ರಕ್ಕಸರ ಹಗೆ ಹರಿಯ ಆ ಸೊಬಗಿನೆದೆಯಲ್ಲಿ

ಕರಿಮೋಡದಲಿ ಹೊಳೆವ ಸುಳಿಮಿಂಚಿನಂತೆ

ಮೆರೆವ ತಾಯೇ ಸಕಲ ಲೋಕದಲಿ ನೀ ಮಾನ್ಯೆ

ಒಳ್ಳಿತನು ತೋರೆನಗೆ ಭಾರ್ಗವನ ಕುವರಿ

 

ಸಂಸ್ಕೃತ ಮೂಲ: (ಆದಿಶಂಕರರ ಕನಕಧಾರಾ ಸ್ತೋತ್ರದಿಂದ)

 

कालाम्बुदालिललितोरसिकैटभारेः

धाराधरे स्फुरति या तटिदङ्गनेव ।

मातुः समस्तजगतां महनीयमूर्तिः

भद्राणि मे दिशतु भार्गवनंदनायाः ॥

 

ಕಾಲಾಂಬುದಾಲಿಲಲಿತೋರಸಿಕೈಟಭಾರೇಃ

ಧಾರಾಧರೇಸ್ಫುರತಿಯಾತಟಿದಂಗನೇವ |

ಮಾತುಃ ಸಮಸ್ತಜಗತಾಂ ಮಹನೀಯಮೂರ್ತಿಃ

ಭದ್ರಾಣಿಮೇ ದಿಶತು ಭಾರ್ಗವನಂದನಾಯಾಃ ||

 

-ಹಂಸಾನಂದಿ

 

ಕೊ:  ಕೆಲವು ವರ್ಷಗಳಿಂದಲೂ ಆದಿ ಶಂಕರರ ಹುಟ್ಟಿದದಿನ - ಶಂಕರ ಜಯಂತಿ, ವೈಶಾಖ ಶುದ್ಧ ಪಂಚಮಿಯಂದು, ಶಂಕರರ ಯಾವುದಾದರೂ ಪದ್ಯವನ್ನು ಅನುವಾದಿಸುವ ಪ್ರಯತ್ನ ಮಾಡಿದ್ದೇನೆ. ಹಾಗಾಗಿ, ಅದೇ ಸಾಲಿನಲ್ಲಿ ಇವತ್ತಿಗೂ ಒಂದು ಅನುವಾದ.

 

ಕೊ.ಕೊ: ಮೂಲ ಪದ್ಯವು ಶಂಕರರ ಪ್ರಸಿದ್ಧವಾದ ಕನಕಧಾರಾ ಸ್ತೋತ್ರದಲ್ಲಿದೆ. ___LINK_OPEN_data-blogger-escaped-target="_blank" href="http://hamsanada.blogspot.my/2015/04/blog-post_23.html"___ಇದೇ ಸ್ತೋತ್ರದ ಇನ್ನು ಕೆಲವು ಪದ್ಯಗಳು ನಾನು ಅನುವಾದಿಸಿರುವುದನ್ನು ಇಲ್ಲಿ ಚಿಟಕಿಸಿ ಓದಬಹುದು.

 

ಕೊ.ಕೊ.ಕೊ: ಮೂಲವು ವಸಂತತಿಲಕ ವೃತ್ತದಲ್ಲಿದೆ. ಅನುವಾದವು ಚೌಪದಿಯಲ್ಲಿದೆ, ಆದರೆ ಪ್ರಾಸವನ್ನು ಪಾಲಿಸಿಲ್ಲ.

 

ಚಿತ್ರ: ೧೧ನೇ/೧೨ನೇ ಶತಮಾನದ ವಿಷ್ಣು ಮತ್ತು ಲಕ್ಷ್ಮಿ ವಿಗ್ರಹ.  ಈ ವಿಗ್ರಹದ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗಿನ ಕೊಂಡಿಗಳಲ್ಲಿವೆ.

 
http://www.thehindu.com/…/us-returns-ido…/article5577461.ece

 
http://www.rediff.com/…/slide-show-1-signs-of…/20140115.htm…)