subhashita1

ಸು-

ಸಂಸ್ಕೃತ ವ್ಯಾಕರಣದ ಮೇಷ್ಟ್ರು ‘ಮನಸ್ಸು’ ನಪುಂಸಕ

ವೆಂದ ಹಳೆಯ ಪಾಠದ ನೆನಪು ಮರುಕಳಿಸಿದ್ದೇ ಹುಂಬನಂತೆ

ಎಗ್ಗಿಲ್ಲದೆ ಅಲೆದಾಡಲು ಬಿಟ್ಟುಕೊಂಡೆ ಅವಳನ್ನು

ನನ್ನ ಮನದ

ಗೂಡೊಳಗೆ

ಏಕಾಂತದ ಸಂಗದಲ್ಲಿ ಅವಳಂಗದ

ಅನಂಗವಾಸನೆ ಹಾಗು ಸೋಂಕಿನೊತ್ತಲ್ಲೇ

ಮುಳುಗಿ ಮೈ

ಮರೆತು ಎಚ್ಚರ

ವಾಗಿದ್ದು

ಅವಳೊದ್ದು ಹೋಗುತ್ತ ಕತ್ತು ಕೊಂಕಿಸಿದಾಗ-

‘ಕವಿಯಾದರೇನು, ಗಂಡುಮನವೇ ಇಷ್ಟು’ ಎಂದು

ಮೆದುಳಿಗೆಳೆದ ಬರೆ

ಗೆಲ್ಲಾ ಮದ್ದು ಹೇಳಲು ಮೇಷ್ಟರಿಗೇನು

ಗೊತ್ತಿತ್ತು ಈ

ವ್ಯಾಕರಣದ ಜಿಗುಟು.

[ಇದಕ್ಕೆ ಸ್ಪೂರ್ತಿಯಾದ ಧರ್ಮಕೀರ್ತಿಯ ಮೂಲ ಸಂಸ್ಕೃತ ಸುಭಾಷಿತದ ಎರಡು ಭಿನ್ನ ಪಾಠವನ್ನು ಹಾಗು ನನಗೆ ಸಹಾಯವಾದ ಮೂರು ಭಿನ್ನ ಇಂಗ್ಲೀಷ್ ಅನುವಾದವನ್ನು http://anivaasi.wordpress.com ನಲ್ಲಿ ನೋಡಬಹುದು]