ಅಮೃತ
ಫಕೀರರು ಹೇಳುತ್ತಾರೆ
ತಮ್ಮಿಷ್ಟದ ಬದುಕನ್ನು
ಬದುಕುವುದು ಪವಾಡವಂತೆ.
ಅವಳು ಈ ಪವಾಡ
ತನ್ನ ಸಹಜ ಸ್ವಭಾವ
ಎಂಬಂತೆ ಬದುಕಿದಳು.
ಕವಿತೆಯಂತೆ ಬದುಕಿದಳು
ಬದುಕನ್ನು ಬರೆದಳು...
ಮಿಲನ
ಗೊತ್ತಿಲ್ಲ ಅದ್ಯಾವಾಗ
ಒಂದಾಗಿ ಬೇರೆಯಾದೆವೋ
ಈಗ ಒಂದಾಗಿದ್ದೇವೆ.
ದಾಹದಷ್ಟೆ ತೃಪ್ತಿ
ಮತ್ತು ತೃಪ್ತಿಯಷ್ಟೇ ದಾಹವಿದೆ.
ಅನ್ನಿಸುತ್ತದೆ:
ದಾಹ ಮತ್ತು ತೃಪ್ತಿ
ಅಕ್ಕತಂಗಿಯರು
ಅಂಗಳದಲ್ಲಿ ಕಣ್ಣಾಮುಚ್ಚಾಲೆ
ಆಡುತ್ತಿರುವರೆಂದು.
ಕಾಲವೆಂದರೆ
ಬದುಕಿನ ಬಣ್ಣಗಳೊಂದಿಗೆ
ನಮ್ಮ ಬಣ್ಣವನ್ನು
ಸೇರಿಸಿಬಿಡುವುದು...
ಬದುಕು
ಬದುಕು ಚಿತ್ರವೂ ಹೌದು
ಹಣೆಬರಹವೂ ಹೌದು..
ನಮ್ಮ ಇಷ್ಟದ ಬಣ್ಣಗಳಿಂದ
ಮೂಡಿದರೆ ಚಿತ್ರ
ನಮಗೆ ಇಷ್ಟವಿಲ್ಲದ ಬಣ್ಣಗಳಿಂದ
ಮೂಡಿದರೆ ಹಣೆಬರಹ..
ಪ್ರತಿಕ್ರಿಯೆ (1)