ಕಳೆದ ಶನಿವಾರ ಬಸವನಗುಡಿಯ ಬ್ಯೂಗಲ್ ರಾಕ್ ಉದ್ಯಾನವನಕ್ಕೆ ಹೋಗಿದ್ದೆವು.

ಉದ್ಯಾನವನದಲ್ಲಿ ಸಂಜೆ ಹಕ್ಕಿಗಳ ಚಿಲಿಪಿಲಿ ಕೇಳಲು ಸುಮಧುರವಾಗಿತ್ತು. :)


ಆಗ ನನಗೆ ನೆನಪಾದ ಹಾಡು,

’ಹಕ್ಕಿ ಹಾಡು ಚಿಲಿಪಿಲಿ ರಾಗ

ಹರಿವ ನೀರ ಕಲರವ ...(ಮುಂದೆ ನೆನಪಿಲ್ಲ) :(

ಏನೇನೋ ಭಾವನೆ...’


ಈ ಹಾಡನ್ನು ಪಿ.ಸುಶೀಲಾ ಅವರು ತುಂಬಾ ಚೆನ್ನಾಗಿ ಹಾಡಿದ್ದಾರೆ.

ಸಂಗೀತ ಸತ್ಯಂ ಅವರದಿರಬೇಕು.

ಸಾಹಿತ್ಯ ಚಿ ಉದಯಶಂಕರ್ ಅವರದಿರಬೇಕು.


ಚಿತ್ರ ಯಾವುದು ಅಂತ ನೆನಪಿಲ್ಲ.


ಈ ಹಾಡಿನ ಪೂರ್ಣ ಸಾಹಿತ್ಯ ಯಾರಿಗಾದರೂ ಗೊತ್ತಿದೆಯಾ?


ಶನಿವಾರದಿಂದ ಈ ಹಾಡಿನ ಬಗ್ಗೆ ತಲೆಯಲ್ಲಿ ಹುಳ, ಅಲ್ಲ ಹೆಬ್ಬಾವು ಬಿಟ್ಕೊಂಡಿದ್ದೀನಿ. :(


ಈ ಹಾಡಿನ ಬಗ್ಗೆ ಮಾಹಿತಿಯಿದ್ದರೆ, ದಯವಿಟ್ಟು ಹಂಚಿಕೊಳ್ಳಿರಿ.

ನನ್ನ ತಲೆಯಲ್ಲಿರುವ ಹೆಬ್ಬಾವನ್ನು ಓಡಿಸಿರಿ.


ಧನ್ಯವಾದಗಳು (ಮುಂಚಿತವಾಗಿ).