ಬೆಂಗಳೂರಿನ ಸಾರ್ವಜನಿಕ ಬಸ್ ನಿಲ್ದಾಣಗಳ make-over ನಡೆಯುತ್ತಿದೆ ಗಮನಿಸಿದಿರಾ?.

ತಲೆಯೊಳಗೆ ವ್ಯಾಪಾರೀ ಮನೋಭಾವ ಬಿಟ್ಟು ಬೇರೇನೂ ಇಲ್ಲದ ಮೂರ್ಖರು ಯಾರೋ ಹೊಸ ವಿನ್ಯಾಸ ಮಾಡಿದ್ದಾರೆ.
- ಬೋರ್ಡಿನ ಮೇಲೆ ಸ್ಥಳದ ಹೆಸರು ಬಸ್ ನಿಲ್ದಾಣದ ಎದುರು ನಿಂತುಕೊಂಡರೆ ಮಾತ್ರ ಕಾಣಿಸುವಂತೆ ಬಹಳ ಚಿಕ್ಕದಾಗಿ ಇದೆ. ಬಸ್ ನಲ್ಲಿ ಪ್ರಯಾಣಿಸುತ್ತ ಬರುವವರಿಗೆ ಓದಲು ಸಾಧ್ಯವೇ ಇಲ್ಲ. ಬಸ್ಟ್ಯಾಂಡಿನ ಮುಖ್ಯ ಉದ್ದೇಶಗಳಲ್ಲಿ ಒಂದನ್ನು ಅಲ್ಲಿಗೆ ಬಲಿಕೊಟ್ಟಂತಾಯಿತು
- Advertisement ಭಾಗ ಅತೀ ದೊಡ್ಡದಾಗಿದೆ
- ಟ್ಯೂಬ್ ಲೈಟ್ ಗಳ ಗಳ ಬಳಕೆ ಇನ್ನೂ ಹೆಚ್ಚಾಗಿದೆ. ಅನಗತ್ಯ ಕರೆಂಟ್ ವೆಚ್ಚ
ನನಗೆ ಇವುಗಳನ್ನು ನೋಡಿದಾಗಂತೂ ಮೈ ಉರಿಯುತ್ತಿದೆ. ನೀವು ಈ ಬೆಳವಣಿಗೆಯನ್ನು ಗಮನಿಸಿದ್ದೀರಾ?
ವಸಂತ್ ಕಜೆ.
ಪ್ರತಿಕ್ರಿಯೆ (8)