ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅಮರು

ಅಮರು

೧೨ ಲೇಖನಗಳು

ಒಂದು ಪ್ರೇಮದ‌ ಕಥೆ

ಹಂಸಾನಂದಿ ಜೂನ್ ೨೦ ಬ್ಲಾಗ್ ೧೨೧ ವೀಕ್ಷಣೆಗಳು

ಹುಬ್ಬು ಗಂಟಿಕ್ಕುವುದ ಕಲಿತಾಯ್ತು ಕಣ್ಗಳಿಗೆ ಮುಚ್ಚಿರುವ ಕಲೆಯನ್ನು ರೂಢಿಸಿದ್ದಾಯ್ತು ಅತ್ತು ಸೊರಗುವುದನ್ನು ಮೌನದಲಿ ನಗುವನ್ನು ಒತ್ತಟ್ಟಿಗಿರಿಸುವುದನೊಟ್ಟು ಕಲಿಸಾಯ್ತು ದಿಟ್ಟವಾಗಿರಲಿಕ್ಕೆನ್ನ ಮನಸನು ಹೇಗೊ ಗಟ್ಟಿಮಾಡ...

ನೋಟ

ಹಂಸಾನಂದಿ ಏಪ್ರಿಲ್ ೧೦ ಬ್ಲಾಗ್ ೧೪೭ ವೀಕ್ಷಣೆಗಳು

ಬಳಲಿ ಸೊರಗುತ ಒಲವ ಪಸೆಯಲಿ ಅರಳಿ ಮುಚ್ಚುವ ಮೊಗ್ಗಿನಂ- ತೊಮ್ಮೆ ನೋಡುತ ಮತ್ತೆ ನಾಚುತ ಬದಿಗೆ ಹೊರಳಿಸಿ ದಿಟ್ಟಿಯ  ಎದೆಯೊಳಿರುತಿಹ ಒಲವಿನೊಸಗೆಯ ನೋಟದಲೆ ಹೊರಸೂಸುತ ಹೇಳೆ  ಮುಗುದೆಯೆ ಯಾವ ಚೆಲುವನ ನಿನ್ನ ಕಂಗಳು ಕಂಡವೇ...

ಚತುರೆಯ ಮುನಿಸು

ಹಂಸಾನಂದಿ ಮಾರ್ಚ್ ೦೬ ಬ್ಲಾಗ್ ೧೧೯ ವೀಕ್ಷಣೆಗಳು

ನಲ್ಲ ಬಂದುದ ನೋಡಿ ನಿಂತು ಸ್ವಾಗತಿಸುತ್ತ ಪಕ್ಕದಲಿ ಕೂರುವುದ ತಪ್ಪಿಸಿದಳು ; ತಾಂಬೂಲವನು ಕೊಡುವ ನೆವದಿಂದ ಒಳಹೋಗಿ ಅಪ್ಪುಗೆಗೆ ಅಡ್ಡಿಯನು ತಂದಿಟ್ಟಳು ; ಜೊತೆಯ ಪರಿಜನರೊಡನೆ ತೊಡಗುತ್ತ ಸೋಗಿನಲಿ ಅವನ ಮಾತಿಗೆ ತಾನು  ಸಿಗ...

ನಿರಾಕರಣ

ಹಂಸಾನಂದಿ ಫೆಬ್ರ ೧೩ ಬ್ಲಾಗ್ ೧೧೫ ವೀಕ್ಷಣೆಗಳು

ಅವನೆದುರು ಕಂಡಿರಲು ಮೊಗವನ್ನು ಬಾಗಿಸುತ ನೋಟವನು ಕೆಳಗೆ ನೆಟ್ಟೆ ಅವನ ಮಾತುಗಳನ್ನು ಕೇಳಬಯಸಿದ ಕಿವಿಗಳನ್ನು ನಾ ತಡೆದುಬಿಟ್ಟೆ ಬೆವರ ಸಾಲನು ಹೊತ್ತು ಗಲ್ಲ ನವಿರೇಳುವುದನಂಗೈಲೆ ಮರೆಮಾಚಿದೆ ರವಿಕೆಯೊಂದಂದಂಚು ಸೀಳುತಿರುವನು...

