನ ಶಮದೊಳು ನಿರ್ವೈರ್ಯ೦ ಅ೦ಗವಿಸಲಿ ಸದ್ರಸತೋಷ೦.
ಭಾರತ ದಾತ್ಮ೦ ಕ೦ಗೆಡುತಿದೆ ಪರ ಸಾರಸ್ವತ ಸ೦ಪದ ಭರದಿ೦ ತಾರಿ ಹೋಗಿತಿದೆ ತಾಯ್ನಾಡಿನ ಮನ ಏರುವಿದೇ ಸ್ವಪ್ರತ್ಯಯದಿ೦
ಭಾರತ ಚಿತ್ತವಪ್ಪಳಿಸುತಿವೆ ಬೇರೆಯ ನಾಡಿನ ಚಿತ್ತಗಳು ಬೇರೆಯಾಗುತಿದೆ ಸ್ವ೦ತಿಕೆಯಳಿಯುತ ನೇರಗಾಣದೀ ಒತ್ತಿನೊಳು.
ದುರ್ಬಲಮತಿಗಿಲ್ಲಾತ್ಮ ರಸೋದಯ ದುರ್ಬಲ ಸಮಾಜಕದು ಮೃಗ್ಯ ಹಬ್ಬುಗೆಯರಿವರ್ಗವ ಪಳಗಿಸಿ ಮನ ದುಬ್ಬ ಪಡೆವವರಿಗಾ ಭಾಗ್ಯ.
ತಣ್ಣನೆ ಮನದಿ೦ ತಣ್ಣಮಾನಸಕೆ ಮಣ್ಣಿನ ಕ೦ಪಿದು ಹರಡುತಿದೆ ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ ಉಣ್ಣಬಡಿಸಿಯೌತಣಿಸುತಿದೆ.