ಹೇಳು ಒಂದೇ ಒಂದು ಬಾರಿ ಮೃದುವಾದ ನಿನ್ನ
ಎದೆಗೊರಗಿ ಕೂರಲೇ?
ನಿನ್ನ ಬಿಸಿಯುಸಿರು ನನ್ನ ಕೆನ್ನೆ ತಾಗುವ ಹಾಗೆ
ನಿನ್ನ ಪುಟ್ಟ ಕಣ್ಣುಗಳನ್ನೊಮ್ಮೆ ದಿಟ್ಟಿಸಲೇ?
ಸಾಧ್ಯವಾಗುತ್ತಿಲ್ಲ ಒಲವೇ.....
ನಿನ್ನ ಮುದ್ದು ಮುದ್ದು ಮುಖವನ್ನೊಮ್ಮೆ
ನನ್ನ ಅಂಗೈನ ಅರಮನೆಯೊಳಗೆ ಬಂಧಿಸಿ
ಮೊದಲ ನೋಟದಲ್ಲಿಯೇ ಕೊಂದ ಆ ನಿನ್ನ
ಕಣ್ಣುಗಳ ಒಂದೇ ಒಂದು ಬಾರಿ ಚುಂಬಿಸಲೇ?
ಸಾಧ್ಯವಾಗುತ್ತಿಲ್ಲ ಒಲವೇ.....
ಹೇಳು ಒಂದೇ ಒಂದು ಬಾರಿ
ನಿನ್ನ ಮಡಿಲಲ್ಲಿ ನನ್ನ ದೇಹವ ಚೆಲ್ಲಿ
ಚಿರ ನಿದ್ರೆಗೆ ಜಾರಲೇ?
ಅಥವಾ ನಿನ್ನ ಒಲವ ಸವಿ ಹೀರುವಾ ಮುನ್ನ
ಬರುವ ಸಾವಿಗೆ ಅಂಜಿ ಎಲ್ಲಿಯಾದರೂ
ಬಚ್ಚಿಟ್ಟುಕೊಂಡುಬಿಡಲೇ?
ಸಾಧ್ಯವಾಗುತ್ತಿಲ್ಲ ಒಲವೇ.....
ಬೇಡ ಬಿಡು ಬೇಡ ಬಿಡು!
ನೀ ನನ್ನ ಕನಸಲ್ಲಿ ಬಂದ ಹೊತ್ತು
ನನ್ನನ್ನಾರೂ ತಡೆಯುವುದಿಲ್ಲ!
ನನ್ನಿಷ್ಟ ಬಂದಂತೆ ನಿನ್ನನ್ನು
ರಮಿಸಿ, ಚುಂಬಿಸಿ ,ಮುದ್ದಿಸಿ,ನನ್ನ
ಎದೆಗೊರಗಿಸಿಕೊಂಡು ಲಾಲಿ ಲಾಲಿ ಎಂದು
ಜೋಗುಳ ಹಾಡಿಬಿಡುತ್ತೇನೆ !
ನೀನೂ ನಿದ್ರೆಗೆ ಜಾರುತ್ತೀಯೆ...
ನಿನ್ನ ಕನಸಲ್ಲಿ ನಾನೂ ಬರುತ್ತೇನೆ
ನನಗಷ್ಟೆ ಸಾಕು ಒಲವೆ,
ಅದಷ್ಟೇ ಸಾಕು !
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)