ಪ್ರತಿ ಕ್ಷಣವು ಉಸಿರಾಗಿ ಕಾಡಿರುವೆ ಏಕೆ....?
ನೆನಪಾಗಿ ಕಣಕಣದಿ ಬೆರೆತಿರುವೆ ಏಕೆ.....?
ಹಗಲು ಕಳೆಯದು, ರಾತ್ರಿ ಕರಗದು
ಒಂದೊಂದು ಘಳಿಗೆಯು ಯುಗವಾಗಿದೆ ಏಕೆ....?
ನೀ ಮರೆತೆ, ನೀ ತೊರೆದೆ
ಬಲುದೂರ ನೀ ನಡೆದೆ....
ಮರೆತರೂ... ತೊರೆದರೂ...!
ಎದೆಬಡಿತ ನೀನಾದೆ ಏಕೆ.......? ಏಕೆ....?
ನಿಸ್ವಾರ್ಥ ಪ್ರೇಮವ ಬಯಸಿ ಸ್ವಾರ್ಥಿ ನಾನಾದೆ...
ನನ ಪ್ರೀತಿಯ ಧಿಕ್ಕರಿಸಿ ಚಿರನೋವ ನೀಡಿದೆ ಏಕೆ.....?
ಪ್ರತಿ ಕ್ಷಣವು ಉಸಿರಾಗಿ ಕಾಡಿರುವೆ ಏಕೆ....?
ನೆನಪಾಗಿ ಕಣಕಣದಿ ಬೆರೆತಿರುವೆ ಏಕೆ.....?ಏಕೆ.....?ಏಕೆ.....?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!