ಇವತ್ತು ಬೆಳಿಗ್ಗೆ ಮನೆಯಿಂದ ಆಪೀಸ್ ಗೆ ಬರುತ್ತಿರಬೇಕಾದರೆ ದಾರಿ ಮದ್ಯದಲ್ಲಿ ಒಂದು ಮುದ್ದಾದ ಹುಡುಗಿನ ನೋಡಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಪದಗಳ ಇಲ್ಲಿ ಕವನ ರೂಪ ಕೊಟ್ಟಿದ್ದೆನೆ ಅಷ್ಟೆ ,ಆ ಹುಡುಗಿ ಯಾರೆಂದು ಕೇಳಬ್ಯಾಡಿ ಏಕೆಂದರೆ ಅವರು ಯಾರು ಅಂತನೆ ಗೊತ್ತಿಲ್ಲ ,ಒಟ್ಟಿನಲ್ಲಿ ದೇವರು ಚೆನ್ನಾಗಿಟ್ಟಿರಲಿ ಆ ಹುಡುಗಿಯನ್ನು ಅಷ್ಟೆ.....
ಏನೆಂದು ನಾ ವರ್ಣಿಸಲಿ
ನಿನ್ನ ರೂಪವನು,
ನನ್ನ ಮೊದಲ ನೋಟಕ್ಕೆ
ಮನಸ್ಸಿನಲ್ಲಾದ ಭಾವನೆಯ
ಪರಿಯನು ,ನಾ ಏನೆಂದು ಕರೆಯಲಿ ನಿನ್ನಾ ,
ನೋಡುನೋಡುತ್ತಾ ನಾ ಯಾರೆಂದು
ಮರೆತ ಕ್ಷಣ ,ಸಾವಿರ ಕಣ್ಣುಗಳು
ನನ್ನ ನೋಡುತ್ತಿರಲು ಅದಾ ಮರೆತು
ನಿನ್ನ ನೋಡುತ್ತಿವೆ ನನ್ನೀ ಎರಡು ಕಣ್ಣುಗಳು
ಏನಾಯಿತು ಇಂದು ಎನಗೆ ,ಎಷ್ಟು ನೋಡಿದರೂ
ಮನಸಿನ ದಾಹ ಇಂಗಿಲ್ಲ ,ಎತ್ತ ಕಣ್ಣಾಡಿಸಿದರೂ
ಬೆಳದಿಂಗಳಂತೆ ಹೊಳೆವಾ ಚಲುವಿನ ನಿನ್ನಾ
ಪ್ರತಿಮೆಯೆ ಎದುರಲ್ಲಿ,
ಈ ದಿನ ಏಕೊ ನನಗೆ ಹೊಸದರಂತೆ
ಕಾಣುತ್ತಿದೆ , ಸಮಯ ಸಾಗುತ್ತಿದೆ ಮಂದಗತಿಯಲಿ
--ಗೌಡ್ರು
ಪ್ರತಿಕ್ರಿಯೆ (3)