ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅಮರುಕ

ಅಮರುಕ

೧೮ ಲೇಖನಗಳು

ಹೊರಡುವ ಮೊದಲು

ಹಂಸಾನಂದಿ ಜುಲೈ ೦೯ ಬ್ಲಾಗ್ ೧೦೫ ವೀಕ್ಷಣೆಗಳು

ಪಯಣ ಹೋದರೆ ಮತ್ತೆ ಬಾರದೆ ಇರುವುದುಂಟೇ ಸುಂದರಿ? ಎನ್ನ ಸಲುವಿಗೆ ಚಿಂತೆಯೇತಕೆ? ಏತಕೀಪರಿ ಸೊರಗಿಹೆ? ಒದ್ದೆಗಣ್ಣಲಿ ನಾನು ಕೇಳಲು ನಾಚಿ ತುಂಬಿದ ಕಣ್ಗಳ ನೀರ ತಡೆದಳು! ನೋಡಿ ನಕ್ಕಳು! ತೋರಿ ಸಾವಿಗೆ ಕಾತರ! ಸಂಸ್ಕೃತ ಮೂಲ...

ಭಯವೇಕೆ ಬೆಡಗಿ?

ಹಂಸಾನಂದಿ ಮೇ ೨೭ ಬ್ಲಾಗ್ ೧೩೧ ವೀಕ್ಷಣೆಗಳು

ಎದೆಮೇಲೆ ಹೊಳೆವ ಸರ ಸೊಂಟದಲ್ಲೊಡ್ಯಾಣ ಕಾಲ್ಗೆಜ್ಜೆ ಗಣಗಣಿಪ ದನಿಯು ಸಾರಿರಲು ಡಂಗುರವ ನೀ ತೆರಳುತಿರಲು ನಿನ್ನಿನಿಯನೆಡೆ ಅಂಜಿನಡುಗುತ ಸುತ್ತಲೇಕೆ ನೋಡುತಿಹೆ? ಸಂಸ್ಕೃತ ಮೂಲ: ಅಮರುಕನ ಅಮರು ಶತಕ, (೨೮/೩೧) उरसि निहित...

ಸಿಟ್ಟು

ಹಂಸಾನಂದಿ ಮೇ ೦೮ ಬ್ಲಾಗ್ ೧೩೧ ವೀಕ್ಷಣೆಗಳು

"ಎದೆಯೆ ಒಡೆಯಲಿ! ಮದನನೊಡಲಿಗೆ ಏನನಾದರು ಮಾಡಲಿ! ಗೆಳತಿ! ಒಲವನು ನಿಲಿಸದಿರುವವನಿಂದಲೇನಾಗುವುದಿದೆ?" ಸೆಡವಿನಲಿ ಬಲು ಬಿರುಸುಮಾತುಗಳನ್ನು ಬಿಂಕದಲಾಡುತ  ನಲ್ಲ ತೆರಳಿದ ಹಾದಿ ಹಿಂಬಾಲಿಸುತ ಜಿಂಕೆಯ ಕಣ್ಣಲಿ !   ಸಂಸ...

ಒಂದು ಹನಿ

ಹಂಸಾನಂದಿ ಏಪ್ರಿಲ್ ೩೦ ಬ್ಲಾಗ್ ೧೪೪ ವೀಕ್ಷಣೆಗಳು

"ಚೆಲುವೆ ಮುನಿಸನು ತೊರೆಯೆ! ಬಿದ್ದೆ ಕಾಲಿಗೆ ನೋಡೆ ಇಂಥ ಕಡುಮುನಿಸನ್ನು ಮೊದಲು ನಿನ್ನಲಿ ಕಾಣೆ!" ಇನಿಯ ನುಡಿದಿರಲಿಂತು ಮರುಮಾತನಾಡದೆಯೆ  ಅವಳೋರೆಗಣ್ಣಿಂದಲೊಂದು ಹನಿ ಬಿತ್ತಲ್ಲ! ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ -...

