ದುಷ್ಕೃತ್ಯ
ಲೇಖಕರು: ಗಿರಿಮನೆ ಶ್ಯಾಮರಾವ್
ಪ್ರಕಾಶಕರು: ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪
₹180.00
₹200.00
10% ರಿಯಾಯಿತಿ
ಲಭ್ಯವಿದೆ
₹೨೦ ಉಳಿತಾಯ (10% ರಿಯಾಯಿತಿ)
ಪುಸ್ತಕದ ಬಗ್ಗೆ
ಅತ್ಯಾಚಾರದಂಥಾ ಒಂದು ಘಟನೆ ನಡೆದಾಗ ಅದನ್ನು ನಾನಾ ದೃಷ್ಟಿಕೋನಗಳಿಂದ ನೋಡುವವರಿರುತ್ತಾರೆ. ಅದಕ್ಕೆ ಸಂಬಂಧಪಟ್ಟವರು ಅನುಭವಿಸುವ ನೋವು ಸಂಕಟಗಳನ್ನು ಬೇರೆಯವರು ಕಲ್ಪಿಸಬಹುದಾದರೂ ಎಂದಿಗೂ ಪೂರ್ತಿಯಾಗಿ ಅರ್ಥಮಾಡಿಕೊಳ್ಳಲಾರರು. ಅವರ ನೋವು, ಸಂಕಟಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವವರ ಹಾಗೂ ಅತ್ಯಾಚಾರಿಗಳ ಹಿಂದಿನ ಬದುಕು ಮತ್ತು ಮನೋಭಾವಗಳ ಬಗ್ಗೆ ತಿಳಿಸುವ ಪ್ರಯತ್ನವೇ ಈ ಕೃತಿ.
ಪ್ರತಿಯೊಂದು ವಿಕೃತ ಮನಸ್ಸುಗಳ ಹಿಂದೆ ಒಂದೊಂದು ಕತೆಯೂ ಅದಕ್ಕೊಂದು ಕಾರಣವೂ, ಸಮಾಜದ ಕೊಡುಗೆಯೂ ಇರುತ್ತದೆ. ಆದರೆ ದುಷ್ಕೃತ್ಯ ಎಸಗಿದವರಿಗೆ ತಮ್ಮಿಂದ ಅನ್ಯಾಯಕ್ಕೊಳಗಾದವರ ನೋವಿನ ಕಲ್ಪನೆ ಎಳ್ಳಷ್ಟೂ ಇರುವುದಿಲ್ಲ. ಬದಲಿಗೆ ವಿಕೃತಾನಂದ ಇರುತ್ತದೆ. ದುರದೃಷ್ಟವೆಂದರೆ ಅಂತಹಾ ದುಷ್ಟರಿಂದ ನೋವು ಅನುಭವಿಸುವವರು ಮಾತ್ರ ಮುಗ್ಧರೂ ಬಡವರೂ ಆಗಿರುತ್ತಾರೆ. ಏಕೆಂದರೆ ಬಲಿಷ್ಠರ ತಂಟೆಗೆ ದುಷ್ಟರು ಹೋಗುವುದೇ ಇಲ್ಲ!
ಇದು 'ಮನೋವೈಜ್ಞಾನಿಕ ಕಾದಂಬರಿ ಸರಣಿ'ಯ ಮೂರನೇಯ ಕೃತಿ. - ಗಿರಿಮನೆ ಶ್ಯಾಮರಾವ್ (ಬೆನ್ನುಡಿಯಲ್ಲಿ)
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹180.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.