ಸುಸ್ವಾಗತ.

ಪ್ರತೀ ಬೆಳಗೂ ಹೊಸವರ್ಷವಾಗಲಿ

ಪ್ರತೀ ರಾತ್ರಿಯೂ ಹೊಸ ಕನಸ ತರಲಿ

ಪ್ರತೀ ಅಳುವೂ ಹೊಸ ನಗುವ ಮೂಡಿಸಲಿ

ಪ್ರತೀ ಹೂವು ಹೊಸ ಗಂಧ ಸೂಸಲಿ.


ನಾಳೆಗಳೆಲ್ಲ ನಮ್ಮದೆನ್ನುವ

ನಿನ್ನೆಗಳೆಲ್ಲ ಪಾಠವಾಗಲಿ

ಹರಿದ ರಕ್ತದಲೆ ಮತ್ತೆ ಬರದಿರಲಿ

ಶಾಂತಿ ನೆಮ್ಮದಿ ಇಲ್ಲಿ ನೆಲೆಸಲಿ.


ಭಾರ ಮನದಲಿ ಮತ್ತೆ ಬಂದಿದೆ

ಹೊಚ್ಚ ಹೊಸ ವರ್ಷ.

ಕೆಚ್ಚಿನಿಂದಲೇ ಸ್ವಾಗತಿಸೋಣವೇ

ಈ ನವ್ಯ ವರ್ಷ.


ಕಾಲ ನಿಲ್ಲದು!

ಕಾವ್ಯ ನಿಲ್ಲದು!

ನಿಲ್ಲದಿರು ನೀ ಮನುಷ್ಯ.

ನಿನ್ನೊಂದಿಗೇ ಭವಿಷ್ಯ.


ಬಂದಿದೆ ಬಂದಿದೆ

ಹೊಸ ವರುಷ

ಸುಸ್ವಾಗತ ನಿನಗೆ

ತಾ ಹೊಸ ಹರುಷ.

first  |  < previous  |  next >  |  last