ಅವಳು ಖುಷಿಯಾಗಿರಬೇಕು ಎಂದು ಅಸೆ ಪಟ್ಟವನಿಗೆ
ಬೇರೆಯವನ ಜೊತೆ ಅವಳು ಖುಷಿಯಾಗಿರುವುದು ಇಷ್ಟವಾಗಲಿಲ್ಲ.
ಎಲ್ಲರೂ ಅವರವರ ಮಟ್ಟಿಗೆ ಸರಿ;
ಅದ್ದರಿಂದ ಸತ್ಯದ ವ್ಯಾಖ್ಯಾನವೇ 'ಅರ್ಧ ಸತ್ಯ'
ನುಚ್ಚುನೂರಾಗಿದ್ದೇನೆ, ನನ್ನ ಮುಖದ ಹೊಸ
ಅನಾವರಣ ಸಾಧ್ಯ ಎಂಬ ನಂಬಿಕೆ ಗರಿಗೆದರಿದೆ
ಒಂದು ರಾತ್ರಿ ಸತ್ಯದ ಹೊಸ ದೃಷ್ಟಿ ಪಡೆದವ
ಕೇವಲ ಮನುಷ್ಯನಾಗಿ ಉಳಿಯಲಿಲ್ಲ.
ಅವನಿಗೆ ಧರ್ಮ ಅರ್ಥವಾದ ದಿನ ಬರಿಗಾಲಲ್ಲಿ ನಡೆದ
ಸ್ವಾಮಿಯಾಗಿದ್ದವ ಸನ್ಯಾಸಿಯಾದ
ಎಲ್ಲರಿಗೆ ಉತ್ತರ ಕೊಡುವ ಅಗತ್ಯ ನಿನಗಿಲ್ಲ
ನಿನಗೆ ನೀನು ಪ್ರಶ್ನೆಯಾಗದಿದ್ದರೆ ಸಾಕು
ಜಡಿ ಮಳೆಯಲ್ಲಿ ಅವಳು ಇವನ ಮನೆ ಬಾಗಿಲು
ತಟ್ಟಿದ್ದು ಅವನಿಗೆ ಕೇಳಿಸಲೇ ಇಲ್ಲ
ನೀನೆಂದಿಗೂ ಸಾಗರದಂತೆ ಗೆಳತಿ
ಏಕೆಂದರೆ ನಿನ್ನ ಪ್ರತಿ ಅಲೆ ನನ್ನನ್ನು ಸವೆಸುತ್ತದೆ.
ನಿನ್ನ ಪ್ರೇಮದಲ್ಲಿ ಮುಗಿಲಾಗಿ ತೇಲುತ್ತಿದ್ದವ
ಮಳೆಯಾಗಿ ಹಸಿರಾದೆ
ಇನ್ನೂ ನೀನು ನಿನ್ನೆ ಹೇಳಿದ ಜೋಕ್ ನೆನಪಿದೆ
ಆದರೆ ನಗಲು ಹತ್ತಿರ ನೀನಿಲ್ಲ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)