ಏನೆಂದು ಬಣ್ಣಿಸಲಿ ಈ ಸೌಂದರ್ಯವ....
ಏನೆಂದು ವರ್ಣಿಸಲಿ ಆ ಸೌಗಂಧವ......
ಮಂಜಿನ ಮುತ್ತುಗಳ ಒಡವೆಯುಟ್ಟು
ಮಿನುಗುತಿರುವ ಆ ಹೂಗಳಂದವ
ಮೈಚಳಿ ಬಿಟ್ಟು, ಮಂಜು ಮುಸುಕಿನ ಹೊದಿಕೆ ತೊಟ್ಟು
ಬೀಗುತಿರುವ ಚಿಗುರೆಲೆಗಳ ಶೃಂಗಾರವ
ಏನೆಂದು ಬಣ್ಣಿಸಲಿ ಈ ಸೌಂದರ್ಯವ....
ಏನೆಂದು ವರ್ಣಿಸಲಿ ಆ ಸೌಗಂಧವ......
ಮೌನದಡವಿಯೊಳು, ಮುಂಜಾವಿನ ಸವಿಗಳಿಗೆಯೊಳು
ಬಳುಕಿ ಸಾಗುತಿರುವ ನೀರಿನ ವೈಯಾರವ
ಈ ಚೆಲುವ ಸಮಯಕೆ ಮನಸೋತು
ಕವಿಯಾಗಿ ಹಾಡುತಿರುವ ಹಕ್ಕಿಗಳ ಕಲರವವ
ಏನೆಂದು ಬಣ್ಣಿಸಲಿ ಈ ಸೌಂದರ್ಯವ....
ಏನೆಂದು ವರ್ಣಿಸಲಿ ಆ ಸೌಗಂಧವ......
ತಾಯಿಯ ಮಡಿಲಿನ ಬೆಚ್ಚನೆಯ ಪ್ರೀತಿಯಲಿ
ಜಗಮರೆತು ಮಲಗಿರುವ ಮಗುವ ಮುಗ್ಧ ಭಾವವ
ಪ್ರೀತಿಯ ಬಿಸಿ ಅಪ್ಪುಗೆಯಲಿ ಎಲ್ಲವ ಮರೆತು
ಆಹ್ಲಾದಿಸುತಿರುವ ಪ್ರಿಯ ಹೃದಯವ...
ಏನೆಂದು ಬಣ್ಣಿಸಲಿ ಈ ಸೌಂದರ್ಯವ....
ಏನೆಂದು ವರ್ಣಿಸಲಿ ಆ ಸೌಗಂಧವ......
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!