ಪಾರಿಜಾತ ಉದುರಿವೆ
ಅಂಗಳತುಂಬ....
ರಾತ್ರಿಯ ಆಸರೆ ತೊರೆದು
ಬದುಕು ತೆರೆದಿದೆ ನೀ ಬರೆದು
ಅಳಿಸದೇ ಹೋದ ಪುಟಗಳ...

ಉರಿಯುತ್ತಿದೆ ಭುವಿ ಬೇಗೆ ನುಂಗಿ
ಚಂದ್ರನ ತಂಪಿಗಾಗಿ ಕಾದಿದೆ
ಅರಿವಿಲ್ಲ ಅದಕೆ ಆ ಸುಖ
ಕ್ಶಣಿಕ ಎಂದು....

ಬದುಕು ನಿತ್ಯ ಉರಿಉವ ಧಗೆ
ಚಂದ್ರನ ಸಾಂಗತ ನೆಪ ಮಾತ್ರ
ರಾತ್ರಿ ಹರಡಿದೆ ನೀ ಬಿತ್ತಿಹೋದ
ಬಯಕೆಗಳ
ನೆನಪ ಬುತ್ತಿ ಬಿಚ್ಚಿದಾಗಲೆಲ್ಲ
ಒಂದೇ ಪ್ರಶ್ನೆ ಕಾಡಿದೆ
ಯಾವ ಆಸೆಗಾಗಿ ನಾಳೆಯ
ಎದಿರು ನೋಡಲಿ...
ಹೊಸತನ ಬಯಸಲಿ
ಹಳೆಯ ನಿನ್ನ ನೆನಪು ಹೊದ್ದು
ಮಲಗಿದರೆ ಸಾಕಲ್ಲ.....!