ನನ್ನ ಆತ್ಮಬಂಧು....
ಬೆರಳ ತುದಿಯಿಲಿ ಮೋಬೈಲಿನ ಗುಂಡಿ ತಾಕಿದರೆ
ಸಿಗುವ ನಿನ್ನ ಧನಿಗೆ,....ನಿನ್ನೊಡನಾಟಕೆ..
ಕಾತರಿಸಿ...ಕನವರಿಸಿ...
ತವಕಿಸಿ,ತಡವರಿಸಿ...ನಿನ್ನ ಕರೆಯಲಾಗದೆ.
ನಿತ್ತರಿಕೊಳ್ಳಗದ ನಿನ್ನೊಡನಾಟದ ಬಯಕೆಗೆ...
ನನ್ನೆದೆಯೇ ಸಿಡಿದುಹೊಗುತ್ತಿರುವ ಭರಿಸಲಾಗದ ಭಾವದೊಂದಿಗೆ,
ಪ್ರತಿಕ್ಶಣವೂ ಯುಗವಾಗಿ...ಅಸಹನಿಯವಾಗಿ..
ಪ್ರತಿನಿಮಿಷಗಳು ಒಂದೊಂದು ಜನುಮಗಳಾಗಿ...
ಬರ್ಭರವಾಗಿ..
ಮತ್ತೆಂದೂ ನೀ ಸಿಗದಿದ್ದರೆ ಎಂಬ ಸಂದೇಹದೊಂದಿಗೆ
ಇಷ್ಟಕ್ಕೇ ನಿಂತುಹೋದ ನನ್ನ ಒಲವಿನ ಬಗೆಗೆ..
ನಿನಗೇನಾಯಿತೊ...ನಿನಗೇನನಿಸಿತೊ....
ನೀ ಹೇಗಿರುವೆಯೊ... ನನ್ನ ಮರೆತುಹೊಗುವೆಯೊ..
ಎಂಬ ನೂರಾರು ಆತಂಕಗಳ ನಡುವೆ,
ನಿದ್ರಿಸಲಾಗದೆ, ನಿರಾಹಾರಿಯಾಗಿ..
ಜಡವಾಗಿ...ಚೆತನವೇ ಇಲ್ಲದೆ..
ಬದುಕಿನ ಬಂಡಿ ನಿಂತೇ ಹೋಯಿತೇ..
ಎಂಬ ಸಾವಿರ ಸಾವಿರ ನಿಟ್ಟುಸಿರುಗಳೊಂದಿಗೆ
ಒತ್ತರಿಸಿಬರುವ ದುಖಃದೊಂದಿಗೆ
ಕಣ್ಣ ಹನಿಗಳ ಸಾಗರದಲಿ ಕರಗಿಹೊಗುತ್ತಿರುವೆ
ಹೇಳು ನೀ ಎಂದು ಕರೆವೆ......?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಭಾವನೆಗಳಿಲ್ಲದವರಿಗೆ......
ಭಾವತೀವ್ರತೆಗೆ ತವಕಿಸುತ್ತಿದೆ ಹೃದಯ....
ನಿನ್ನ ನನ್ನ ನಡುವೆ..
"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...1
ಮಾನವ ಜನ್ಮ ದೊಡ್ಡದು
ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!