ಕಾಫಿ ಬಾರ್ ಮತ್ತು ವೈನ್ ಬಾರ್

ಕಾಫಿ ಬಾರ್‌ಗೂ ಮತ್ತು ವೈನ್ ಬಾರ್‌ಗೂ ಏನ್ ವ್ಯತ್ಯಾಸ?

ಎಲ್ಲಾ ಪ್ರೀತಿಗಳು ಕಾಫಿ ಬಾರ್‌ನಲ್ಲಿ ಪ್ರಾರಂಭವಾಗಿ ವೈನ್ ಬಾರ್‌ನಲ್ಲಿ ಮುಕ್ತಾಯವಾಗುತ್ತದೆ!!!


ಟ್ಯಾಕ್ಸಿ ಬಾಡಿಗೆ

ಕುಡುಕನೊಬ್ಬ ಟ್ಯಾಕ್ಸಿ ನಿಲ್ಲಿಸಿ, ಅದರಲ್ಲಿ ಕೂತು ಚಾರ್-ಮಿನಾರ್ ಕಡೆಗೆ ಬಿಡು ಎಂದ, ಸ್ವಲ್ಪ ಹೊತ್ತಾದ ನಂತರ ಚಾರ್-ಮಿನಾರ್ ಬಂತು:

ಕುಡುಕ: ಬಾಡಿಗೆ ಎಷ್ಟಾಯ್ತು?

ಚಾಲಕ: ಇಪ್ಪತ್ತು ರೂಪಾಯಿ

ಕುಡುಕ: ಜೇಬಿನಿಂದ ಹತ್ತು ರೂಪಾಯಿಯ ನೋಟೊಂದನ್ನು ಚಾಲಕನಿಗೆ ಕೊಟ್ಟ.

ಚಾಲಕ: ಇದು ಹತ್ತು ರೂಪಾಯಿ

ಕುಡುಕ: ನೀನು ನನ್ನ ಹುಚ್ಚ ಅಂದ್ಕೊಂಡಿದ್ದಿಯೇನು? ನೀನೂ ನನ್ನ ಜೊತೆಗೆ

ಕೂತ್ಕುಂಡಿರಲಿಲ್ವ? ನಿನ್ನಬಾಡಿಗೆ ನಾನು ಕೊಡ್ಲ???


ಕುಡುಕರ ಚಳಿ

ನಡುರಾತ್ರಿ ಕುಡುಕನೊಬ್ಬ ಖಾಲಿ ಗೋರಿಯೊಳಗೆ ಬಿದ್ದು 'ಚಳಿ ತಡೆಯೋಕೆ ಆಗ್ತಾ ಇಲ್ಲ...ಯಾರದರೂ ಬನ್ನಿ' ಎಂದು ಕೂಗುತ್ತಾ ಇದ್ದ.

ಇನ್ನೊಬ್ಬ ಕುಡುಕ ಬಂದು ಕೆಳಗೆ ಬಾಗಿ ನೋಡಿ...'ಚಳಿಯಾಗದೆ ಇನ್ನೇನಾದೀತು? ಮೂರ್ಖರು! ನಿನ್ನನ್ನು ಗೋರಿಗೆ ಇಳಿಸಿದ ಮೇಲೆ ಮಣ್ಣು ಮುಚ್ಚಲು ಮರೆತ್ತಿದ್ದಾರೆ' ಎಂದು ಗೋರಿಗೆ ಮಣ್ಣು ತುಂಬತೊಡಗಿದ...