ಕೊನೆಗೂ, ಶಾಂತಿಯ ಹಾದಿಯಲ್ಲಿ ಅಮೇರಿಕವನ್ನು ಕರೆದೊಯ್ಯುವುದಾಗಿ ಭಾಷೆ ನೀಡಿರುವ ಒಬಾಮಾ ಇಂದು ಅಧ್ಯಕ್ಷರ ಪದವಿ ಸ್ವೀಕರಿಸಿದ. ಎಂತಹ ಕಸುವಿತ್ತು ಆತನ ಭಾಷಣದಲ್ಲಿ! ಆತನ ಆತ್ಮವಿಶ್ವಾಸ ನೋಡಿ ಒಳ್ಳೆಯ ದಿನಗಳು ಬರಲಿವೆ ಎನ್ನುವ ಆಶಯ ಮನದಲ್ಲಿ ಪುಟಿಯಿತು. ಹೃತ್ಪೂರ್ವಕ ಅಭಿನಂದನೆಗಳು ಒಬಾಮಾ ಅವರೆ! ಛಲವಿದ್ದರೆ ಏನಾದರೂ ಸಾಧಿಸಬಹುದೆಂದು ನನ್ನ ಮಕ್ಕಳಿಗೆ ಹೇಳಿಕೊಡಲು ಒಳ್ಳೆಯ ಮಾದರಿಯಾದಿರಿ. ಬರಿ ಮಕ್ಕಳಿಗೇಕೆ, ನನಗೂ ಸಹ!