ಬದುಕಲಿ ಸಂತಸ ತುಂಬಲು ಬೇಕೆ
ಹುಸಿ ಜಟಿಲತೆಗಳ ಶರಮಾಲೆ?
ಸುಂದರ ಜೀವನ ನಡೆಸಲು ಬೇಕೆ
ವಜ್ರ ಕನಕಗಳ ಸರ, ಓಲೆ?
ಹೆಸರೊಂದಿದ್ದರೆ ಸಾಕೆ ಜಗದೊಳು
ಹರುಷದಿ ಕುಣಿದು ನಲಿವುದಕೆ?
ಗುರಿಯನು ಸೇರಲು ಬೇಕೆ ಮನದೊಳು
ರೊಚ್ಚಿನ ಕಿಚ್ಚಿನ ಹುಚ್ಚದಕೆ?
ಮುಗ್ದ ಮಗುವಿನೊಳು ಮುಕ್ತ ನಗುವನು
ಕಾಣಲು ಬೇಕೆ ತಾರ್ಕಿಕತೆ?
ಆನಂದದ ಹೊಳೆ ಹರಿಸುವುದೆದೆಯಲಿ
ಸರಳತೆ ತುಂಬಿದ ಸಾರ್ಥಕತೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)