ಮುಖಪುಟ / ಪುಸ್ತಕ ಸಂಪದ / ಮೂರು ತಲೆಮಾರು
ಮೂರು ತಲೆಮಾರು

ಮೂರು ತಲೆಮಾರು

ಲೇಖಕರು: ಗಿರಿಮನೆ ಶ್ಯಾಮರಾವ್

ಪ್ರಕಾಶಕರು: ಗಿರಿಮನೆ ಪ್ರಕಾಶನ

₹252.00 ₹280.00 10% ರಿಯಾಯಿತಿ ಲಭ್ಯವಿದೆ
₹೨೮ ಉಳಿತಾಯ (10% ರಿಯಾಯಿತಿ)

ಪುಸ್ತಕದ ಬಗ್ಗೆ

ಗಿರಿಮನೆ ಶ್ಯಾಮರಾವ್ ಅವರ “ಮಲೆನಾಡಿನ ರೋಚಕ ಕತೆಗಳು” ಸರಣಿಯ ಹದಿನಾಲ್ಕನೇ ಪುಸ್ತಕವೇ “ಮೂರು ತಲೆಮಾರು". ಈಗಾಗಲೇ ೧೩ ಪುಸ್ತಕಗಳು ಈ ಸರಣಿಯಲ್ಲಿ ಪ್ರಕಟವಾಗಿದ್ದರೂ ಎಲ್ಲಿಯೂ ರೋಚಕತೆಗೆ ಕಡಿಮೆಯಾಗದಂತೆ ಓದುಗರನ್ನು ಮುಂದಿನ ಸರಣಿ ಪುಸ್ತಕಕ್ಕೆ ಕಾಯುವಂತೆ ಮಾಡುವುದೇ ಗಿರಿಮನೆಯವರ ಬರವಣಿಗೆಯ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು. ಕಾಡಿನ ಪರಿಸರದಲ್ಲೇ ಬಹಳಷ್ಟು ವರ್ಷಗಳನ್ನು ಕಳೆದ ಗಿರಿಮನೆಯವರಿಗೆ ಅಲ್ಲಿಯ ಕಥೆಗಳನ್ನು ಬಹಳ ಸೊಗಸಾಗಿ, ರಸವತ್ತಾಗಿ ಹೇಳುವ ಕಲೆ ಕರತಲಾಮಲಕವಾಗಿದೆ. ‘ಮೂರು ತಲೆಮಾರು’ ಕೃತಿಯ ಬೆನ್ನುಡಿಯಲ್ಲಿ ಬರೆದಂತೆ “ ೧೯೭೩-೭೪ರಲ್ಲಿ ಸರಕಾರ 'ಉಳುವವನಿಗೇ ಭೂಮಿ' ಎಂಬ ಕಾನೂನು ಜಾರಿಗೆ ತಂದಾಗ ದ.ಕನ್ನಡದಲ್ಲಿ ನಡೆದಿದ್ದು ಒಂದು ರೀತಿಯಲ್ಲಿ ಕ್ರಾಂತಿಯೇ. ಆಗ ಬಹಳಷ್ಟು ಜನರ ಬದುಕು ಏರುಪೇರಾಗಿ ಒಂದು ಮಟ್ಟಕ್ಕೆ ಸಮಾನತೆ ಮೂಡಿದರೂ ಅಲ್ಲಿನ ಮೂಲನಿವಾಸಿಗಳಾದ ಕೊರಗರಂಥಾ ಜನಾಂಗದವರಲ್ಲಿ ಯಾವ ಏರಿಳಿತವೂ ಆಗದೆ ಅವರು ಘಟ್ಟ ಹತ್ತಿ ಕೂಲಿಯನ್ನೇ ಗಟ್ಟಿಯಾಗಿ ಆರಿಸಿಕೊಂಡು ಬಿಟ್ಟರು. ಅದಕ್ಕೆ ಕಾರಣ ಹಲವು. ಅದೆಲ್ಲದರ ಪರಿಣಾಮ; ಮತಾಂತರದ ಪಿಡುಗು! ಈ ಕೃತಿಯಲ್ಲಿ ಊರುಬಿಟ್ಟು ಘಟ್ಟಹತ್ತಿದ ದ.ಕನ್ನಡದ ಮೇಲಿನ ಸ್ತರದ ಹವ್ಯಕ ಮತ್ತು ಅತೀ ಹಿಂದುಳಿದ ಎಂಬ ಹಣೆಪಟ್ಟಿ ಹೊತ್ತ ಕೊರಗ, ಈ ಕುಟುಂಬಗಳ ಮೂರು 'ತಲೆಮಾರಿನ ಬದುಕಿನ ಕತೆಯನ್ನು ವಾಸ್ತವದ ಆಧಾರದ ಮೇಲೆ ಕಾಲ್ಪನಿಕವಾಗಿ ಆರಿಸಿಕೊಂಡಿದ್ದೇನೆ.”
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹252.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?