ನವಂಬರ್ ತಿಂಗಳಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವವನ್ನು ಹಬ್ಬದಂತೆ ಆಚರಿಸಿದರೆ ಸಾಲದು . ಸಾಮಾನ್ಯ ಜನರು ವ್ಯವಹರಿಸುವ ಸರ್ಕಾರದ ಇಲಾಖೆಗಳಲ್ಲಿ ,ಪ್ರತಿ ನಿತ್ಯ ಪ್ರಯಾಣಿಸುವ ಸಾರ್ವಜನಿಕ ವಾಹನಗಳಲ್ಲಿ , ಹೋಟೆಲ್ ಹಾಗೂ ಇತರ ಆಹಾರ ಮಳಿಗೆಗಳಲ್ಲಿ , ಸಿನಿಮಾ ಮಂದಿರಗಳಲ್ಲಿ ಕನ್ನಡದಲ್ಲೇ ವ್ಯವಹರಿಸುವಂತಾದರೆ ಕನ್ನಡದ ಬಳಕೆ ಹೆಚ್ಚಾಗಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ಸಿಗಲಿದೆ . ಈ ಬಗ್ಗೆ ಕನ್ನಡಿಗರು ಒಂದಷ್ಟು ಆಸಕ್ತಿ ವಹಿಸುವಲ್ಲಿ ಕನ್ನಡ ಸಂಘಟನೆಗಳು ಕಾರ್ಯಕ್ರಮ ರೂಪಿಸಲಿ .