ಮುಖಪುಟ / ಪುಸ್ತಕ ಸಂಪದ / ಬಣ್ಣದ ಜಿಂಕೆ
ಬಣ್ಣದ ಜಿಂಕೆ

ಬಣ್ಣದ ಜಿಂಕೆ

ಲೇಖಕರು: ಗಿರಿಮನೆ ಶ್ಯಾಮರಾವ್

ಪ್ರಕಾಶಕರು: ಗಿರಿಮನೆ ಪ್ರಕಾಶನ

₹198.00 ₹220.00 10% ರಿಯಾಯಿತಿ ಲಭ್ಯವಿದೆ
₹೨೨ ಉಳಿತಾಯ (10% ರಿಯಾಯಿತಿ)

ಪುಸ್ತಕದ ಬಗ್ಗೆ

ಗಿರಿಮನೆ ಶ್ಯಾಮರಾವ್ ಅವರ “ಮಲೆನಾಡಿನ ರೋಚಕ ಕತೆಗಳು” ಸರಣಿಯ ಹದಿನೈದನೇ ಪುಸ್ತಕವೇ “ಬಣ್ಣದ ಜಿಂಕೆ". ಈಗಾಗಲೇ ೧೪ ಪುಸ್ತಕಗಳು ಈ ಸರಣಿಯಲ್ಲಿ ಪ್ರಕಟವಾಗಿದ್ದರೂ ಎಲ್ಲಿಯೂ ರೋಚಕತೆಗೆ ಕಡಿಮೆಯಾಗದಂತೆ ಓದುಗರನ್ನು ಮುಂದಿನ ಸರಣಿ ಪುಸ್ತಕಕ್ಕೆ ಕಾಯುವಂತೆ ಮಾಡುವುದೇ ಗಿರಿಮನೆಯವರ ಬರವಣಿಗೆಯ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು. ಕಾಡಿನ ಪರಿಸರದಲ್ಲೇ ಬಹಳಷ್ಟು ವರ್ಷಗಳನ್ನು ಕಳೆದ ಗಿರಿಮನೆಯವರಿಗೆ ಅಲ್ಲಿಯ ಕಥೆಗಳನ್ನು ಬಹಳ ಸೊಗಸಾಗಿ, ರಸವತ್ತಾಗಿ ಹೇಳುವ ಕಲೆ ಕರತಲಾಮಲಕವಾಗಿದೆ. ‘ಬಣ್ಣದ ಜಿಂಕೆ’ ಕೃತಿಯ ಬೆನ್ನುಡಿಯಲ್ಲಿ ಬರೆದಂತೆ ಗ್ಲಾಮರ್ ಜಗತ್ತು ಎಂದರೆ ಇದೊಂದು ಸೆಳೆಯುವ ಸುಂದರವಾದ ಮಾಯಾಲೋಕ, ಅದರ ಒಳಹೊರಗು ಬೇಗ ಎಲ್ಲರಿಗೂ ತಿಳಿಯುವುದಿಲ್ಲ. ಕಲೆಗೂ ಗ್ಲಾಮರಿಗೂ ಇರುವ ವ್ಯತ್ಯಾಸ ಬೇಗ ಅರಿವಾಗುವುದಿಲ್ಲ. ಎಲ್ಲೋ ಒಬ್ಬಿಬ್ಬರ ಹೊರತಾಗಿ ಗ್ಲಾಮರ್ ಹಿಂದೆ ಬಿದ್ದವರಲ್ಲಿ ಸಾಂಸಾರಿಕ ಸುಖ ಮರೀಚಿಕೆ. ಕಾರಣ, ಅನಿವಾರ್ಯ ಎಂಬಂತೆ ಭಾಸವಾಗುವ ಲೈಂಗಿಕ ಸ್ವಚ್ಛಂದದ ಆಕರ್ಷಣಿ, ಅಷ್ಟೊಂದು ಸೆಲೆಬ್ರಿಟಿ ಎನಿಸಿಕೊಂಡವರು ಕೂಡ ಕೊರಗಿ ಬದುಕು ಕಳೆಯುವುದೂ ಆತ್ಮಹತ್ಯೆ ಮಾಡಿಕೊಳ್ಳುವುದೂ ಅದರ ದುರಂತ. ಗ್ಲಾಮರ್ ಜಗತ್ತಿನ ಬದುಕಿಗೂ ಪಶ್ಚಿಮಘಟ್ಟದ ಕಾಡಿಗೂ ಎಲ್ಲಂದೆಲ್ಲಿಯ ಸಂಬಂಧ? ಬಯಲು ಸೀಮೆಯಲ್ಲಿ ಹುಟ್ಟಿ ಮದುವೆಯಾದವರಲ್ಲಿ ಒಬ್ಬರು ಮಲೆನಾಡಿನ ಕಾಡಿಗೆ ಬಂದು ಅಲ್ಲೇ ಬದುಕು ಕಟ್ಟಕೊಂಡರೆ ಮತ್ತೊಬ್ಬರು ಗ್ಲಾಮರ್ ಜಗತ್ತಿನ ಒಳಗೆ ಮುಳುಗಿ ಕಳೆದೇ ಹೋಗುವ ಕಾಲ್ಪನಿಕ ಕಾದಂಬರಿ ಇದು. ಇದು ಮಲೆನಾಡಿನ ರೋಚಕ ಕತೆಗಳ ಸರಣಿಯ ಹದಿನೈದನೆಯ ಭಾಗ ಓದುಗರು ಅಪೇಕ್ಷಿಸಿದಷ್ಟು ದಿನ ಸರಣಿಯೂ ಮುಂದುವರೆಯುತ್ತದೆ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹198.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?