೧೯೨೬ರ ಫೆಬ್ರುವರಿ ೧೮ರಂದು ವಾರ್ಧಾದಲ್ಲಿ ಸಂಘದ ಇನ್ನೊಂದು ಶಾಖೆ ಆರಂಭವಾಯಿತು. ನಾಗಪುರದಿಂದ ಹೊರಗೆ ಆರಂಭವಾದ ಪ್ರಥಮ ಶಾಖೆ ಅದೇ. ಸಂಘದ ಅನುಶಾಸನಬದ್ಧ ತರುಣರ ಮೂಲಕ ಸಂಘಟನೆಯ ಶಕ್ತಿ ಮತ್ತು ಮಹತ್ವಗಳ ಬಲವಾದ ಮುದ್ರೆಯನ್ನು ಸಮಾಜದಮೆಲೆ ಅಚ್ಚೊತ್ತಬಲ್ಲಂತಹ ಸದವಕಾಶವೊಂದು ಅಷ್ಟರಲ್ಲಿ ಒದಗಿ ಬಂತು. ನಾಗಪುರದ ಸಮೀಪದಲ್ಲಿನ ರಾಮಟೇಕನಲ್ಲಿ ನಡೆಯುವ ರಾಮನವಮಿ ಜಾತ್ರೆಯಲ್ಲಿ ಯಾತ್ರಿಕರಿಗೆ ಸರ್ವವಿಧ ಸೌಕರ್ಯಗಳನ್ನು ವ್ಯವಸ್ಥೆಗೊಳಿಸುವ ಸಲುವಾಗಿ ಸಂಘದ ತರುಣರನ್ನು ಕರೆದೊಯ್ಯುವ ವಿಚಾರ ಡಾಕ್ಟರ್ ಜೀ ಮಾಡಿದರು. ಅದರಿಂದ ಸಂಘದ ಸ್ವಯಂಸೇವಕರಲ್ಲಿಯೂ ಆತ್ಮವಿಶ್ವಾಸ ಹಾಗೂ ಸಂಘನಿಷ್ಠೆ ಬೆಳೆಸಬಹುದು ಎಂದು ಅವರು ಯೋಚಿಸಿದರು.
ಆದರೆ, ಅದೇ ನಿಮಿತ್ತವಾಗಿ ಅಲ್ಲಿ ತಮ್ಮ ಗುಂಪನ್ನು ಪ್ರತ್ಯೇಕವಾಗಿ ಗುರುತಿಸಲು ಒಂದು ಗಣವೇಷ ಹಾಗೂ ಸಂಘಕ್ಕೊಂದು ಹೆಸರು ಸಹ ಅಗತ್ಯವಾಗಿ ಬೇಕೆನಿಸಿತು. ಸಂಘದ ಹೆಸರನ್ನು ನಿರ್ಧರಿಸುವ ಸಲುವಾಗಿ ಡಾಕ್ಟರ್ ಜೀತಮ್ಮ ಮನೆಯಲ್ಲಿ ೧೯೨೬ ಎಪ್ರಿಲ್ ೧೭ರಂದು ಒಂದು ಬೈಠಕ್ ಕರೆದರು. ಈ ಬೈಠಕ್ನಲ್ಲಿ ೨೬ ಮಂದಿ ಹಾಜರಿದ್ದರು. ಸೂಚಿತವಾದ ಅನೇಕ ಹೆಸರುಗಳ ಬಗ್ಗ್ತೆ ಸಾಕಷ್ಟು ಚರ್ಚೆ ನಡೆದು ಕೊನೆಯಲ್ಲಿ
೧. ರಾಷ್ಟ್ರೀಯ ಸ್ವಯಂಸೇವಕ ಸಂಘ
೨. ಜರಿಪಟಕಾ ಮಂಡಲ
೩. ಭಾರತೋದ್ಧಾರಕ ಮಂಡಲಿ
ಎಂಬ ೩ ಹೆಸರುಗಳು ಆಯ್ಕೆಗೆ ಉಳಿದವು. ಅಂತಿಮವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಹೆಸರು ಸ್ವೀಕೃತವಾಯಿತು. ಭಾರತದಲ್ಲಿ "ಹಿಂದುಗಳು" ಮತ್ತು "ರಾಷ್ಟೀಯರು" ಎಂಬ ಶಬ್ದಗಳು ಸಮಾನ ಅರ್ಥವುಳ್ಳವು ಎಂದು ಡಾಕ್ಟರ್ ಜೀ ಸಂಘದ ಹೆಸರಿನ ಮೂಲಕ ದ್ುಢಗೊಳಿಸಿದರು.
ರಾಮಟೇಕದ ಜಾತ್ರೆಯಲ್;ಲಿ ಧರಿಸುವ ಸಲುವಾಗಿ ಎಲ್ಲರೂ ಒಂದೇವೇಷ ಸಿದ್ಧಪಡಿಸಲು ಡಾಕ್ಟರ್ ಜೀ ತಿಳಿಸಿದರು. ಸಂಘದ ಮೊದಲ ಗಣವೇಷದಲ್ಲಿ ಖಾಕಿ ನಿಕ್ಕರ್, ಖಾಕಿ ಅಂಗಿ ಮತ್ತು ಎರಡು ಗುಂಡಿಗಳುಳ್ಳ ಖಾಕಿ ಟೋಪಿ ಇದ್ದವು. ಆಗಿನ ಖಾಕಿ ನಿಕ್ಕರ್ ಮೊಣಕಾಲಿನವರೆಗೆ ಬರುವಷ್ಟು ಉದ್ದವಿರುತ್ತಿತ್ತು.
ರಾಮಟೇಕದಲ್ಲಿ ಸ್ವಯಂಸೇವಕರು ಮಾಡಿದ ಸೇವೆ ಮತ್ತು ವ್ಯವಸ್ಥೆಗಳು ಎಲ್ಲರಮೇಲೆ ಅಚ್ಚಳಿಯದ ಪ್ರಭಾವ ಬೀರಿ, ಸಂಘದ ಬೆಳವಣಿಗೆಗೆ ಪುಟ ಕೊಟ್ಟವು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!