ಹೋಳಿ ಹಬ್ಬ ಆಚರಣೆ ಮಜಾನೆ ಮಜಾ......
ಸ್ನೇಹಿತರೇ ನಮ್ಮ ಮರ ಸಂಸ್ಥೆಯಲ್ಲಿ ಹೋಳಿ ಹಬ್ಬದ ಆಚರಣೆಗೆ ನಿಮಗೆಲ್ಲಾ ಸಹ ಆಹ್ವಾನವನ್ನು ನೀಡಿದ್ದೆ. ನಮ್ಮ ಸಂಪದದಿಂದ ಯಾರೂ ಸಹ ಬರದೇ ಇದ್ದದ್ದರಿಂದ ಮೊದ ಮೊದಲು ನನಗೆ ತುಂಬಾನೇ ಬೇಸರವಾಗಿತ್ತು. ಆದ್ದರಿಂದ ಸಂಪದವನ್ನೇ ನೋಡುತ್ತಾ ಯಾರಾದ್ರು ಬರಬಹುದಾ ಅಂತ ಕುಂತಿದ್ದೆ. ಆ ಕಡೆ ನಮ್ಮ ಆಪೀಸಿನವರು ಬಣ್ಣವನ್ನು ಹಚ್ಚಿಕೊಳ್ಳುತ್ತಾ ಕುಣಿದಾಡುತ್ತಿದ್ದರು. ಅಷ್ಟರಲ್ಲಿ ನಮ್ಮ ಗೆಳೆಯರು ಸಹ ಕೆಲವರು ಬಂದಿದ್ದರು ಅವರು ಸಹ ಬಣ್ಣವನ್ನು ಚೆಲ್ಲಾಡುತ್ತಾ ಎಂಜಾಯ್ ಮಾಡ್ತಾ ಇದ್ರು,ಅವರಲ್ಲಿ ಒಬ್ಬರು ಬಂದು ಸಾರ್ ಹೋಳಿ ಹಬ್ಬದ ಬಗ್ಗೆ ಒಳ್ಳೆ ಹಾಡೊಂದನ್ನ ಪ್ಲೇ ಮಾಡಿ ಸಾರ್ ಅಂದ್ರು ನಾನು ಬಂಧನ ಚಿತ್ರದ ಬಣ್ಣ ನನ್ನ ಒಲವಿನ ಬಣ್ಣ........... ಹಾಡನ್ನ ಪ್ಲೇ ಮಾಡ್ತಾ ಇದ್ದೆ ಅಷ್ಟರಲ್ಲಿ ನನ್ನ ಮೇಲೆ ಬಣ್ಣವನ್ನು ಎಲ್ಲರೂ ಬಂದು ಚೆಲ್ಲಿದ್ದರು. ಇನ್ನೇನು ಮಾಡುವುದು ನಾನು ಅವರೊಟ್ಟಿಗೆ ಜೈ ಅನ್ನೋಣ ಅಂತ ಹಾಡನ್ನು ಪ್ಲೇ ಮಾಡಿ ಸೌಂಡ್ ಜಾಸ್ತಿ ಕೊಟ್ಟು ಅವರೊಟ್ಟಿಗೆ ಸೇರಿದೆ.
ಎಲ್ಲರೂ ಸಹ ಬಣ್ಣಗಳನ್ನು ಚೆಲ್ಲಾಡುತ್ತಾ ಕುಣಿದಾಡುತ್ತಾ ಇದ್ದೆವು ನಮ್ಮ ರಾಮ್ ಒಳಗೆ ಹೋಗಿ ವಿಡಿಯೋ ಕ್ಯಾಮರಾ ತರೋದಕ್ಕೆ ಹೋದ ಆದ್ರೆ ಅದರಲ್ಲಿ ಟೇಪೇ ಇರಲಿಲ್ಲ ಏನು ಮಾಡೊದು ಅಂತ ಯೋಚಿಸುತ್ತಿರುವಾಗ ನನಗೆ ಒಂದು ಐಡಿಯಾ ಬಂತು ನನ್ನ ಲ್ಯಾಪ್ ಟ್ಯಾಪ್ ಆನ್ ಮಾಡಿ ಅದರಿಂದ ವಿಡಿಯೋ ರೆಕಾರ್ಡ್ ಮಾಡಲು ಹೊರಟೆ. ಈ ವಿಡಿಯೋ ___LINK_OPEN_href="http://www.youtube.com/watch?v=dI2O2hrzwZU" target="_blank"___ಇಲ್ಲಿದೆ ನೋಡಿ. ಬಣ್ಣವನ್ನು ಚೆಲ್ಲಾಡಿ ನಂತರ ಸಮೋಸ ಮತ್ತು ಜಿಲೇಬಿ ತಿಂದೆವು ಆ ಖುಷಿಯಲ್ಲಿ ನಾನು ತೇಲಾಡುತ್ತಾ ನಿಮ್ಮನ್ನೆಲ್ಲಾ ನೆನಸಿಕೊಂಡ.
ವಿಡಿಯೋ___LINK_OPEN_href="http://www.youtube.com/watch?v=dI2O2hrzwZU" target="_blank"___ ನೋಡಿ
ಪ್ರತಿಕ್ರಿಯೆ (1)