ಆಸೆ ಬಯಕೆಯಾಗಿದೆ ಧರಣಿಯಲ್ಲಿ
ಆಸೆ ಬೇಡಿಕೆಯಾಗಿದೆ ವ್ಯಾಪಾರದಲ್ಲಿ
ಆಸೆ ಕಾಮವಾಗಿದೆ ಸ್ತ್ರೀ ಪುರುಷರಲ್ಲಿ
ಆಸೆ ಕ್ರೋಧವಾಗಿದೆ ಈಡೇರದಲ್ಲಿ
ಆಸೆ ಲೋಭವಾಗಿದೆ ಧನಕನಕದಲ್ಲಿ
ಆಸೆ ಮೋಹವಾಗಿದೆ ಸಂಸಾರದಲ್ಲಿ
ಆಸೆ ಮದವಾಗಿದೆ ಈಡೇರಿದಲ್ಲಿ
ಆಸೆ ಮತ್ಸರವಾಗಿದೆ ಪರರ ಏಳ್ಗೆ ಸಹಿಸದಲ್ಲಿ
ಆಸೆ ಮಮತೆಯಾಗಿದೆ ಮಾತೆಯಲ್ಲಿ
ಆಸೆ ಪ್ರೀತಿಯಾಗಿದೆ ಪ್ರೇಮಿಯಲ್ಲಿ
ಆಸೆ ಸ್ನೇಹವಾಗಿದೆ ಮಿತ್ರರಲ್ಲಿ
ಆಸೆ ಅಭಿಮಾನವಾಗಿದೆ ನಾಡು ನುಡಿಯಲ್ಲಿ
ಆಸೆ ಮನೋರೋಗವಾಗಿದೆ ವ್ಯಸನಿಯಲ್ಲಿ
ಆಸೆ ಬಂಧನವಾಗಿದೆ ಭವಿಯಲ್ಲಿ
ಆಸೆ ಭಕ್ತಿಯಾಗಿದೆ ಶರಣರಲ್ಲಿ
ಆಸೆ ಪ್ರೇರಕವಾಗಿದೆ ಕಾಯಕದಲ್ಲಿ
ಆಸೆ ಸಾರ್ಥಕವಾಗಿದೆ ದಾಸೋಹದಲ್ಲಿ
ಆಸೆ ಪೂರಕವಾಗಿದೆ ಲಿಂಗದೊಲುಮೆಯಲ್ಲಿ
ಆಸೆ ಕಾರಣವಾಗಿದೆ ನಿಮ್ಮ ಕರುಣೆ ಪಡೆವಲ್ಲಿ
ಆಸೆ ಬಯಲಾಗಿದೆ ಶೂನ್ಯ ಸಂಪಾದನೆಯಲ್ಲಿ
ಹರ ಹರಾ ಶ್ರೀ ಗುರುಬಸವೇಶ್ವರಾ ||
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ವಚನ ಸಂಪದ - ಅಕ್ಕ ನಾಗಲಾಂಬಿಕೆ ವಚನ-ಮನದೊಡೆಯ ಮಹಾದೇವ ಮನವ ನೋಡಿಹನೆಂದು
ಇಂದು ಓದಿದ ವಚನ: ಚಿಂತೆ ಎಂಬ ಹೂವಿನ ಗಿಡ: ಘಟ್ಟಿವಾಳಯ್ಯ
ಇಂದು ಓದಿದ ವಚನ: ಘನ: ಘಟ್ಟಿವಾಳಯ್ಯ
ಇಂದು ಓದಿದ ವಚನ: ಅಸಾಧ್ಯ: ಘಟ್ಟಿವಾಳಯ್ಯ
ಇಂದು ಓದಿದ ವಚನ: ಓರಂತಿಪ್ಪುದೆ ಸಮತೆ: ಸಿದ್ಧರಾಮ
ಇಂದು ಓದಿದ ವಚನ: ನೀರಿನಂಥ ಮನಸ್ಸು: ಸಿದ್ಧರಾಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!