ಅಗಲಿಕೆ

ಹಂಸಾನಂದಿ ಮೇ ೦೬ ಬ್ಲಾಗ್ ೧೧೫ ವೀಕ್ಷಣೆಗಳು

ತೊಟ್ಟ ಬಳೆಗಳು ಕೈಯ ತೊರೆದವು ನಿಲ್ಲದೇ ಸುರಿದವು ಕಣ್ಣ ಹನಿಗಳು ಒಂದು ಚಣದಲ್ಲೇ ದೂರವಾಯ್ತು ಧೈರ್ಯ   ಮನಸೆಲ್ಲೆಲ್ಲೋ ಓಡಿತು ಬಿಟ್ಟು ನನ್ನನೊಂಟಿ ; ಕಲ್ಲುಮನಸಿನ ನಲ್ಲ ನನ್ನ  ತೊರೆದಿರಲು ಜೊತೆಯಲೇ ಇವರೆಲ್...

ಗೆಳತಿಗೊಂದು ಮಾತು

ಹಂಸಾನಂದಿ ಏಪ್ರಿಲ್ ೦೬ ಬ್ಲಾಗ್ ೮೬ ವೀಕ್ಷಣೆಗಳು

      ಅತ್ತ ಹೊರಗಡೆ ತಲೆಯ ಬಾಗಿಸಿ ನೆಲವ ಕೆರೆಯವ ನಲ್ಲನು ತುತ್ತು ತಿನ್ನದೆ ಹೋದ ಗೆಳತಿಯರತ್ತು ಕಂಗಳು ಬಾತಿವೆ ಮತ್ತೆ ಪಂಜರದಲ್ಲಿ ಗಿಳಿಗಳ ಸದ್ದು ಕೇಳದೆ ಹೋಗಿದೆ ಇತ್ತಲಿಂತಹ ಪಾಡು ನಿನ್ನದು! ತೊರೆಯೆ ಹಠವನು ಬೇಗನೆ!...

ಲೆಕ್ಕಾಚಾರ

ಹಂಸಾನಂದಿ ಸೆಪ್ಟೆಂ ೨೪ ಬ್ಲಾಗ್ ೮೮ ವೀಕ್ಷಣೆಗಳು

  ಚೆನ್ನೆ ನಿನ್ನಯ ಮನದೊಳೆನ್ನ ಮೇಲಿರೆ ಮುನಿಸು ಇನ್ನು ಮಾಡುವುದೇನು? ಇರಲಿ ನಿನ್ನಿಷ್ಟ; ಮುನ್ನ ಕೊಟ್ಟದ್ದೆಲ್ಲ  ಮರಳಿ ಕೊಟ್ಟುಬಿಡೆನಗೆ     ನನ್ನ ಮುತ್ತನು ಮತ್ತೆ ಬಿಗಿವಪ್ಪುಗೆಯನು!                      ...

ಹಮ್ಮು ತೊರೆದವಳು

ಹಂಸಾನಂದಿ ಮೇ ೨೯ ಬ್ಲಾಗ್ ೮೭ ವೀಕ್ಷಣೆಗಳು

ಇಲ್ಲಿವಳು ಹುಬ್ಬುಗಂಟಿಕ್ಕಿದರು ಕಣ್ಣುಗಳು ಚಡಪಡಿಸಿ ನೋಡುತಿಹವು ಸೊಲ್ಲಡಗಿ ನೊಂದಿದ್ದ ಮೊಗದಲ್ಲಿ ಮುಗುಳುನಗೆ ತಂತಾನೆ ತೋರ್ಪಡುವುದು ಕಲ್ಲೆದೆಯ ಮಾಡಿದರು ಅದರ ಕುರುಹರಿಯದಿಹ ಒಡಲು ನವಿರೇಳುತಿಹುದು ನಲ್ಲ ಕಣ್ಣೆದುರಲ್...

