ಮಳೆ ಕೊರತೆಯಿಂದ ಸೆಖೆಯ ಪ್ರಮಾಣ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ತಂಪಾಗಿ ಏನಾದರೂ ಕುಡಿಯುವ ಎಂದು ಮನಸ್ಸಾದಾಗ ನನಗೆ ಮೊದಲು ಹೊಳೆಯುವುದೇ ಕಬ್ಬಿನ ಹಾಲು. ಶುಂಠಿ, ನಿಂಬೆ ರಸ ಸೇರಿಸಿ ತಯಾರಿಸಿದ ಕಬ್ಬಿನ ಹಾಲು ಕುಡಿಯಲು ಅಮೃತ ಸಮಾನ. ಆದರೆ ರಸ್ತೆ ಬದಿಯಲ್ಲಿ ಕಬ್ಬಿನ ಹಾಲು ಸೇವಿಸುವಾಗ ಸ್ವಚ್ಛತೆಯ ಬಗ್ಗೆ ಗಮನವಹಿಸಿ. ಮುಖ್ಯವಾಗಿ ತಂಪು ಮಾಡಲು ಬಳಸುವ ಐಸ್ (ಮಂಜುಗೆಡ್ಡೆ) ಬಗ್ಗೆ.
ಬೇಗದಲ್ಲೇ ಕಬ್ಬಿನ ಹಾಲಿನ ಬಗ್ಗೆ ವಿವರವಾದ ಲೇಖನ ನಿಮ್ಮ 'ಸಂಪದ' ದಲ್ಲಿ...