ನಾನು ಈಗ evanston (ಇವನ್ಸ್ಟನ್) ಎಂಬ ಊರಿಗೆ ಬಂದಿದ್ದೇನೆ. ಇದು ಚಿಕಾಗೋ ನಗರಕ್ಕೆ ಹತ್ತಿರದಲ್ಲಿದೆ. ಇಲ್ಲಿನ ಸಾರ್ವಜನಿಕ ಗ್ರಂಥಾಲಯ ನನ್ನ ಊಹೆಗೂ ಮೀರಿ ಸುಂದರವಾಗಿದೆ. ಇಲ್ಲಿನ ನಿವಾಸಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ಮನೆಗೆ ತೆಗದುಕೊಂಡು ಹೋಗಲು ಕೊಡುತ್ತಾರೆ. ಒಮ್ಮೆಗೆ ನೂರು ಪುಸ್ತಕ ಕೊಂಡೊಯ್ಯಬಹುದು. ಅಲ್ಲಿಯೇ ಕುಳಿತು ಓದಲು ಅನುಕೂಲವಾಗುವ ಟೇಬಲ್ ಕೂರ್ಚಿಗಳಿವೆ. ಬೇಕಾದರೆ ಉಚಿತವಾಗಿ ಕಂಪ್ಯೂಟರನ್ನು ದಿನಕ್ಕೆ ಒಂದೂವರೆ ಗಂಟೆ ಉಪಯೋಗಿಸಬಹುದು, ವಿಡಿಯೋಗಳನ್ನು ನೋಡಬಹುದು,ದಿನಕ್ಕೆ ೪ ಪುಟಗಳನ್ನು ಉಚಿತವಾಗಿ ಪ್ರಿಂಟ್ ಮಾಡಿಕೊಳ್ಳಬಹುದು.
ದಿನವೂ ನಾಗರಿಕರಿಗೆ, ಮಕ್ಕಳಿಗೆ ವಿಶೇಷ ಕಾರ್ಯಕ್ರಮ.
ಹರಿ ಪ್ರಸಾದ್ ನಾಡಿಗ್
ಪ್ರತಿಕ್ರಿಯಿಸಿದ್ದಾರೆ
ನನ್ನ ಮಕ್ಕಳು ಸಿಂಗಪುರದಲ್ಲಿರುವ ಗ್ರಂಥಾಲಯವನ್ನು ನೋಡಿ ಹೀಗೆಯೇ ಇಷ್ಟಪಟ್ಟಿದ್ದರು.
ನಮ್ಮ ದೇಶದಲ್ಲಿ ಕೂಡ ಹೀಗೆ ಮಾಡುವ ಅವಕಾಶಗಳಿವೆ. ಸಣ್ಣ ಪ್ರಮಾಣದಲ್ಲಿ ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ...
ಎಲ್ಲಾ ೨ ಪ್ರತಿಕ್ರಿಯೆಗಳನ್ನು ನೋಡಿ →