ಮೆದುಳಿಗೆ ಮೇವು ಇನ್ನಷ್ಟು ಗಾದೆಮಾತುಗಳು
ಸನ್ಯಾಸಿಗೆ ತೆಕ್ಕೆಬಿದ್ದರೆ ಮೈಎಲ್ಲ ಬೂದಿ ಸನ್ಯಾಸಿಯ ಮದುವೆಗೆ ಜುಟ್ಟು-ಜನಿವಾರದಿಂದ ಸಿದ್ಧತೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫೬ ಲೇಖನಗಳು
ಸನ್ಯಾಸಿಗೆ ತೆಕ್ಕೆಬಿದ್ದರೆ ಮೈಎಲ್ಲ ಬೂದಿ ಸನ್ಯಾಸಿಯ ಮದುವೆಗೆ ಜುಟ್ಟು-ಜನಿವಾರದಿಂದ ಸಿದ್ಧತೆ.
ಗಂಡನಿಗೆ ಹೊರಸು ಆಗದು , ಹೆಂಡತಿಗೆ ನೆಲ ಆಗದು! ಕೊಡುವವರದು ಕೊಟ್ಟರೆ ನನಗೇನು ಉಳಿಯಿತು ಅಂದನಂತೆ.
ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು . (ಕಾಯಿಲೆ) ಬಿದ್ದಾಗಿನ ಅನ್ನ ಎದ್ದಾಗ ತೆಗೆ. ಮಾನಿಷ್ಟರು ಮಾನಕ್ಕೆ ಅಂಜಿದರೆ ಮಾನಗೇಡಿ ತನಗೇ ಅಂಜಿದರು ಅಂದನಂತೆ
೧. ಸಾಲ ಮಾಡಿದವನು ತೀರಿಸಿ ಸಾಯಲ್ಲಿಲ್ಲ, ಮೂಲ ಮಾಡಿದವನು ತಿಂದು ಸಾಯಲ್ಲಿಲ್ಲ. ೨. ಹುಟ್ಟಿದ ಲಾಗಾಯ್ತೂ ಯಜ್ಞಕಾರ್ಯ ಮಾಡದಿದ್ದವನು ಗಡ್ಡಕ್ಕೆ ಬೆಂಕಿ ಹಚ್ಚಿಕೊಂಡನಂತೆ.
೧. ಅಗಸನ ಕತ್ತ ಡೊಂಬರದವನಿಗೆ ದಾನ ಮಾಡಿದ ಹಾಗೆ. ೨. ಉಂಡರೆ ಉಬ್ಬಸ, ಹಸಿದರೆ ಸಂಕಟ. ೩. ಒರಲೆ ಹಿಡಿದ ಕಟ್ಟಿಗೆ, ತರಲೆ ಹಿಡಿದ ಮನೆ ಹಾಳು.
೧. ದರಗು ತಿನ್ನೋರ ಹತ್ತಿರ ಹಪ್ಪಳ ಕೇಳಿದಂತೆ. ೨. ಸಂತೆ ನೆರೆಯುವ ಮುಂಚೆ ಗಂಟುಕಳ್ಳರು ನೆರೆದರು.
೧. ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡ ಹಾಗೆ. ೨. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ.
೧. ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೆ? ೨. ಮನೆಗೆ ಮಾರಿ ಊರಿಗೆ ಉಪಕಾರಿ. ೩. ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ.
೧. ನಾಯಿಗೆ ಹೇಳಿದರೆ ನಾಯಿ ತನ್ನ ಬಾಲಕ್ಕೆ ಹೇಳಿತು. ೨. ದಾನಕ್ಕೆ ಕೊಟ್ಟ ಎಮ್ಮೆಯ ಹಲ್ಲು ಎಣಿಸಿದರು.
೧. ನಾಯಿಗೆ ಹೇಳಿದರೆ ನಾಯಿ ತನ್ನ ಬಾಲಕ್ಕೆ ಹೇಳಿತು. ೨. ದಾನಕ್ಕೆ ಕೊಟ್ಟ ಎಮ್ಮೆಯ ಹಲ್ಲು ಎಣಿಸಿದರು.
ಸಂಪದದಲ್ಲಿ ಪ್ರಕಟವಾಗಿದ್ದ ಗಾದೆಗಳೆಲ್ಲ ಚೆನ್ನಾಗಿದ್ದವು. ನನಗೆ ಗೊತ್ತಿರುವ,ಮಲೆನಾಡು ಪ್ರಾಂತದಲ್ಲಿ ಹೆಚ್ಚಾಗಿ ಕೇಳಿಬರುವ ಕೆಲವು ಗಾದೆಗಳು...
