ಭಾರತದಲ್ಲಿ ಒಬ್ಬ ಸತ್ಪ್ರಜೆಯ ಮಹತ್ವದ ಕಾಣಿಕೆಯ ಸ್ಮರಣರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಈ ದಿನ Feb ೨೮ ೧೯೨೮ನೇ ಇಸವಿ ಅಂದು ಸಿ.ವಿ. ರಾಮನ್ ಜಗತ್ತಿಗೆ ತಮ್ಮ ಪ್ರಸಿದ್ದ ಸಂಶೊಧನೆಯನ್ನು ಪ್ರಚಾರ ಪಡಿಸಿದರು. ಈ ಪರಿಶೋಧನೆಗಾಗಿ ಅವರಿಗೆ ೧೯೩೦ರ ಭೌತಶಾಸ್ತ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಕೂಡ ದೊರೆಯಿತು.
ಫ್ರೊಫ಼್ ಶ್ರೀ ಚಂದ್ರಶೇಖರ ವೆಂಕಟ ರಾಮನ್ ಅವರು "RAMAN’S EFFECT" (Raman scattering ) ಶೋಧನೆಯಬಗ್ಗೆ:
"ಬೆಳಕಿನ ವ್ಯಾಪ್ತಿ ದೃಷ್ಟಿಯ ಸಮ್ಬಮ್ಧಿಯ ಪ್ರಕರಣ, ಇದು ಬಹಳ ಕಾಲದಿಂದ ವಿದಿತವಾದದ್ದು. ಬೆಳಕಿನ ಕಿರಣಗಳು ಕಣ್ಣಿಗೆ ನೇರವಾಗಿ ಹೊಡೆಯುವ ಹೊರತು ಪ್ರತ್ಯಕ್ಷವಾದದ್ದಲ್ಲ. ಆದರೆ ಬೆಳಕಿನ ಕಿರಣಗಳ ಕಂತೆಯು ಅತಿರೇಕವಾಗಿ ಉತ್ಕೃಷ್ಟವಾದ ಧೂಳಿರುವ ಮಾಧ್ಯಮದ ಮೂಲಕ ಹಾದು ಹೋಗುವಾಗ, ಬೆಳಕಿನ ಕಿರಣಗಳು ಬದಿಗೆ ಚೆದುರುವುದು ಮತ್ತು ಕಿರಣದ ಪಥವನ್ನು ಮಧ್ಯಮದ ಮುಖಾಂತರ ಬದಿ ಇಂದ ಗುರುತಿಸಬಹುದು........"
ಸಿ.ವಿ.ರಾಮನ್ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದ್ದರು. ಆ ದಿನಗಳಲ್ಲಿ ಜನರಿಗೆ ವಿದ್ಯೆಯನ್ನು ಪಡೆಯಲು ತುಂಬ ತೊಂದರೆಗಳಿದ್ದವು. ಅವರ ತಂದೆ, ತಾಯಿ ಅಥವ ಸ್ವಥಃ ಅವರೇ ಎಲ್ಲೂ ಆಸ್ತಿಕಥೆ ಅಥವ ನಾಸ್ತಿಕಥೆಯ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ. ಬ್ರಾಹ್ಮಣರ ಕುಟುಂಬದಲ್ಲಿ, ಧಾರ್ಮಿಕ ಜನರ ಮಧ್ಯೆ ಜನಿಸಿದ್ದರಿಂದ ತನಗೆ ತೊಂದರೆಯಾಗಿದೆ ಎಂದು ಹೇಳದೆ ಅವರು ವಿಙ್ಞ್ನಾನಕ್ಕೆ ಬಹಳ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ.
