ಪ್ರತಿಯೊಂದು ಮಗುವೂ ಬಸ್ಸಿನಲ್ಲಿ ಹೋಗುವಾಗ ಅಮ್ಮನಿಗೆ ಈ ಪ್ರಶ್ನೆಯನ್ನು ಕೇಳೇ ಕೇಳುತ್ತದೆ. "ಅಮ್ಮಾ ಗಿಡ ಮರ ಎಲ್ಲಾ ಯಾಕೆ ಹಿಂದಕ್ಕೆ ಹೋಗ್ತಾ ಇದೆ?"

 ಇದೇ ಸಾಪೇಕ್ಷತೆ(Relativity). ಸಾಪೇಕ್ಷತೆಯ ಅನುಭವ ನಮಗೆ ತುಂಬಾ ಚಿಕ್ಕ ವಯಸ್ಸಿನಲ್ಲೇ ಆಗುತ್ತದೆ. ಐನ್ ಸ್ಟೈನ್ (Einstein) ತನ್ನ ಬಗ್ಗೆ ಹೇಳಿಕೊಂಡಿದ್ದೇನು ಗೊತ್ತೇ? "ನೀವೆಲ್ಲಾ ತಿಳಿದಿರುವಂತೆ genius ಏನೂ ನಾನಲ್ಲ. ನಿಜ ಹೇಳಬೇಕೆಂದರೆ ನನ್ನ ಬೌದ್ಧಿಕ ಬೆಳವಣಿಗೆ ತುಂಬಾ ನಿಧಾನ. ಮಾತು ಬಂದಿದ್ದೂ ತುಂಬಾ ತಡವಾಗಿ. ಹಾಗಾಗಿಯೇ ಎಲ್ಲರೂ ದೊಡ್ಡವರಾದ ಮೇಲೆ ದೊಡ್ಡವರಂತೆ ಯೋಚನೆ ಮಾಡುತ್ತಿದ್ದಾಗ ನಾನು ಮಾತ್ರ ಇನ್ನೂ ಚಿಕ್ಕವನಂತೆ ಬೆಳಕಿನ ಜೊತೆ ಓಡಿದ ಕನಸು ಕಂಡೆ. ನನ್ನ Relativity ಸಿದ್ಧಾಂತಕ್ಕೆ ನನ್ನ ತಡವಾದ ಬೌದ್ಧಿಕ ಬೆಳವಣಿಗೆಯೇ ಕಾರಣ". :P

  Einstein ಹೇಳಿರುವ ಒಂದು ತುಂಬಾ ಕುತೂಹಲಕರ ವಿಷಯವಿಲ್ಲಿದೆ. ಗಮನವಿಟ್ಟು ಓದಿ.

 ಯಾವುದೇ ಒಂದು ನಿಶ್ಚಲವಾಗಿರುವ ಆಧಾರ ಚೌಕಟ್ಟಿನಲ್ಲಿ(rest frame of reference) ಒಬ್ಬ ವೀಕ್ಷಕನಿದ್ದಾನೆ ಎಂದಿಟ್ಟುಕೊಳ್ಳಿ(ಉದಾಹರಣೆಗೆ ಒಂದು ಬಸ್). ಈಗ ನಿಧಾನವಾಗಿ ಆ ಬಸ್ ಚಲಿಸಲು ಪ್ರಾರಂಭಿಸುತ್ತದೆ. ಒಂದು ವೇಳೆ ಏನಾದರೂ ಆ ಬಸ್ ನ ವೇಗ(speed) ಹೆಚ್ಚುತ್ತಾ ಹೆಚ್ಚುತ್ತಾ ಬೆಳಕಿನ ವೇಗಕ್ಕೆ ಸಮೀಪವಾದರೆ ಅದರೊಳಗೆ ಕುಳಿತಿರುವವನಿಗೆ ತೀರಾ ವಿಚಿತ್ರ ಅನುಭವವಾಗುತ್ತದೆ. ಅಲ್ಲಿ ಸಮಯ ತುಂಬಾ ನಿಧಾನವಾಗಿ ಓಡುತ್ತದೆ. ಇದಕ್ಕ ಒಂದು equation ಇದೆ ನೋಡಿ.