ಎತ್ತು ಚಲೋದಾದರೆ ಇದ್ದ ಊರಲ್ಲೇ ಗಿರಾಕಿ. ಕಟ್ಟಲಿಲ್ಲ ಬಿಚ್ಚಲಿಲ್ಲ ಹಿ೦ಡಿಕೊಳ್ಳೋಕೆ ಹೊತ್ತಾಯ್ತು ಅ೦ದಳು.
ಕಾಸಿಗೆ ತಕ್ಕ ಕಜ್ಜಾಯ ಹೆತ್ತೋರ್ಗೆ ಹೆಗ್ಗಣ ಮುದ್ದು, ಕಟ್ಗೊಂಡೋರ್ಗೆ ಕೋಡಂಗಿ ಮುದ್ದು ಅಡುಗೆ ಮಾಡಿದವಳಿಗಿಂತ ಬಡಿಸಿದವಳೆ ಮೇಲು
ಆರಿದ್ರ ವೇಳೆಗೆ ಆದೋನೇ ಗ೦ಡ! (ಚಿಟಿ ಚಿಟಿ ಮಳೆ ಬಿಡದೇ ಸುರಿಯುತ್ತಿದಾಗ, ಮನೆ ಬಿಟ್ಟು ಎಲ್ಲೂ ಹೊರಗೆ ಹೋಗದೇ ಇರುವಾಗ, ನಡೆದಿರಬಹುದಾದ ಚಟುವಟಿಕೆಯ ಕಥೆ ಹೇಳುತ್ತಾ ಇದು?, ಎ೦ದು ರಸಿಕರ ಪ್ರಶ್ನೆ!)
ಕಂಡ ಕಂಡ ದೇವರಿಗೆಲ್ಲ ಕೈ ಮುಗಿದರೂ ಗಂಡನಿಲ್ಲದೆ ಮಕ್ಕಳಾಗವು. ಏಟು ಬೀಳದ ಹೊರತು ದೆವ್ವ ಬಿಡುವದಿಲ್ಲ ;
ಹಳೇ ಗಾದೆಗಳು: ಇದ್ದಿದ್ ಇದ್ದಂಘೇಳಿದ್ರೆ ಎದ್ ಬಂದು ಎದೆಗೊದ್ನಂತೆ. ನಿಜ ಹೇಳೋದ್ ಯಾರಿಗೂ ಹಿತವಾಗೋಲ್ಲ.
ಹುಟ್ಟಾ ಸತ್ತಿಲ್ಲ , ಸ್ವರ್ಗ ಕಂಡಿಲ್ಲ. ಹಾದಿ ಬಿಟ್ಟವನಿಗೆ ಹದಿನೆಂಟು ಹಾದಿ ಹತ್ತು ಆಡಬಹುದು , ಒಂದು ಬರೆಯಲಾಗದು. ( ಆಡಿದ್ದನ್ನು ಅಲ್ಲಗಳೆಯಬಹುದು , ಬರೆದದ್ದನ್ನು ಅಲ್ಲಗಳೆಯಲಾಗದು)
ಹಳೇ ಗಾದೆಗಳು : ಕದ ತಿನ್ನೋನ್ಗೆ ಹಪ್ಳ ಈಡೆ ? ಹೊಟ್ಟೆ ಬಾಕನಿಗೆ ಏನು ಕೊಟ್ಟರೂ ಕಡಿಮೆಯೆ. ಹೋದ್ಯ 'ಶನೀಶ್ವರ' ಅಂದ್ರೆ ಬಂದೆ ಗವಾಕ್ಷೀಲಿ, ಅಂದ.
ಹಳೆ ಗಾದೆಗಳು: ಸೆರೆಮನ್ಯಮ್ ಸೇರ್ ಹಾಕ್ಕೊಂಡ್ರೆ ನೆರೆಮನ್ಯಮ್ ನೇಣ್ ಹಾಕ್ಕೊಂಡ್ಲಂತೆ.
ಎರಡು ಹೆತ್ತೋಳು ಹತ್ ಹೆತ್ತೋಳ್ಗೆ ಹೇಳಿದಳಂತೆ. ಹತ್ ಹೆತ್ತೋಳ್ಗೆ ಅನುಭವ ಹೆಚ್ಚಲ್ಲವೆ ?