ಕಾಸ್ಟ್ ಅವೆ (CAST AWAY)...೯೦ರ ದಶಕದಲ್ಲಿ ತೆರೆಕಂಡ ಈ ಚಿತ್ರ ನನಗೆ ಬಹಳ ಅಚ್ಚುಮೆಚ್ಚು...
ನಾನು ಆಂಗ್ಲ ಚಿತ್ರಗಳನ್ನು ನೋಡುತ್ತಿದ್ದದ್ದು ಬಹಳ ವಿರಳ. ಒಮ್ಮೆ ರವಿ ಬೆಳಗೆರೆ ಯವರ ಹಾಯ್ ಬೆಂಗಳೂರಿನ
ಖಾಸ್ ಬಾತ್ ಅಂಕಣದಲ್ಲಿ ರವಿಯವರು ಈ ಚಿತ್ರದ ಬಗ್ಗೆ ವಿಶ್ಲೇಷಿಸಿದ್ದರು..ಅದನ್ನು ಓದಿದ ಮೇಲೆ ಕುತೂಹಲದಿಂದ
ಈ ಚಿತ್ರದ ಡಿ.ವಿ.ಡಿ ಯನ್ನು ತಂದು ನೋಡಿದೆ.
ಚಿತ್ರದಲ್ಲಿ ನಾಯಕ "ಫೆಡೆಕ್ಸ್" ಕೊರಿಯರ್ ಕಂಪನಿಯಲ್ಲಿ ನೌಕರಿಯಲ್ಲಿರುತ್ತಾನೆ. ಒಮ್ಮೆ ಸರಕು ಸಾಗಣೆ ವಿಮಾನದಲ್ಲಿ
ಹೊರಟಿದ್ದಾಗ ವಿಮಾನ್ ದುರಂತಕ್ಕೀಡಾಗಿ ವಿಮಾನ ಸಮುದ್ರದಲ್ಲಿ ಬಿದ್ದು ಹೋಗುತ್ತದೆ. ನಾಯಕನ ಹೊರತಾಗಿ ಬೇರೆ
ಯಾರು ಉಳಿಯುವುದಿಲ್ಲ.. ನಾಯಕ ಹಾಗು ಹೀಗು ಮಾಡಿ ಒಂದು ದ್ವೀಪಕ್ಕೆ ಬಂದು ಬೀಳುತ್ತಾನೆ. ಆ ದ್ವೀಪವೋ
ನಿರ್ಮಾನುಷವಾದ ದ್ವೀಪ.
ಆ ದ್ವೀಪದಲ್ಲೇ ಐದು ವರ್ಷ ಹೇಗೆ ಕಳೆಯುತ್ತಾನೆ..ಆಹಾರಕ್ಕೆ ಏನು ಮಾಡುತ್ತಾನೆ...ಬೆಂಕಿಗೆ ಏನು ಮಾಡುತ್ತಾನೆ..
ಹೇಗೆ ಸಮಯ ಕಳೆಯುತ್ತಾನೆ. ಮತ್ತೆ ಹೇಗೆ ಮರಳಿ ಸ್ವದೇಶಕ್ಕೆ ಬರುತ್ತಾನೆ..ಬಂದ ಮೇಲೆ ಆತ ಕಳೆದುಕೊಂಡಿದ್ದಾದರು ಏನು...
ಇವೆಲ್ಲವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ..ನಾಯಕನ ಪಾತ್ರದಲ್ಲಿ "ಟಾಂ ಹಾಂಕ್ಸ್" ಅದ್ಭುತ ಅಭಿನಯ ನೀಡಿದ್ದಾರೆ.
ನನಗೆ ಈ ಚಿತ್ರದಲ್ಲಿ ಬಹಳ ಇಷ್ಟವಾದ ಅಂಶವೆಂದರೆ..ಅಂತಹ ಸಂಧಿಗ್ಧ ಪರಿಸ್ಥಿತಿಯಲ್ಲೂ ನಾಯಕ ಸಾವಿಗೆ ಶರಣಾಗುವುದಿಲ್ಲ...
ಬದುಕಲು ಆತ ನಡೆಸುವ ಹೋರಾಟ ಅಮೋಘ...
ಶನಿವಾರ ಮತ್ತೊಮ್ಮೆ ಈ ಚಿತ್ರ ನೋಡಿದೆ...ನೀವು ನೋಡಿಲ್ಲದಿದ್ದರೆ ಆದಷ್ಟು ಬೇಗ ನೋಡಿ...ತುಂಬಾ ಒಳ್ಳೆಯ ಸಿನಿಮಾ.
ಪ್ರತಿಕ್ರಿಯೆ (5)