ಬೈಬಲ್ಲು ಹೇಳುವುದು ಜಗ ಜೀವ ದೇವ
ಕುರಾನು ಸಾರುವುದು ಜಗ ಜೀವ ದೇವ |
ಸಕಲ ಮತಗಳ ಸಾರ ಜಗ ಜೀವ ದೇವ
ಒಂದಲದೆ ಹಲವುಂಟೆ ಕಾಣೆ ಮೂಢ || .325
ನಾನಾರೆಂದು ತಿಳಿಸಿ ಹೇಳುವನೆ ಗುರುವು
ಅವನೆಂತೆಂದು ತೋರಿ ತಿದ್ದುವನೆ ಗುರುವು |
ಜಗವನನುಭವಿಸೆ ಮಾರ್ಗದರ್ಶಿಯೆ ಗುರುವು
ಗುರಿಯವನು ಗುರುವವನು ಒಬ್ಬನೇ ಮೂಢ || ..326
****************
-ಕ.ವೆಂ.ನಾಗರಾಜ್.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!