ಮೂಢ ಉವಾಚ -34
ಮೋಹಪಾಶದ ಬಲೆಯಲ್ಲಿ ಸಿಲುಕಿಹರು ನರರು
ಮಡದಿ ಮಕ್ಕಳ ಮೋಹ ಪರಿಜನರ ಮೋಹ
ಜಾತಿ-ಧರ್ಮದ ಮೋಹ ಮಾಯಾವಿ ಮೋಹವೇ
ಜಗದ ದುಸ್ಥಿತಿಗೆ ಕಾರಣವು ಮೂಢ
ಮಾಯಾವಿ ಮೋಹಿನಿ ಜಗವನೆ ಕುಣಿಸುವಳು
ರಮಣೀಯ ಮೋಹದಾ ಬಲೆಯ ಬೀಸುವಳು
ಮಾಯೆಗೆ ಮರುಳಾಗಿ ತಿಳಿದೂ ತಪ್ಪೆಸಗುವ ನರರ
ಆತ್ಮಸಾಕ್ಷಿಯದು ಮೋಹದಾ ಬಂಧಿ ಮೂಢ
************
-ಕವಿನಾಗರಾಜ್.
ಪ್ರತಿಕ್ರಿಯೆ (4)