ತುಟಿಚಿಗುರ ಮುತ್ತಿಡುತ ಕಚ್ಚಿದರೆ ಬೆದರುತಲಿ
ಮುಂಗೈಯ ಈ ಚೆಲುವೆ ಹಿಡಿದೆಳೆವಳು;
ಬಿಟ್ಟುಬಿಡು ಬಿಟ್ಟುಬಿಡು ನೀನು ಪೋಕರಿಯೆನುತ
ಕಟುನುಡಿದು ಹುಬ್ಬುಗಳ ಕುಣಿಸುತಿಹಳು!

ಹುಸಿಯಾಗಿ ಚೀರುತಿಹ ಕೊಂಕಿದಾ ಕಣ್ಣವಳ
ಮುತ್ತಿಟ್ಟವನಿಗಿಲ್ಲೆ ಅಮೃತವಿಹುದು;
ಇದನೊಂದು ತಿಳಿಯದಾ ತಿಳಿಗೇಡಿಗಳು ತಾನೆ
ಕಡಲ ಸುಮ್ಮನೆ ಕಡೆದ ದೇವತೆಗಳು!
 

ಸಂಸ್ಕೃತ ಮೂಲ (ಅಮರುಕನ ಅಮರುಶತಕದಿಂದ):

ಸಂದಷ್ಟಾಧರಪಲ್ಲವಾ ಸಚಕಿತಮ್ ಹಸ್ತಾಗ್ರಮಾಧುನ್ವತೀ
ಮಾಮಾಮುಂಚಶಠೇತಿ ಕೋಪವಚನೈರಾನರ್ತಿತಭ್ರೂಲತಾ |
ಶೀತ್ಕಾರಾಂಚಿತಲೋಚನಾಸರಭಸಂ ಯೈಶ್ಚುಂಬಿತಾಮಾನಿನೀ
ಪ್ರಾಪ್ತಂತೈರಮೃತಂ ಶ್ರಮಾಯಮಥಿತೋ ಮೂಢೈಃ ಸುರೈಃ ಸಾಗರಃ ||

-ಹಂಸಾನಂದಿ

 

ಕೊ: ಅನುವಾದದಲ್ಲಿ ನೆರವಾದ ಗೆಳೆಯ___LINK_OPEN_target="_blank" href="http://nannabaraha.blogspot.com/"___ ಮಂಜುನಾಥ ಕೆ.ಎಸ್. ಅವರಿಗೆ ನಾನು ಆಭಾರಿ.