ಇಂದು ನಾವು ಮುಕ್ತಿ ,ಮೋಕ್ಷ , ಐಕ್ಯ ಇವುಗಳ ಬಗ್ಗೆ ಭ್ರಮೆಯುಳ್ಳೈವರಾಗಿದ್ದೇವೆ. ಮೋಕ್ಷಕ್ಕೆ 'ತನ್ನ' ದಾರಿಯೊಂದೆ ಸರಿ, ಉಳಿದದ್ದೆಲ್ಲ ತಪ್ಪು ದಾರಿಗಳು ಅನ್ನೋ ವಾದವನ್ನು ಕೇಳಿದ್ದೇನೆ. ತನ್ನ ದೇವರೇ ಸರ್ವೋತ್ತಮ, ಹಾಗಾಗಿ ತಾನು ಶ್ರೇಷ್ಠ ,ಉಳಿದವರು ಕೀಳು ಅನ್ನೋ ಕೀಳು ಮತಾಂಧರನ್ನು ಅನೇಕರನ್ನು ನೋಡಿದ್ದೇನೆ.

 

ಆ ದೇವರ ಒಲುಮೆಗಾಗಿ ಮತ್ತು ಇನ್ನು ಕೆಲವರು ಮುಕ್ತಿಗಾಗಿ ಏನೆಲ್ಲಾ ಸರ್ಕಸ್ ಮಾಡ್ತಾರೆ ಅನ್ನುವುದು ನಮಗೆ ಗೊತ್ತು. ಈ ಸರ್ಕಸ್ಗಳು ಆವಶ್ಯಕವೇ ಅಂತ ಒಮ್ಮೆ ಯೋಚಿಸುವುದು ಒಳ್ಳೆಯದು.

 

ಅಲ್ಲಮ ಪ್ರಭುಗಳ ಈ ವಚನ ನನಗೆ ತುಂಬ ಇಷ್ಟವಾಗುತ್ತೆ.

ಸುತ್ತಿಸುತ್ತಿಬಂದಡಿಲ್ಲ, ಲಕ್ಷ್ಯಗಂಗೆಯಮಿಂದಡಿಲ್ಲ,

ತೊಟ್ಟತುದಿಯಮೇರುಗಿರಿಯಮೆಟ್ಟಿಕೂಗಿದಡಿಲ್ಲಾಇಲ್ಲಾ

ನಿತ್ಯನೇಮದಿಂದತನುವಮುಟ್ಟಿಕೊಂಡಡಿಲ್ಲಾ

ನಿಚ್ಚಕ್ಕಿನಗಮನವಂಗಲ್ಲಿಗೆ

ಅತ್ತಲಿತ್ತಹರಿವಮನವ ಚಿತ್ತದಲೀನಿಲಿಸಬಲ್ಲಡೆ

ಬಚ್ಚಬರಿಯಬೆಳಗುಗುಹೇಶ್ವರನೆಂಬಲಿಂಗವು

 

Get this widget | ___LINK_OPEN_align="center" href="http://www.esnips.com/doc/1f9e7feb-06c7-4dec-9209-88848d299f65/Sutti-Sutti-bandadilla/?widget=flash_player_esnips_blue"___ Track details | ___LINK_OPEN_align="center" href="http://www.esnips.com//adserver/?action=visit&cid=player_dna&url=/socialdna"___ eSnips Social DNA

*ನಿಚ್ಚಕ್ಕಿನ ಗಮನವಂಗಲ್ಲಿಗೆ ... ಈ ಪದದ ಅರ್ಥ ಆಗಲಿಲ್ಲ. ತಿಳಿದವರು ಬರೆಯಿರಿ.
ಬಯಲಿನ ಬಗ್ಗೆ , ಸಮಾಧಿಯ ಬಗ್ಗೆ , ಇನ್ನೂ ಸರಳ ವಾಗಿ ಹೇಳಲು ಆಗದೇನೋ!