ದೇವರು-ಧರ್ಮ-ಜಾತಿ, ಪೂಜೆ-ಮಾಟ-ಮಂತ್ರ, ಮೂಢ ನಂಬಿಕೆಗಳು, ಆಧ್ಯಾತ್ಮ ಇವೇ ಮುಂತಾದವುಗಳ ಮಾಯಾಜಾಲದಿಂದ ಮುಕ್ತರಾದವರ ಅಥವಾ ಆಗಬಯಸುವವರ ಮುಕ್ತ ಚಿಂತನೆಗಳ ಅಭಿವ್ಯಕ್ತಿಗಾಗಿ ಅಮೆರಿಕದಲ್ಲಿ ನೆಲೆಸಿರುವ ಅಜಿತ ಕಮಲ್ ರೂಪಿಸಿರುವ ಹೊಸ ತಾಣವೇ ___LINK_OPEN_href="http://nirmukta.com" target="_blank"___ನಿರ್ಮುಕ್ತ.ಕಾಂ. ಸೃಷ್ಟಿಕರ್ತನ ಅಗತ್ಯಕ್ಕೆ ಮಂಗಳ ಹಾಡಿದ ವಿಕಾಸವಾದವನ್ನು ಮಂಡಿಸುವುದಕ್ಕೆ ಬಹಳಷ್ಟು ಪ್ರೇರಣೆಯನ್ನೂ, ಆಕರಗಳನ್ನೂ ಒದಗಿಸಿದ ಗಲಪಗೋಸ್ ದ್ವೀಪಕ್ಕೆ ಚಾರ್ಲ್ಸ್ ಡಾರ್ವಿನ್ ಕಾಲಿರಿಸಿದ ದಿನದಂದೇ (ಸೆಪ್ಟೆಂಬರ್ 15, 1835) ___LINK_OPEN_href="http://nirmukta.com" target="_blank"___ನಿರ್ಮುಕ್ತ.ಕಾಂ ಅಂತರ್ಜಾಲವನ್ನು ಪ್ರವೇಶಿಸಿದೆ. ನಿರ್ಮುಕ್ತರಾಗಲು ನಿಮ್ಮೆಲ್ಲರಿಗೆ ಸ್ವಾಗತ!