ದಿನವೂ ವಿಷವುಣ್ಣುವ ಜೀವಿಗಳೇ ನಾವೆಲ್ಲಾ,,,, ಆದರೂ ಕ್ಯಾರೆ ಅನ್ನದೆ ಬದುಕತ್ತಲೇ ಇದ್ದೇವೆ,,,, ಅಂತಹದೇ ಒಂದು ವಿಷಯುಕ್ತ ಪಾನಿಯವನ್ನು ಬೆತ್ತಲೆಗೊಳಿಸಿ ಹಳ್ಳಿಯ ಸೊಗಡಿನ ಅಚ್ಚ ಕನ್ನಡದಲ್ಲಿ ಮಧುರವಾಗಿ ಹಾಡಿದ ವೀಡಿಯೋ ತುಣುಕೊಂದು  ಇಲ್ಲಿದೆ, 

   ಮನಕ್ಕೆ ಮೌನವಾಗಿ ಇರಿಯುವ ಸಾಲುಗಳು, ಹಾಗು ಅದಕ್ಕೆ ತಕ್ಕ ರಾಗ,,,,, ಜೊತೆಗೊಂದು ಮಹತ್ತರ ಸತ್ಯ,,,, ನೋಡಲೇ ಬೇಕಾದ, ಹಾಗು ಕೇಳಲೇ ಬೇಕಾದ ಹಾಡು,,,,

ಈ ವಿಡಿಯೋ, ಗೆಳೆಯನೊಬ್ಬನ ಮೂಲಕ ನನಗೆ ಸಿಕ್ಕಿತು, ತಕ್ಷಣವೆ, ಅದಕ್ಕೊಂದು ಎಳನೀರ ಹೊದಿಕೆ ಹೊದಿಸಿ, ಯೂಟೂಬಿನಲ್ಲಿ ಹಾಕಿದೆ, ಯೂಟೂಬಿನಲ್ಲಿ ಹಾಕುವಾಗ ಅದು ಯಾರು ಹಾಡಿದ್ದೆಂದು ತಿಳಿದಿರಲಿಲ್ಲ,,,,,

   ಹಾಡನ್ನು ಕೇಳಿದ, ಕರ್ನಾಟಕ ಹಾಗು ಕನ್ನಡ ಇತಿಹಾಸದ ಬಗ್ಗೆ ಅಪಾರ ಪ್ರೇಮವಿಟ್ಟುಕೊಂಡು, ಅದರಲ್ಲಿಯೇ ಪ್ರೀತಿಯಿಂದ ದುಡಿಯುತ್ತಿರುವ "ಶ್ರೀಮತಿ ಸೀತಾಲಕ್ಷ್ಮಿ ರಾವ್" ಅವರು ಈ ಹಾಡಿನ್ನು ಹುಟ್ಟು ಹಾಕಿದ "ಭೂಮಿ ತಾಯಿಯ ಬಳಗ" ತಂಡದ ಬಗ್ಗೆ ನಂತರ ತಿಳಿಸಿದರು. 

ಹಾಡು : https://www.youtube.com/watch?v=pTCsJfvOQE8