Anil Kumar T
aniltm
ಪ್ರೀತಿಯಿಂದ....
ಬರೆಯಲು ಬಾರದ ಭಾವವೊಂದು ಕಾದಿದೆ ಇಂದು ಹೇಳಲಾಗದ ಮೌನವಾವರಿಸಿದೆ ಇಂದು.. ನೆನಪಿನ ಹಾಳೆಗಳನು ಮೃದುವಾಗಿ ತಿರುವಿದರೂ ಸರಸರ ಸದ್ದು ಮಾಡುತ ರೆಪ್ಪೆ ಹಸಿಯಾಗಿದೆ... ಏನೂ ತೋಚದ, ಏನೂ ಕಾಣದ ಮಾಯೆಯೊಂದು ಬಿಗಿದಪ್ಪಿದೆ ಮನವನಿಂದು......
ಅರಿವಾಗದ ನಿನ್ನ ಈ ಮೌನ....
ಮನವು ಬಾ ಎಂದು ಮಿಡಿದಿದೆ ನಿನಗೆ ಕೇಳದೆ...........? ಹೃದಯ ನಿನ ಹೆಸರನ್ನೇ ಉಸಿರಾಡಿದೆ ನಿನಗರಿವಾಗದೆ.........? ಇನ್ನೂ ಏಕೆ ಈ ಅಚಲ ಮೌನ........ ನೀನಿಲ್ಲದೇ... ನಿಶ್ಚಲವಾಗಿದೆ ನನ್ನೀ ಜೀವನ.....! ನೀನು ಮರೆಯಾಗುವ ಭಯದಲಿ.... ಕಣ್ಣರೆರೆಪ...
ಏನೆಂದು ಬಣ್ಣಿಸಲಿ.....
ಏನೆಂದು ಬಣ್ಣಿಸಲಿ ಈ ಸೌಂದರ್ಯವ.... ಏನೆಂದು ವರ್ಣಿಸಲಿ ಆ ಸೌಗಂಧವ...... ಮಂಜಿನ ಮುತ್ತುಗಳ ಒಡವೆಯುಟ್ಟು ಮಿನುಗುತಿರುವ ಆ ಹೂಗಳಂದವ ಮೈಚಳಿ ಬಿಟ್ಟು, ಮಂಜು ಮುಸುಕಿನ ಹೊದಿಕೆ ತೊಟ್ಟು ಬೀಗುತಿರುವ ಚಿಗುರೆಲೆಗಳ ಶೃಂಗಾರವ ಏನೆಂದು ಬಣ್ಣಿಸಲಿ ಈ ಸೌ...
ಪ್ರೀತಿಯ ಗಾಳದಲಿ....
ಪ್ರೀತಿಯ ಗಾಳದಲಿ ಸಿಲುಕಿದೆ ಮನ ನವಿರು ನವಿರಾದ, ಕಂಪ ಸೂಸುವ ಪ್ರೀತಿ ಅಮಲಿನಲಿ ತೇಲಿದೆ ಜೀವನ.. ಸೆರೆ ಸಿಕ್ಕ ಹಕ್ಕಿಯ ರೀತಿ ಪ್ರೀತಿಯ ಮೃದು ಭಾವಗಳಲಿ ನಲುಗಿ ನಗುತಾ, ಅಳುತಾ ಸಾಗಿದೆ ಈ ಯಾನ... ಎಷ್ಟೇ ತಡೆದರೂ, ಮರೆತರೂ ಬಿಡಲೊಲ್ಲೆ ಎಂದಿದೆ ಪ್ರ...
ಆ ದೇವರೂ ಕೂಡ.....
ಖತರ್ನಾಕ್ ನೋಟದಲ್ಲೇ... killತಿಯಲ್ಲೇ ಅಜ್ನಬಿ ಗೆಳತಿ.... ಅದೆಷ್ಟು ಹೃದಯಗಳನ್ನು ಗಿಲ್ಲಿದ್ದೀಯೋ ಈ ಸನ್ನೆಯೊಡತಿ.... ಕಣ್ ಸನ್ನೆಯ ಸಜೆಯಲ್ಲೂ ಒಂಥರಾ ಮಜ ಇದೆ ಆ ಸಜೆಯಾಣೆ... ಇದಕ್ಕೆಷ್ಟು ಹುಡುಗರು ಬರ್ಬಾದ್ ಆಗೋದ್ರೋ ನಾಕಾಣೆ..... ಮತ್ತೆ ಮತ...
ಎದೆ ಬಡಿತ ನೀನಾದೆ ಏಕೆ....?
ಪ್ರತಿ ಕ್ಷಣವು ಉಸಿರಾಗಿ ಕಾಡಿರುವೆ ಏಕೆ....? ನೆನಪಾಗಿ ಕಣಕಣದಿ ಬೆರೆತಿರುವೆ ಏಕೆ.....? ಹಗಲು ಕಳೆಯದು, ರಾತ್ರಿ ಕರಗದು ಒಂದೊಂದು ಘಳಿಗೆಯು ಯುಗವಾಗಿದೆ ಏಕೆ....? ನೀ ಮರೆತೆ, ನೀ ತೊರೆದೆ ಬಲುದೂರ ನೀ ನಡೆದೆ.... ಮರೆತರೂ... ತೊರೆದರೂ...! ಎದ...
ನಿನ್ನ ನೋಟದಲ್ಲಿ....
ನೋಟದಲಿ... ನಿನ್ನ ನೋಟದಲಿ... ಮನದ ಮೂಲೆಯಲಿ ಅಡಗಿಹ ಕನಸುಗಳ ಎಲ್ಲೆ ಮೀರಿದ ಹುಚ್ಚು ಭಾವಗಳ ಕೆರಳಿಸೋ ಸೆಳೆತವಿದೆ ಗೆಳತಿ...... ಆಳದಲಿ... ನಿನ್ನ ಕಿರುನಗೆಯ ಆಳದಲಿ... ಕ್ಷಣದಿ ಕಳೆದುಹೋಗಿ ನಿನ್ನಲ್ಲೇ ಬಂಧಿಯಾಗುವ ತವಕದೋಕುಳಿ ರಾಚುವ ಮಾಯೆಯಿದೆ...