(ರಾಗ ಸೌರಾಷ್ಟ್ರ ಆದಿ ತಾಳ )

ಮಂಗಳಂ ಜಯಮಂಗಳಂ ಮಂಗಳಂ ಶುಭಮಂಗಳಂ ||

ಅಕ್ರೂರಗೊಲಿದ ತ್ರಿವಿಕ್ರಮಗೆ
ನಕ್ರನ ಗೆಲಿದ ಪರಾಕ್ರಮಿಗೆ
ಶಕ್ರನ ಗರ್ವಪಹಾರವ ಮಾಡಿದ
ಶುಕ್ರನ ಶಿಷ್ಯನ ಗೆಲಿದವಗೆ ||

ಗಂಗೆಯ ಪಡೆದ ಶ್ರೀರಂಗನಿಗೆ
ರಂಗುಮಾಣಿಕದುಂಗುರದವಗೆ
ಭೃಂಗಕುಂತಳೆಯರ ವ್ರತವನೆ ಕೆಡಿಸಿದ
ಅಂಗಜನಯ್ಯ ಶುಭಾಂಗನಿಗೆ ||

ಧರೆಯೊಳಧಿಕ ವೆಂಕಟಾಚಲಗೆ
ಸ್ಥಿರವಾಗಿ ಪುಷ್ಕರಿಣಿಲಿ ನೆಲಸಿಹಗೆ
ಪರತತ್ವ ಶ್ರೀಪುರಂದರವಿಠಲಗೆ
ವರವೆಂಕಟೇಶ ಶ್ರೀನಿವಾಸಗೆ ||