ಗೆಳತಿ! ನನ್ನೆದೆ
ಒಡೆದರೂ ಸರಿ ;

ಎನ್ನೊಡಲ ಆ ಮದನ
ಸೊರಗಿಸಿದರೂ ಸರಿ ;

ಒಂದೆಡೆ ನಿಲ್ಲದವನಲ್ಲಿ
ನಾನದೆಂತು
ಒಲವನಿಡಲೇ?

ಹೀಗೆಂದು ಸಿಟ್ಟಿನಲಿ
ಸೆಡವಿನಲಿ ನುಡಿಯುತ್ತಲೇ
ನಲ್ಲನ ದಾರಿಯ

ಕಳವಳದಲಿ
ಬಿಡದೇ ನೋಡಿದಳು
ಚಿಗರೆಗಣ್ಣಿ!

ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ):

ಸ್ಫುಟತು ಹೃದಯಂ ಕಾಮಃ ಕಾಮಂ ಕರೋತು ತನುಮ್ ತನುಮ್
ನ ಸಖಿ ಚಪಲಪ್ರೇಮ್ನಾ ಕಾರ್ಯಮ್ ಪುನರ್ದಯಿತೇನ ಮೇ |
ಇತಿ ಸರಭಸಂ ಮಾನಾಟೋಪಾದ್ ಉದೀರ್ಯ ವಚಸ್ತಯಾ
ರಮಣಪದವೀ ಸಾರಂಗಾಕ್ಷ್ಯಾ ಸಶಂಕಿತ*ಮೀಕ್ಷಿತಾ ||

-ಹಂಸಾನಂದಿ

ಕೊ: ಕಡೆಯ ಸಾಲಿನಲ್ಲಿ ಸಶಂಕಿತಮೀಕ್ಷಿತಾ ಎಂಬುದಕ್ಕೆ ನಿರಂತರಮೀಕ್ಷಿತಾ ಎಂಬ ಪಾಠಾಂತರವೂ ಇರುವಂತೆ ತೋರುತ್ತದೆ. ಅನುವಾದದಲ್ಲಿ ಎರಡೂ ಅರ್ಥಗಳನ್ನು ತಂದಿದ್ದೇನೆ.

ಕೊ.ಕೊ: ಮೂಲದಲ್ಲಿ, ನಲ್ಲನು ಒಂದೆಡೆ ನಿಲ್ಲುವನಲ್ಲ, ಹಾಗೇ ಒಬ್ಬಳಲ್ಲೇ (ಪದ್ಯದ ನಾಯಕಿಯೊಬ್ಬಳಲ್ಲೇ)ಮನವನ್ನಿಡುವನಲ್ಲ ಎನ್ನುವ ಎರಡೂ ಭಾವಗಳು ಕಂಡುಬರುತ್ತಿವೆ. ಅನುವಾದದಲ್ಲಿ ಅದು ಅಷ್ಟು ಚೆನ್ನಾಗಿ ತೋರಿಬಂದಿಲ್ಲದಿದ್ದರೆ ಅದು ನನ್ನ ಅನುವಾದದ ಮಿತಿ ಅಷ್ಟೇ.