ಎದೆಯಲ್ಲಿರುವನಲ್ಲ

ಹಂಸಾನಂದಿ ಮೇ ೨೫ ಬ್ಲಾಗ್ ೮೪ ವೀಕ್ಷಣೆಗಳು

ಬಾಳನೆಲ್ಲವು ನೀನು ಮುಗುದೆತನದಲ್ಲಿಯೇ ಹಾಳು ಮಾಡಲು ಹೊರಟಿರುವೆಯೇಕೆ ಹೆಣ್ಣೆ? ಬಿಟ್ಟು ನೇರದ ದಾರಿ ತುಸುಸೆಡವು ತೋರಿಸುತ ದಿಟ್ಟೆಯಾಗುವುದಿಂದು ನಿನಗೆ ಬಹು ಒಳಿತು! ಮುದದಿ ಗೆಳತಿಯು ಹೀಗೆ ಕಿವಿಮಾತು ಹೇಳಿರಲು...

ಚಿಗರೆಗಣ್ಣಿಯ ಸಿಟ್ಟು

ಹಂಸಾನಂದಿ ಫೆಬ್ರ ೧೩ ಬ್ಲಾಗ್ ೭೪ ವೀಕ್ಷಣೆಗಳು

ಗೆಳತಿ! ನನ್ನೆದೆ ಒಡೆದರೂ ಸರಿ ; ಎನ್ನೊಡಲ ಆ ಮದನ ಸೊರಗಿಸಿದರೂ ಸರಿ ; ಒಂದೆಡೆ ನಿಲ್ಲದವನಲ್ಲಿ ನಾನದೆಂತು ಒಲವನಿಡಲೇ? ಹೀಗೆಂದು ಸಿಟ್ಟಿನಲಿ ಸೆಡವಿನಲಿ ನುಡಿಯುತ್ತಲೇ ನಲ್ಲನ ದಾರಿಯ ಕಳವಳದಲ...

ಹಾತೊರೆತ

ಹಂಸಾನಂದಿ ಅಕ್ಟೋ ೦೫ ಬ್ಲಾಗ್ ೧೨೫ ವೀಕ್ಷಣೆಗಳು

ಕಿವಿಯಲವನ ಹೆಸರು ಬಿದ್ದರೂ ಮೈ ಮಿಂಚಾಡುವುದು ನವಿರೆದ್ದು; ಕಂಡರವನ ಮೊಗಚಂದಿರವು ಚಂದ್ರಶಿಲೆಯಂತೆ ಕರಗುವುದು! ಇನಿಯ ಬಳಿಬಂದೆನ್ನ ಕೊರಳನು ಅವನ ತೋಳಲಿ ಸೆಳೆದು ಅಪ್ಪಲು ಒಡೆದ ಈ ಮನಕುಂಟು ತಲ್ಲಣ ತಿರುಗಿ ಪೆಡಸಾದೇನೆಂಬ...

ಒತ್ತಾಸೆ

ಹಂಸಾನಂದಿ ಸೆಪ್ಟೆಂ ೦೩ ಬ್ಲಾಗ್ ೧೪೫ ವೀಕ್ಷಣೆಗಳು

 "ಎಲ್ಲಿ ಹೋಗುವೆ ಇರುಳಿನಲಿ ತೋರ ತೊಡೆಯವಳೆ?""ನನ್ನುಸಿರ ಮಿಗಿಲಾದ ಆ ನನ್ನ ನಲ್ಲನಿರುವೆಡೆಗೆ""ಒಬ್ಬಂಟಿ ತೆರಳಲಂಜಿಕೆಯಾಗದೇನೆ ಹೇಳೆ ಗೆಳತಿ?""ಒತ್ತಾಸೆಗುಂಟಲ್ಲೆ ಕಮ್ಮಗೋಲನ ಐದು ಅಂಬುಗಳೇ!"ಸಂಸ್ಕೃತ ಮೂಲ (ಅಮರುಕನ ಅಮರು...