ನನ್ನಿನಿಯ

ಹಂಸಾನಂದಿ ಜುಲೈ ೩೦ ಬ್ಲಾಗ್ ೧೦೨ ವೀಕ್ಷಣೆಗಳು

ದೂರವಿದ್ದೇ ಮೈಯ ಸುಟ್ಟನು;   ಅವನ ಸೇರಲು    ನನ್ನ ಅಂಗಗಳೇ ಕರುಬುವುವು  ಒಂದರ ಮೇಲೊಂದು ಕಣ್ಣಿಗೆ ಬಿದ್ದೊಡನೆ ಎನ್ನೆದೆಯ  ಕಸಿದ ; ಸೋಕಿದರೆ  ಅಂಕೆ ತಪ್ಪುವುದೊಡಲು ಅವನ ಪಡೆದರೂ ಚಣದ ಸುಖ   ತೆರಳುವುದು  ಅವನೊಡನೆಯೇ...

ನಿರಾಕರಣ

ಹಂಸಾನಂದಿ ಫೆಬ್ರ ೧೩ ಬ್ಲಾಗ್ ೧೧೫ ವೀಕ್ಷಣೆಗಳು

ಅವನೆದುರು ಕಂಡಿರಲು ಮೊಗವನ್ನು ಬಾಗಿಸುತ ನೋಟವನು ಕೆಳಗೆ ನೆಟ್ಟೆ ಅವನ ಮಾತುಗಳನ್ನು ಕೇಳಬಯಸಿದ ಕಿವಿಗಳನ್ನು ನಾ ತಡೆದುಬಿಟ್ಟೆ ಬೆವರ ಸಾಲನು ಹೊತ್ತು ಗಲ್ಲ ನವಿರೇಳುವುದನಂಗೈಲೆ ಮರೆಮಾಚಿದೆ ರವಿಕೆಯೊಂದಂದಂಚು ಸೀಳುತಿರುವನು...

ತಿಳಿಯದವಳು

ಹಂಸಾನಂದಿ ಜನ ೦೯ ಬ್ಲಾಗ್ ೧೧೨ ವೀಕ್ಷಣೆಗಳು

ನಲ್ಲ ಬಳಿಬಂದು  ನುಡಿಯೆ ಸವಿಮಾತುಗಳ ಮೈಯೆಲ್ಲ ಕಿವಿಯಾಯ್ತೊ ಕಣ್ಣಾಯ್ತೊ ಎಂಬುದನು ನಾನರಿಯೆ!  ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ, ಪದ್ಯ 64 ) : ನ ಜಾನೇ ಸಮ್ಮುಖಾಯಾತೇ ಪ್ರಿಯಾಣಿ ವದತಿ ಪ್ರಿಯೇ ಪ್ರಯಾಂತಿ ಮಮ ಗ...

ಎಲ್ಲೆಲ್ಲಿ ನೋಡಲಿ ...

ಹಂಸಾನಂದಿ ಡಿಸೆಂ ೧೮ ಬ್ಲಾಗ್ ೧೦೧ ವೀಕ್ಷಣೆಗಳು

ಮಾಳಿಗೆಯ ಮೇಲವಳು ದಿಕ್ಕುದಿಕ್ಕಲ್ಲವಳು ಹಿಂದುಮುಂದೆಲ್ಲಕಡೆ ಅವಳು ಮಂಚದಾ ಮೇಲವಳು ಹಾದಿಹಾದಿಯಲವಳು ಅವಳಿಂದದೂರವಿರಲಾಗಿ  ಹಾಳು ಮನಸಿದಕೇನು ತಿಳಿದೀತು ಅವಳ ಬಿಟ್ಟೇನೊಂದು ಕಾಣದೇನೇ ಅವಳೆ ಅವಳೇ ಅವಳೆ ಅವಳೆ ಜಗವೆಲ್ಲವಿರೆ...

ಅವಳ ಅಂತರಂಗ

ಹಂಸಾನಂದಿ ಡಿಸೆಂ ೦೫ ಬ್ಲಾಗ್ ೧೨೪ ವೀಕ್ಷಣೆಗಳು

ಹುಬ್ಬು ಗಂಟಿಕ್ಕಿದ್ದಾಯಿತು ಬಹುಕಾಲ ಕಣ್ಮುಚ್ಚಿರುವುದನು ರೂಢಿಸಿದ್ದಾಯ್ತು ಜೊತೆಗೆ ಅಳುವುದ ಚೆನ್ನಾಗಿ ಕಲಿಸಿದ್ದಾಯಿತು ನಗುವನೊತ್ತಾಯದಲಿ ಮೌನದಲಿ ನಿಲಿಸಾಯ್ತು ಮನಸ ಹೇಗೋ ಗಟ್ಟಿ ಮಾಡುತ್ತ ಕಡುದಿಟ್ಟತನದಲಿ ಕಟ್ಟಿರಿಸ...

