ರಾತ್ರಿ ಮಲಗಲೆಂದು ಕೋಣೆಗೆ ಹೋಗಿ ಮಂಚದ ಮೇಲೆ ಬಿದ್ದೆ
ಅಲ್ಲಿ ತೆರದ ಕಿಟಕಿಯಾಚೆ ನಿಂತಿದ್ದ ಒಬ್ಬ ಪೋರ
ನನ್ನಂಥ ಅನೇಕ ಹುಡುಗಿಯರ ನಿದ್ದೆ ಕೆಡಿಸಿದ ಚೋರ
ನನ್ನನ್ನೇ ದಿಟ್ಟಿಸುತ್ತಾ……..
ನಾಚಿಕೆಯಿಂದ ಹಾಗೆ ಮುಖವನ್ನು ಮುಚ್ಚಿಕೊಂಡೆ….
ಅವನ ಪ್ರತಿಕ್ರಿಯೆ ಏನಿತ್ತೋ ನಾ ಕಾಣೆ
ಯಾಕೋ ಏನೋ ಅವನು ನನ್ನವನೇ ಅಲ್ಲವೇ ನೋಡಿದರೆ ತಪ್ಪೇನು????
ಎಂದು ಮುಸುಕು ಸರಿಸಿ ಅವನನ್ನೇ ನಾನೂ ದಿಟ್ಟಿಸಿದೆ……
ಅದು ಏನಾಯ್ತೋ ಏನೋ ಅವನೇ ನಾಚಿಕೆಯಿಂದ ಮೋಡಗಳ ಮುಸುಕೆಳೆದುಕೊಂಡುಬಿಟ್ಟ……
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)