Sampada Logo

ಪೋಸ್ಟ್

ಥ್ರೆಡ್ ಸಂದರ್ಭ
ಅಡ್ಡೂರು ಕೃಷ್ಣ ರಾವ್
ಈಗಿಗ ವಾರ್ತಾಪತ್ರಿಕೆಗಳನ್ನು ಓದಬೇಕೆಂದೇ ಅನಿಸೋದಿಲ್ಲ. ಯಾಕೆಂದರೆ ಅದರಲ್ಲಿರುವ ಬಹುಪಾಲು ಸುದ್ದಿಗಳು ನಮಗೆ ಈಗಾಗಲೇ ತಿಳಿದಿರುತ್ತವೆ. ಅವನ್ನು ಟಿವಿ-ಚಾನೆಲುಗಳಲ್ಲಿ ಮುಂಚಿನ ದಿನವೇ ನೋಡಿರುತ್ತೇವೆ. ಇಮತಹ ಪರಿಸ್ಥಿತಿಯಲ್ಲಿ ಈಗಿರುವ ಓದುಗರನ್ನು ಉಳಿಸಿಕೊಳ್ಳಲು ವಾರ್ತಾಪತ್ರಿಕೆಗಳು ಬದಲಾವಣೆಗಳನ್ನು ಮಾಡಿಕೊಳ್ಳಲೇ ಬೇಕಾಗಿದೆ. ಸುದ್ದಿಗಳನ್ನು ನೇರಾನೇರವಾಗಿ, ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಪ್ರಕಟಿಸಬಹುದಲ್ಲವೇ?
೧೭೮
ಕೆ.ಪಿ.ಅಶ್ವಿನ್ ರಾವ್
ನಿಮ್ಮ ಅನಿಸಿಕೆ ಸತ್ಯ ಸರ್, ಪತ್ರಿಕೆಯಲ್ಲಿ ಹಿಂದಿನ ಹಳೆಯ ಪತ್ರಕರ್ತರ ಸಂಖ್ಯೆಯೇ ಅಧಿಕವಾಗಿರುವುದರಿಂದ ಹೀಗಾಗುತ್ತದೆ ಎನ್ನುವುದು ನನ್ನ ಅನಿಸಿಕೆ. ಹೊಸ ಯುವ ಪತ್ರಕರ್ತರು ದೃಶ್ಯ ಮಾಧ್ಯಮಕ್ಕೆ ಹೋಗುತ್ತಾರೆ. ಉತ್ತಮ ಅಂಕಣ ಬರಹಗಳ ಮೂಲಕ ಓದುಗರನ್ನು ಆಕರ್ಷಿಸಬಹುದು. ಕೆಲವು ಪತ್ರಿಕೆಗಳು (ವಿಶ್ವವಾಣಿ, ವಿಜಯ ಕರ್ನಾಟಕ) ಈ ರೀತಿ ಮಾಡುತ್ತಿವೆ. ಜನರಿಗೆ ಪತ್ರಿಕೆ ಓದುವಾಗ ಅರ್ಥವಾಗದ ಅಂದರೆ ಚುನಾವಣಾ ಪಟ್ಟಿ ಪರಿಷ್ಕರಣೆ, ಬಜೆಟ್, ಕ್ರೀಡಾ ವಿಷಯಗಳು, ನಕಲಿ ಮದ್ಯ, ಆಹಾರ ಇವುಗಳ ಬಗ್ಗೆ ವಿವರವಾದ ಮಾಹಿತಿಯನ್ನು ಆಯಾ ವಿಭಾಗದ ಪರಿಣಿತರು ಬರೆದರೆ ಪತ್ರಿಕೆಗಳು ಆಸಕ್ತಿದಾಯಕ ಮತ್ತು ಮಾಹಿತಿ ಪೂರ್ಣವಾಗುತ್ತದೆ. ನನ್ನ ಭಾವನೆ
10:59 AM · ಗುರುವಾರ, ಆಗಸ್ಟ್ ೨೭, ೨೦೨೬ · ೧೦೪ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!