ಹೊರಳು ನೋಟ

ಹಂಸಾನಂದಿ ನವೆಂ ೨೫ ಬ್ಲಾಗ್ ೯೩ ವೀಕ್ಷಣೆಗಳು

ಕಣ್ಣು ತೋರುವವರೆಗು ನಲ್ಲನಾ ಹಾದಿಯನೆ ಕಾಯ್ತು ಬೇಸತ್ತಾಗಲೆ ದಾರಿಗರ ಸಪ್ಪಳವು ನಿಲ್ಲುತಿರೆ ಹೊರಗೆಲ್ಲ ಹಬ್ಬುತಿರೆ ಕಾರ್ಗತ್ತಲೆ ಹೆಣ್ಣಿವಳು ಮನೆಯೆಡೆಗೆ ತಿರುಗುತ್ತ ಹಾಕಿರಲು ಹೆಜ್ಜೆಯೊಂದನ್ನಾಕಡೆ ಕೂಡಲೆಯೆ ಬಂದನೇನೋಯೆನ...

ಅಗಲಿಕೆ

ಹಂಸಾನಂದಿ ಮೇ ೦೬ ಬ್ಲಾಗ್ ೧೧೫ ವೀಕ್ಷಣೆಗಳು

ತೊಟ್ಟ ಬಳೆಗಳು ಕೈಯ ತೊರೆದವು ನಿಲ್ಲದೇ ಸುರಿದವು ಕಣ್ಣ ಹನಿಗಳು ಒಂದು ಚಣದಲ್ಲೇ ದೂರವಾಯ್ತು ಧೈರ್ಯ   ಮನಸೆಲ್ಲೆಲ್ಲೋ ಓಡಿತು ಬಿಟ್ಟು ನನ್ನನೊಂಟಿ ; ಕಲ್ಲುಮನಸಿನ ನಲ್ಲ ನನ್ನ  ತೊರೆದಿರಲು ಜೊತೆಯಲೇ ಇವರೆಲ್...

ಗೆಳತಿಗೊಂದು ಮಾತು

ಹಂಸಾನಂದಿ ಏಪ್ರಿಲ್ ೦೬ ಬ್ಲಾಗ್ ೮೬ ವೀಕ್ಷಣೆಗಳು

      ಅತ್ತ ಹೊರಗಡೆ ತಲೆಯ ಬಾಗಿಸಿ ನೆಲವ ಕೆರೆಯವ ನಲ್ಲನು ತುತ್ತು ತಿನ್ನದೆ ಹೋದ ಗೆಳತಿಯರತ್ತು ಕಂಗಳು ಬಾತಿವೆ ಮತ್ತೆ ಪಂಜರದಲ್ಲಿ ಗಿಳಿಗಳ ಸದ್ದು ಕೇಳದೆ ಹೋಗಿದೆ ಇತ್ತಲಿಂತಹ ಪಾಡು ನಿನ್ನದು! ತೊರೆಯೆ ಹಠವನು ಬೇಗನೆ!...

ಲೆಕ್ಕಾಚಾರ

ಹಂಸಾನಂದಿ ಸೆಪ್ಟೆಂ ೨೪ ಬ್ಲಾಗ್ ೮೮ ವೀಕ್ಷಣೆಗಳು

  ಚೆನ್ನೆ ನಿನ್ನಯ ಮನದೊಳೆನ್ನ ಮೇಲಿರೆ ಮುನಿಸು ಇನ್ನು ಮಾಡುವುದೇನು? ಇರಲಿ ನಿನ್ನಿಷ್ಟ; ಮುನ್ನ ಕೊಟ್ಟದ್ದೆಲ್ಲ  ಮರಳಿ ಕೊಟ್ಟುಬಿಡೆನಗೆ     ನನ್ನ ಮುತ್ತನು ಮತ್ತೆ ಬಿಗಿವಪ್ಪುಗೆಯನು!                      ...