  ನಿಶ್ಚಲ ಸ್ಥಿತಿಯಲ್ಲಿರುವ ಬಸ್ಸಿನೊಳಗೆ ಗಡಿಯಾರದ ಎರಡು ಟಿಕ್ಕುಗಳ ನಡುವಿನ ಅವಧಿಯನ್ನು t0 ಎಂದಿಟ್ಟುಕೊಳ್ಳಿ. ಅತಿವೇಹದ ಬಸ್ಸಿನ ವೇಗ v ಆಗಿರಲಿ. c ಎಂಬುದು ಬೆಳಕಿನ ವೇಗ(ಸೆಕೆಂಡಿಗೆ 3 ಲಕ್ಷ ಕಿಲೋ ಮೀಟರ್ ಗಳು). ಆಗ ಅತಿವೇಗದ ಬಸ್ಸಿನಲ್ಲಿ ಗಡಿಯಾರದ ಎರಡು ಟಿಕ್ಕುಗಳ ನಡುವಿನ ಅವಧಿ,

 

                     t=t0/[√{1-(v^2 / c^2)}]

  ಇಲ್ಲೊಂದು ವಿಸ್ಮಯವಿದೆ ನೋಡಿ. v, c ಗೆ ಸಮೀಪವಾಗುತ್ತಾ ಹೋದಂತೆ ಚೇದ(denominator) ಸೊನ್ನೆಗೆ ಸಮೀಪವಾಗುತ್ತದೆ. ಆಗ ಆ ಭಿನ್ನರಾಶಿಯ(fraction) ಬೆಲೆ ಅನಂತಕ್ಕೆ(infinity) ಸಮೀಪವಾಗುತ್ತದೆ (ದೊಡ್ಡ ಸಂಖ್ಯೆಯನ್ನು ಚಿಕ್ಕದರಿಂದ ಭಾಗಿಸಿದಾಗ ಬರುವುದು ದೊಡ್ಡ ಸಂಖ್ಯೆ). ಅಂದರೆ t, t0 ಗಿಂತಾ ತುಂಬಾ ದೊಡ್ಡದಾಗುತ್ತದೆ. ಅಂದರೆ ವೇಗದ ಬಸ್ಸಿನಲ್ಲಿ ಕಾಲದ ಹರಿವು ನಿಧಾನವಾಗಿರುತ್ತದೆ.

  ಅವಳಿ ಜವಳಿಗಳಿಬ್ಬರಲ್ಲಿ ಒಬ್ಬ A ಮತ್ತು ಇನ್ನೊಬ್ಬ B. A ಯನ್ನು high speed rocket ನಲ್ಲಿ ಕೂಡಿಸಿ ಅಂತರಿಕ್ಷಯಾನಕ್ಕೆ ಕಳಿಸುತ್ತಾರಂತೆ. ಅನೇಕ ವರ್ಷಗಳು ಕಳೆದ ಬಳಿಕ B ಮುದುಕನಾದಮೇಲೆ A ವಾಪಸ್ ಬರುವನಂತೆ. ಆಶ್ಚರ್ಯವೇನೆಂದರೆ A ಇನ್ನೂ ಯುವಕನಾಗೇ ಇರುವನಂತೆ. ಇದು "Twin paradox" .

  High speed rocket ನ ವೇಗ ಬೆಳಕಿನ ವೇಗಕ್ಕೆ ಸಮೀಪದಲ್ಲಿರಲಿ (ಉದಾಹರಣೆಗೆ, ಬೆಳಕಿನ ವೇಗದ 80% ರಷ್ಟು). ಆಗ rocket ನಲ್ಲಿ 1 ಸೆಕೆಂಡ್ ಆದರೆ ನೆಲದ ಮೇಲಿರುವವರಿಗೆ 1.6666 ಸೆಕೆಂಡ್ ಆಗಿರುತ್ತದೆ. B ಗೆ 50 ವರ್ಷಗಳಾಗಿದ್ದರೆ, A ಗೆ ಇನ್ನೂ 31.25 ವರ್ಷಗಳಾಗಿರುತ್ತವೆ. ಎಂಥಹ ಅದ್ಭುತ ಆದರೂ ನಿಜ ಅಲ್ಲವೇ? !

 ಅಷ್ಟೊಂದು ತಯಾರಿಸಲು ಸಾಧ್ಯವಾದರೆ ಮಾನವರೆಲ್ಲಾ ಮುಪ್ಪನ್ನು ತಡೆಯಬಹುದಲ್ಲವೆ! ಆಗ ಯಾವ anti aging cream ನ ಬಳಕೆಯೂ ಬೇಡ :P..