ಯಾವುದೇ ಭಾರತೀಯ ತಾಯಿಯು ತನ್ನ ಮಗ/ಮಗಳು ವಿಙ್ಞ್ನಾನಿಯಾಗುತ್ತೇನೆಂದರೆ ಅವನಿಗೆ ಅಡ್ಡಿ ಪಡಿಸುವುದಿಲ್ಲ ಬದಲಿಗೆ ಅವಳು ಸಂತೋಷದಿಂದ ಎಲ್ಲಾ ಅವಶ್ಯಕವಿರುವುದನ್ನೆಲ್ಲಾ ಕೊಡಲು ಪ್ರಯತ್ನಿಸುತ್ತಾರೆ. ವಿಙ್ಞ್ನಾನದಲ್ಲಿ ಆಸಕ್ತರಾದ ಹುಡುಗ/ಹುಡುಗಿಯರು ತನ್ನ ತಾಯಿಯು ಭಜನೆ ಮಾಡುವುದರಿಂದ ಅಥವ ತನ್ನ ಅಜ್ಜಿಯು ಭಗವದ್ಗೀತೆ ಓದುವುದರಿಂದ ತನಗೆ ತೊಂದರೆ ಆಯಿತು ಎಂದು ಹೇಳುವುದಿಲ್ಲ, ಹೇಳಿದರೆ ಅದು ಸರಿಯೂ ಅಲ್ಲ. ತನ್ನ ವೈಙ್ಞ್ನಾನಿಕ ಙ್ಞಾನದ ಮುಂದುವರಿಕೆಗೆ ಶ್ರದ್ದೆಯಿಂದ ದೃಢವಾಗಿ ಕೇಂದ್ರೀಕರಿಸುತ್ತಾನೆ.
ಇವೆಲ್ಲದರ ನಡುವೆ ನಾನು ನನ್ನ ಧಾರ್ಮಿಕತೆಯು ನನಗೆ ವಿಙ್ಞ್ನಾವನ್ನು ಓದಲು ಅಡಚಣೆಯಾಗಿತ್ತೆ ಏಂದು ಪ್ರಶ್ನಿಸಿಕೊಂಡರೆ ಎಂದಿಗೂ ಇಲ್ಲವೆಂದು ಅನ್ನಿಸುತ್ತದೆ. ನೀವೂ ಈ ಪ್ರೆಶ್ನೆ ಹಾಕಿಕೊಂಡರೆ ನಿಮಗೂ ಉತ್ತರ ಸಿಗುತ್ತದೆ. ಹಿಂದೆ ಉಪನಿಶತ್ತಿನ ಕಾಲದಲ್ಲಿ ಕಂಡವರ ಮಾತು ಕೇಳು ಎನ್ನುತ್ತಿದ್ದರು, ಈಗಿನ ಜನ ಕಂಡುಕಂಡವರ ಮಾತು ಕೇಳುತ್ತಿದ್ದರೆ ಎನು ಸಾದನೆ ಮಾಡಲು ಸಾದ್ಯ? ಚಿಕ್ಕ ಮಗು ಸಾಂಗ್ಲಿಯಾನ ನೊಡಿದ ಮೇಲೆ ತಾನು ಪೋಲೀಸ್ ಆಗಬೇಕು, ಇಲ್ಲ ಅಂದ್ರೆ ಪೋಲೀಸ್ ಬಟ್ಟೆ ಬೇಕು ಅಂದಹಾಗೆ.....
ನಮ್ಮ ಕೊಡುಗೆ ವಿಙ್ಞ್ನಾನಕ್ಕೆ ಏನು ಎಂದು ಪ್ರೆಶ್ನಿಸಿಕೊಳ್ಳುವುದು ಒಳಿತು?
ವಿಙ್ಞಾನಕ್ಕೆ ಅಸ್ತಿತ್ವದಲ್ಲಿರುವ ವಿಚಾರ ಸರಣಿಯ ಅಥವ ಹೊಸ ವಿಷಯದ ಅನ್ವೇಷಣೆ ಮತ್ತು ಬೆಳವಣಿಗೆಯ ಅವಶ್ಯಕತೆ ಇದೆ ಹೊರತು ನಾವು ಆಸ್ತಿಕರೆ ಅಥವ ನಾಸ್ತಿಕರೆ ಎಂದಲ್ಲ!!!!! ಆಸ್ತಿಕ, ನಾಸ್ತಿಕ ಭಾರತಿಯ ವಿಙ್ಞಾನಕ್ಕೆ ೩ ಪೈಸ ಪ್ರಯೋಜನ ಇರದ ಪದಗಳು.