ಒಳಗುಟ್ಟು

ಹಂಸಾನಂದಿ ಸೆಪ್ಟೆಂ ೦೧ ಬ್ಲಾಗ್ ೭೩ ವೀಕ್ಷಣೆಗಳು

ಒಡಲೇಕೆ  ಬಡವಾಯ್ತು? ಬಿಳಿಚಿಕೊಂಡಿದೆ ಗಲ್ಲ?                   ನಡುಗಿಹುದು ಮೈಯೇಕೆ?  ಕೇಳುತಿರೆ ಮನದಿನಿಯ  ಹುಡುಗಿ "ನಾನಿರುವುದೇ ಹೀಗೆಂದು" ಸಾರಿದಳು ನಿಡುಸುಯ್ದು ಹೊರಳಿ ಕಂಬನಿಯ ಕಣ್ಮರೆಸುತಲಿ    ಸಂಸ್ಕೃತ ಮೂಲ...

ಹಮ್ಮು ತೊರೆದವಳು

ಹಂಸಾನಂದಿ ಮೇ ೨೯ ಬ್ಲಾಗ್ ೮೭ ವೀಕ್ಷಣೆಗಳು

ಇಲ್ಲಿವಳು ಹುಬ್ಬುಗಂಟಿಕ್ಕಿದರು ಕಣ್ಣುಗಳು ಚಡಪಡಿಸಿ ನೋಡುತಿಹವು ಸೊಲ್ಲಡಗಿ ನೊಂದಿದ್ದ ಮೊಗದಲ್ಲಿ ಮುಗುಳುನಗೆ ತಂತಾನೆ ತೋರ್ಪಡುವುದು ಕಲ್ಲೆದೆಯ ಮಾಡಿದರು ಅದರ ಕುರುಹರಿಯದಿಹ ಒಡಲು ನವಿರೇಳುತಿಹುದು ನಲ್ಲ ಕಣ್ಣೆದುರಲ್...

ಚಿಗರೆಗಣ್ಣಿಯ ಸಿಟ್ಟು

ಹಂಸಾನಂದಿ ಫೆಬ್ರ ೧೩ ಬ್ಲಾಗ್ ೭೪ ವೀಕ್ಷಣೆಗಳು

ಗೆಳತಿ! ನನ್ನೆದೆ ಒಡೆದರೂ ಸರಿ ; ಎನ್ನೊಡಲ ಆ ಮದನ ಸೊರಗಿಸಿದರೂ ಸರಿ ; ಒಂದೆಡೆ ನಿಲ್ಲದವನಲ್ಲಿ ನಾನದೆಂತು ಒಲವನಿಡಲೇ? ಹೀಗೆಂದು ಸಿಟ್ಟಿನಲಿ ಸೆಡವಿನಲಿ ನುಡಿಯುತ್ತಲೇ ನಲ್ಲನ ದಾರಿಯ ಕಳವಳದಲ...

ಬುವಿಯ ಅಮೃತ

ಹಂಸಾನಂದಿ ಡಿಸೆಂ ೦೭ ಬ್ಲಾಗ್ ೬೩ ವೀಕ್ಷಣೆಗಳು

  ತುಟಿಚಿಗುರ ಮುತ್ತಿಡುತ ಕಚ್ಚಿದರೆ ಬೆದರುತಲಿ ಮುಂಗೈಯ ಈ ಚೆಲುವೆ ಹಿಡಿದೆಳೆವಳು; ಬಿಟ್ಟುಬಿಡು ಬಿಟ್ಟುಬಿಡು ನೀನು ಪೋಕರಿಯೆನುತ ಕಟುನುಡಿದು ಹುಬ್ಬುಗಳ ಕುಣಿಸುತಿಹಳು!ಹುಸಿಯಾಗಿ ಚೀರುತಿಹ ಕೊಂಕಿದಾ ಕಣ್ಣವಳ ಮುತ್ತ...

ಹಾತೊರೆತ

ಹಂಸಾನಂದಿ ಅಕ್ಟೋ ೦೫ ಬ್ಲಾಗ್ ೧೨೫ ವೀಕ್ಷಣೆಗಳು

ಕಿವಿಯಲವನ ಹೆಸರು ಬಿದ್ದರೂ ಮೈ ಮಿಂಚಾಡುವುದು ನವಿರೆದ್ದು; ಕಂಡರವನ ಮೊಗಚಂದಿರವು ಚಂದ್ರಶಿಲೆಯಂತೆ ಕರಗುವುದು! ಇನಿಯ ಬಳಿಬಂದೆನ್ನ ಕೊರಳನು ಅವನ ತೋಳಲಿ ಸೆಳೆದು ಅಪ್ಪಲು ಒಡೆದ ಈ ಮನಕುಂಟು ತಲ್ಲಣ ತಿರುಗಿ ಪೆಡಸಾದೇನೆಂಬ...