ಶಾಲೆಯಲ್ಲಿ ಹುಡುಗನಿಗೆ " ಸೂರ್ಯನ ಮಾಸ್ ಕಂಡುಹಿಡಿಯುವುದು ಹೇಗೆ ???" ಎಂದು ಕೇಳಿದರೆ ಅವನು ಆಸ್ತಿಕನಾಗಿರಲಿ ನಾಸ್ತಿಕನಾಗಿರಲಿ ಅದು ಅವನ ಸಹಾಯಕ್ಕೆ ಬರುವುದಿಲ್ಲ. ಈ ರೀತಿ ಪ್ರಶ್ನೆಗಳ ಬಗ್ಗೆ ಚರ್ಚಿಸುವುದು ಇಂದಿನ ದಿನಕ್ಕೆ ಶೋಬಿಸುತ್ತದೆ ವಿನ " ದೇವರು ....". ರಾಮನ್ ಇದ್ದಿದ್ದರೆ ನಕ್ಕಿರುತ್ತದರೊ ಎನೋ!!!!
ಒಳ್ಳೇ ವೈಙ್ಞಾನಿಕ ಪ್ರಶ್ನೆಗಳಿಂದ ಬುದ್ದಿ ವಿಕಸನವಾಗುತ್ತದೆ ನಿಜ, ಆದರೆ ಅದಕ್ಕೆ ವೈಙ್ಞಾನಿಕತೆ ಬೇಕು??? .ಯಾರಾದರು ನಿಮ್ಮ ರಾಷ್ತೀಯ ವೈಙ್ಞಾನಿಕ ದಿನಕ್ಕೆ ಏನು ಮಾಡಿದ್ರಿ ಎಂದರೆ ಉತ್ತರಿಸುವಂತಿರಬೇಕು!!!
ಭಾರತೀಯ ವೈಙ್ಞಾನಿಕತೆ ಹಿಂದುಳಿದಿರುವುದು, ಜನ ಮಾಡುವ ದೇವರ ಪೂಜೆಇಂದಲ್ಲ, ವಿಙ್ಞಾನ ಗೊತ್ತಿರೊರು ಅದರ ಬಗ್ಗೆಗಿನ ವಿಚಾರಗಳನ್ನು ಹಂಚಿಕೊಂಡು ತಮ್ಮ ದೇಶಕ್ಕೆ ಅಮೂಲ್ಯ ಕೊಡುಗೆ ನೀಡದಿರುವುದರಿಂದ.
ನಮ್ ಕಡೆ ಹಳ್ಲಿನಾಗ ಒಂದು ಗಾದೆ ಐತ್ರೀ .... ಕುಣಿಯೊರಬಗ್ಗೆ!! ಬರೆಯಾಕ್ಯಾಕೊ ಮನಸ್ ಒಪ್ತಿಲ್ಲ್ರಿ (ರಾಮನ್ ಬಗ್ಗೆ ಬರೆದಿದ್ದಿನಲ್ಲ ಅದಕ್ಕೆ ಎನೋ)....
ನಟ ಸಾರ್ವಭೌಮ ರಾಜಣ್ಣರವರ "ಬಂಗಾರದ ಮನುಷ್ಯ "ನೊಡ್ರಿ ಅದರಾಗೆ ಒಂದು ಖರೇ ಗಾನ "ಆಗದು ಎಂದು ಕೈಲಾಗದು ಎಂದು "....ಕೇಳ್ರಿಯಪ್ಪ "ಮಾಡೋನು ಎಲ್ಲಿದ್ದರು ಮಾಡುತ್ತಾನೆ ಸ್ವಾಮಿ."
ನಿಮ್ಮ ವೈಙ್ಞನಿಕ ಚಿಂತನೆಗಾಗಿ ೩ ಪ್ರಶ್ನೆಯನ್ನಿಟ್ಟಿದ್ದೇನೆ....
೧. ಭೂಮಿಯ ವ್ಯಾಸವನ್ನು ಕಂಡುಹಿಡಿಯುವುದು ಹೇಗೆ??
೨. ಸೂರ್ಯನ ಮಾಸ್ ಕಂಡುಹಿಡಿಯುವುದು ಹೇಗೆ ???
೩. Hubble Constant ಎಂದರೆನು?? ಅದನ್ನು ಎಲ್ಲಿ ಉಪಯೋಗಿಸುತ್ತೇವೆ??
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!